ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ ದರ್ಶನ್‌ ಅವರದ್ದು

ದರ್ಶನ್‌ ಕನ್ನಡಾಭಿಮಾನಿಗಳ ಹೃದಯದ ಯಜಮಾನ. ಅಭಿಮಾನಿಗಳ ನೆಚ್ಚಿನ ದಾಸ. ತನ್ನವರಿಗಾಗಿ ಸದಾ ಮಿಡಿಯುವ ನಮ್ಮ ಪ್ರೀತಿಯ ರಾಮು. ಈ ಮಾತು ಬರಿ ಅಭಿಮಾನಿಗಳಿಗೆ ಮೀಸಲಾಗಿಲ್ಲ. ತಾನೂ ಬೆಳೆದು ತನ್ನ ಜೊತೆಗಿರುವ ಇತರನ್ನು ಬೆಳೆಸುವ ದೊಡ್ಡ ಮನಸ್ಸಿನ ದೊರೆ ದರ್ಶನ್‌ ಚಿತ್ರರಂಗದ ಅನೇಕ ಕಲಾವಿದರಿಗೆ ಹೆಗಲಾಗಿದ್ದಾರೆ. ಟ್ರೈಲರ್‌, ಟೀಸರ್‌, ಸಿನಿಮಾದಲ್ಲಿ ಅತಿಥಿ ಪಾತ್ರ ಎನಕ್ಕಾದ್ರೂ ಪ್ರೀತಿಯಿಂದ ಕರೆದ್ರೆ ಬರುತ್ತಾರೆ D Boss.

Written by - Krishna N K | Last Updated : Nov 16, 2022, 12:19 PM IST
  • ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ ದರ್ಶನ್‌ ಅವರದ್ದು
  • ದರ್ಶನ್‌ ಕನ್ನಡಾಭಿಮಾನಿಗಳ ಹೃದಯದ ಯಜಮಾನ
  • ದಾಸನ ಈ ಗುಣವೇ ಅಭಿಮಾನಿಗಳ ಹೃದಯದ ಸಾಮ್ರಾಟನನ್ನಾಗಿ ಮಾಡಿದ್ದು.
ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ ದರ್ಶನ್‌ ಅವರದ್ದು

ಬೆಂಗಳೂರು : ದರ್ಶನ್‌ ಕನ್ನಡಾಭಿಮಾನಿಗಳ ಹೃದಯದ ಯಜಮಾನ. ಅಭಿಮಾನಿಗಳ ನೆಚ್ಚಿನ ದಾಸ. ತನ್ನವರಿಗಾಗಿ ಸದಾ ಮಿಡಿಯುವ ನಮ್ಮ ಪ್ರೀತಿಯ ರಾಮು. ಈ ಮಾತು ಬರಿ ಅಭಿಮಾನಿಗಳಿಗೆ ಮೀಸಲಾಗಿಲ್ಲ. ತಾನೂ ಬೆಳೆದು ತನ್ನ ಜೊತೆಗಿರುವ ಇತರನ್ನು ಬೆಳೆಸುವ ದೊಡ್ಡ ಮನಸ್ಸಿನ ದೊರೆ ದರ್ಶನ್‌ ಚಿತ್ರರಂಗದ ಅನೇಕ ಕಲಾವಿದರಿಗೆ ಹೆಗಲಾಗಿದ್ದಾರೆ. ಟ್ರೈಲರ್‌, ಟೀಸರ್‌, ಸಿನಿಮಾದಲ್ಲಿ ಅತಿಥಿ ಪಾತ್ರ ಎನಕ್ಕಾದ್ರೂ ಪ್ರೀತಿಯಿಂದ ಕರೆದ್ರೆ ಬರುತ್ತಾರೆ D Boss.

ಹೌದು.. ಈ ಮಾತು ಯಾಕೆ ಹೇಳ್ತಿದೀವಿ ಅಂದ್ರೆ. ಇತ್ತೀಚಿಗೆ ಹಿರೇಕೆರೂರಿನಲ್ಲಿ ನಡೆದ ಸಚಿವ ಬಿ.ಸಿ. ಪಾಟೀಲ್‌ ಅವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ದರ್ಶನ್‌ ಅವರು ಮಾತನಾಡುತ್ತಾ.. ಗಣ್ಯರ ಹಿಂದೆ ನಿಂತಿದ್ದ ನಟ ಧರ್ಮಣ್ಣನನ್ನು ಮುಂದೆ ಕರೆದು, ನಮ್ಮ ಧರ್ಮಣ್ಣ ಒಳ್ಳೆ ಕಲಾವಿದ. 'ಕ್ರಾಂತಿ' ಚಿತ್ರದಲ್ಲಿ ಅವರ ಪಕ್ಕದಲ್ಲಿ ನಾನು ಒಂದು ಕ್ಯಾರೆಕ್ಟರ್ ಮಾಡಿದ್ದೀನಿ ಅಂತ ಸರಳತೆ ಮೆರೆದರು. ದಾಸನ ಈ ಗುಣವೇ ಅಭಿಮಾನಿಗಳ ಹೃದಯದ ಸಾಮ್ರಾಟನನ್ನಾಗಿ ಮಾಡಿದ್ದು.

ಇದನ್ನೂ ಓದಿ: ನೀನು ನನ್ನ ಸ್ವೀಟೆಸ್ಟ್‌ ಜೀವದ ಗೆಳೆಯ : ರಮ್ಯಾ-ಸುದೀಪ್‌ ವಿಡಿಯೋ ವೈರಲ್‌..!

ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಕ್ರಾಂತಿ ಸಿನಿಮಾ ಬಿಡುಗಡೆಯಾಗಲಿದೆ. ದರ್ಶನ್‌ ಜೊತೆಗೆ ರಚಿತಾ ರಾಮ್‌, ವಿ.ರವಿಚಂದ್ರನ್‌, ಬಹುಭಾಷಾ ನಟ ಸಂಪತ್‌ ರಾಜ್‌ ನಟಿಸಿದ್ದಾರೆ. ಅಲ್ಲದೆ, ʼಕ್ರಾಂತಿʼ ಅಭಿಪ್ರಾಯ ಹಂಚಿಕೊಂಡಿದ್ದ ದರ್ಶನ್‌ ಅವರು, ನಾವು ದೊಡ್ಡ ಸಿನಿಮಾ ಮಾಡಿಬಿಟ್ಟಿದ್ದೇವೆ, ಎಲ್ಲಾ ಸಿನಿಮಾಗಳನ್ನು ಹಿಂದಿಕ್ಕುವಂತ ಚಿತ್ರ ಮಾಡಿದ್ದೇವೆ ಎಂದು ಹೇಳುವುದಿಲ್ಲ. ಆದ್ರೆ, ಒಂದೊಳ್ಳೆ ಸಿನಿಮಾ ಮಾಡಿದ್ದೇವೆ ಎಂದು ಹೇಳೋಕೆ ಇಷ್ಟ ಪಡ್ತೀನಿ ಎಂದು ಹೇಳಿದ್ದರು.

ಸದ್ಯ ದರ್ಶನ್‌ ಅವರ ಕ್ರಾಂತಿ ಸಿನಿಮಾವನ್ನು ಅವರ ಅಭಿಮಾನಿಗಳೇ ಬರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಜನವರಿ 26ಕ್ಕೆ ಸಿನಿಮಾ ತೆರೆಗೆ ಬರಲಿದೆ. ವಿ. ಹರಿಕೃಷ್ಣ ನಿರ್ದೇಶನದ ʼಕ್ರಾಂತಿʼಗೆ ಶೈಲಜಾ ನಾಗ್ ಹಾಗೂ ಬಿ. ಸುರೇಶ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ದರ್ಶನ್‌ ಅಭಿಮಾನಿಗಳಿಗೆ ಇನ್ನೊಂದು ಖುಷಿ ವಿಚಾರ ಅಂದ್ರೆ ತರುಣ್‌ ಸುದೀಪ್‌ ಅವರ ನಿರ್ದೇಶನದಲ್ಲಿ D56 ಸಿನಿಮಾ ಬರಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News