ಬೆಂಗಳೂರು : ʼಕಾಂತಾರʼ ಯಶಸ್ಸಿನ ಖುಷಿಯಲ್ಲಿರುವ ನಟಿ ಸಪ್ತಮಿಗೌಡ ಅವರ ಫ್ಯಾನ್ಸ್‌ ಫಾಲೋಯಿಂಗ್‌ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮೂಗುತಿ ಸುಂದರಿಯ ತುಂಟಾಟ, ಮುಗ್ದ ನಗುವಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಟನೆಯಷ್ಟೇ ಅಲ್ಲದೆ ಸ್ವಿಮ್ಮಿಂಗ್‌ನಲ್ಲೂ ಮುಂದಿರುವ ಲೀಲಾ ಸದ್ಯ ಬ್ಯಾಟ್‌ ಹಿಡಿದು ಸಖತ್‌ ಶಾಟ್‌ ಹೊಡೆದಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.


COMMERCIAL BREAK
SCROLL TO CONTINUE READING

ಹೌದು.. ದಿ ಡಿವೈನ್‌ ಬ್ಲಾಕ್‌ಬಸ್ಟರ್ ಚಲನಚಿತ್ರ ಕಾಂತಾರದಲ್ಲಿ ಶಿವನ ಪ್ರೇಯಸಿಯಾಗಿ ನಟಿಸಿರುವ ಸಪ್ತಮಿಗೌಡ ನಟನೆಯಿಂದಲೇ ಕನ್ನಡಗರು ಸೇರಿದಂತೆ ಭಾರತೀಯ ಸಿನಿರಸಿಕರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲದೆ, ಕಾಂತಾರ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ನಂತರ ಸಪ್ತಮಿ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಬಹು ದೊಡ್ಡ ಫ್ಯಾನ್‌ ಬೇಸ್‌ ಕ್ರಿಯೇಟ್‌ ಆಗಿದೆ. ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ನಟಿ ಕಾಂತಾರದ ಲೀಲಾ ಆಗಿಯೇ ಫೇಮಸ್‌ ಆಗಿದ್ದಾರೆ.


ಇದನ್ನೂ ಓದಿ: Tamannaah Bhatia : ತಮನ್ನಾಗೆ ಕೂಡಿ ಬಂತು ಕಂಕಣ ಭಾಗ್ಯ? ಇವರೇ ಆ ಲಕ್ಕಿ ಮ್ಯಾನ್‌.!



ಇನ್ನು ನಟನೆ ಅಷ್ಟೇ ಅಲ್ಲದೆ, ಸಪ್ತಮಿ ಒಳ್ಳೆಯ ಸ್ವಿಮ್ಮರ್‌ ಕೂಡಾ ಹೌದು. ಇನ್ನು ಕ್ರಿಡೆಯಲ್ಲಿ ಬಹಳ ಆಸಕ್ತಿ ಹೊಂದಿರುವ ನಟಿ ಕ್ರಿಕೆಟ್‌ ಆಡುತ್ತಿರುವ ವಿಡಿಯೋ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಬ್ಯಾಟ್‌ ಬೀಸಿದ ಅವರ ಪರಿ ನೋಡಿ ಅಭಿಮಾನಿಗಳು ಸೂಪರ್‌ ಎನ್ನುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟಿವ್‌ ಇರುವ ನಟಿ ಇತ್ತೀಚಿಗೆ ಸಾಂಪ್ರದಾಯಿಕ ಉಡುಗೆ ತೊಟ್ಟು ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದರು. ಫೋಟೋಸ್‌ ನೋಡಿದ ಅಭಿಮಾನಿಗಳು ಕಾಮೆಂಟ್‌ ಮಳೆ ಸುರಿಸುತ್ತಿದ್ದಾರೆ.


ಸದ್ಯ ಸಪ್ತಮಿ ಗೌಡ ಮಂಗಳೂರು ಕ್ಷೇತ್ರ ದರ್ಶನ ಮಾಡುತ್ತಿದ್ದಾರೆ. ಬುಧವಾರ ಬೆಳಗ್ಗೆ ಜಿಲ್ಲೆಯ ಅಧಿದೇವತೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನಟಿ ಸಪ್ತಮಿ ಗೌಡ ಭೇಟಿ ನೀಡಿದ್ದಾರೆ. ಸಪ್ತಮಿ ಗೌಡ ಅವರ ಜೊತೆ ನಟ ಸನಿಲ್ ಗುರು, ಸಪ್ತಮಿ  ತಾಯಿ ಶಾಂತಿ ಕೂಡ ಇದ್ದರು. ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ದೇವಳದ ಅರ್ಚಕರು ಸಪ್ತಮಿ ಗೌಡ ಅವರಿಗೆ ದೇವರ ಶೇಷ ವಸ್ತ್ರ ಪ್ರಸಾದ ನೀಡಿ ಗೌರವಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.