Godfather Collections Vs Kantara Collections : ತೆಲುಗಿನಲ್ಲಿ ಕಾಂತಾರ ಸಿನಿಮಾದ ಜನಪ್ರಿಯತೆಯ ಬಗ್ಗೆ ಹೇಳ ಬೇಕಿಲ್ಲ, ಅಷ್ಟೊಂದು ಮೆಚ್ಚುಗೆಗೆ ಈ ಸಿನಿಮಾ ಪಾತ್ರವಾಗಿದೆ. ಕನ್ನಡದಲ್ಲಿ ಕಾಂತಾರ ಚಿತ್ರ ಮೊದಲ ದಿನ ಕಲೆಕ್ಷನ್ ಮಾಡಿದ್ದು ಬರೋಬ್ಬರಿ ಎರಡು ಕೋಟಿ. ಸೆಪ್ಟೆಂಬರ್ 30 ರಂದು ಕನ್ನಡದಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ತೆಲುಗಿನಲ್ಲಿ ಅಕ್ಟೋಬರ್ 15 ರಂದು ಬಿಡುಗಡೆಯಾಗಿದೆ. ಕಾಂತಾರ ತೆಲುಗಿನಲ್ಲಿ ಬ್ಲಾಕ್ ಬಸ್ಟರ್ ಟಾಕ್ ಆಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Nayanatara : 6 ವರ್ಷಗಳ ಹಿಂದೆಯೇ ಮದುವೆಯಾಗಿದ್ರು ನಯನತಾರಾ!?


ಕಾಂತಾರ ಗಾಡ್ ಫಾದರ್ ಗೂಡು ತಲುಪಿದಂತಿದೆ. ವಾಸ್ತವವಾಗಿ ಗಾಡ್ ಫಾದರ್ ಸಿನಿಮಾ ಸದ್ಯ ಕ್ರೇಜ್‌ ಕ್ರಿಯೇಟ್‌ ಮಾಡಿದೆ. ಮೊದಲ ವಾರದಲ್ಲಿ ಕಲೆಕ್ಷನ್ ಸಾಧಾರಣವಾಗಿತ್ತು. ಎರಡನೆ ವಾರದಲ್ಲಿ ಚಿಕ್ಕ ಚಿಕ್ಕ ಚಿತ್ರಗಳು ಬಂದಿದ್ದರಿಂದ ಗಾಡ್‌ಫಾದರ್‌ಗೆ ಅಷ್ಟೇನು ಟಕ್ಕರ್‌ ಕೊಡಲಿಲ್ಲ. ಆಮೇಲೆ ತೆಲುಗಿನಲ್ಲಿ ರಿಲೀಸ್‌ ಆದ ಕಾಂತಾರ ಚಿತ್ರ ಗಾಡ್‌ಫಾದರ್‌ ಜೊತೆ ರೇಸ್‌ನಲ್ಲಿದೆ.


ಕಾಂತಾರ ಮೇಲೆ ಈಗಾಗಲೇ ಇದ್ದ ಕ್ರೇಜ್ ತೆಲುಗಿನಲ್ಲಿ ಈ ಸಿನಿಮಾ ನೋಡಲು ಹಲವರಿಗೆ ಪ್ರೇರೆಪಿಸಿತು. ಹಾಗಾಗಿ ಈ ಕಾಂತಾರ ತೆಲುಗಿನಲ್ಲಿ ಮೊದಲ ದಿನವೇ ಬ್ಲಾಕ್ ಬಸ್ಟರ್ ಹಿಟ್‌ ಪಡೆದುಕೊಂಡಿದೆ. ಕಲೆಕ್ಷನ್ ಕೂಡ ದೊಡ್ಡದಿದೆ. ಆದರೆ ಈ ಕಲೆಕ್ಷನ್ ಗಳ ರೇಂಜ್ ಗಾಡ್ ಫಾದರ್ ಸಿನಿಮಾವನ್ನು ಹಿಂದಿಕ್ಕುವಂತಿದೆ. ರಿಷಬ್ ಶೆಟ್ಟಿ ಅಭಿನಯಕ್ಕೆ ತೆಲುಗು ಜನ ಫಿದಾ ಆಗಿದ್ದಾರೆ. ಅಲ್ಲದೇ ಎರಡನೇ ದಿನವೂ ಈ ಚಿತ್ರ ಜನಪ್ರಿಯತೆ ಪಡೆದಿದೆಯಂತೆ.


ಇದನ್ನೂ ಓದಿ : Suicide Cases: ಆತ್ಮಹತ್ಯೆಗೆ ಶರಣಾದ ಸಿನಿಮಾ ರಂಗದ ತಾರೆಯರಿವರು.. ಹಲವರ ಸಾವು ನಿಗೂಢ!


ಕಾಂತಾರ ಸಿನಿಮಾದಲ್ಲಿ ಮೊದಲ ದಿನಕ್ಕಿಂತ ಎರಡನೇ ದಿನ ಹೆಚ್ಚು ಕಲೆಕ್ಷನ್ ಆಗಿದೆಯಂತೆ. ಕನಿಷ್ಟ ಐದು ಕೋಟಿ ಗಳಿಕೆ ಆಗಿದೆಯಂತೆ. ಹಾಗಾಗಿ ಕಾಂತಾರ ಮೊದಲ ದಿನದ ಕಲೆಕ್ಷನ್‌ನಲ್ಲಿಯೇ ಗಾಡ್ ಫಾದರ್ ಚಿತ್ರವನ್ನು ಹಿಂದಿಕ್ಕಿದಂತಾಗಿದೆ. ಕಾಂತಾರ ಮೊದಲ ದಿನ ಐದು ಕೋಟಿ ಗಳಿಸಿದರೆ, ಗಾಡ್ ಫಾದರ್ ಚಿತ್ರ 11ನೇ ದಿನಕ್ಕೆ ಕೋಟಿ ಕೂಡ ತಲುಪಲಿಲ್ಲ. ಒಟ್ಟಾರೆ ಕಾಂತಾರ ಜನರ ಮೆಚ್ಚುಗೆ ಮಾತ್ರವಲ್ಲ ಗಲ್ಲಾಪೆಟ್ಟಿಗೆಯಲ್ಲಿಯೂ ತನ್ನ ಆರ್ಭಟ ಮುಂದುವರೆಸಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ