ʼಕಾಂತಾರʼದ ಅಬ್ಬರಕ್ಕೆ ಕರಾವಳಿ ಬೆಡಗಿ ಫಿದಾ : ರಿಷಬ್‌ ನಟನೆಗೆ ಅನುಷ್ಕಾ ಶೆಟ್ಟಿ ಮೆಚ್ಚುಗೆ...!

ಕಾಂತಾರ ಸಿನಿಮಾದ ಕ್ರೇಜ್‌ ಭಾರತೀಯ ಸಿನಿ ಪ್ರೇಕ್ಷಕರನ್ನು ಚಿತ್ರಮಂದಿರದ ಮುಂದೆ ಟಿಕೆಟ್‌ಗಾಗಿ ಕಾಯ್ದು ನಿಲ್ಲುವಂತೆ ಮಾಡುತ್ತಿದೆ. ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಸಿನಿಮಾವನ್ನು ಚಿತ್ರರಂಗದ ದಿಗ್ಗಜರು, ರಾಜಕೀಯ ಗಣ್ಯರು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಸದ್ಯ ಕರಾವಳಿ ಬೆಡಗಿ ಕನ್ನಡತಿ ಅನುಷ್ಕಾ ಶೆಟ್ಟಿ ಕಾಂತಾರವನ್ನು ಹಾಡಿ ಹೊಗಳಿದ್ದಾರೆ.

Written by - Krishna N K | Last Updated : Oct 16, 2022, 07:20 PM IST
  • ʼಕಾಂತಾರʼ ಸಿನಿಮಾಗೆ ಕರಾವಳಿ ಬೆಡಗಿ ಫಿದಾ ಅನುಷ್ಕಾ ಶೆಟ್ಟಿ ಮೆಚ್ಚುಗೆ
  • ರಿಷಬ್‌ ನಟನೆ ಮತ್ತು ಚಿತ್ರತಂಡಕ್ಕೆ ಅಭಿನಂದನೆ ತಿಳಿಸಿದ ದೇವಸೇನಾ
  • ಅನುಷ್ಕಾ ಶೆಟ್ಟಿಯವರಿಗೆ ಕರಾವಳಿ ಸಂಪ್ರದಾಯ ತುಂಬಾ ಹತ್ತಿರ
 ʼಕಾಂತಾರʼದ ಅಬ್ಬರಕ್ಕೆ ಕರಾವಳಿ ಬೆಡಗಿ ಫಿದಾ : ರಿಷಬ್‌ ನಟನೆಗೆ ಅನುಷ್ಕಾ ಶೆಟ್ಟಿ ಮೆಚ್ಚುಗೆ...! title=

ಬೆಂಗಳೂರು : ಕಾಂತಾರ ಸಿನಿಮಾದ ಕ್ರೇಜ್‌ ಭಾರತೀಯ ಸಿನಿ ಪ್ರೇಕ್ಷಕರನ್ನು ಚಿತ್ರಮಂದಿರದ ಮುಂದೆ ಟಿಕೆಟ್‌ಗಾಗಿ ಕಾಯ್ದು ನಿಲ್ಲುವಂತೆ ಮಾಡುತ್ತಿದೆ. ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಸಿನಿಮಾವನ್ನು ಚಿತ್ರರಂಗದ ದಿಗ್ಗಜರು, ರಾಜಕೀಯ ಗಣ್ಯರು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಸದ್ಯ ಕರಾವಳಿ ಬೆಡಗಿ, ಕನ್ನಡತಿ ಅನುಷ್ಕಾ ಶೆಟ್ಟಿ ಕಾಂತಾರವನ್ನು ಹಾಡಿ ಹೊಗಳಿದ್ದಾರೆ.

ಹೌದು, ಅನುಷ್ಕಾ ಶೆಟ್ಟಿಗೆ ಕರಾವಳಿ ಸಂಪ್ರದಾಯ ತುಂಬಾ ಹತ್ತಿರ. ದಕ್ಷಿಣ ಕನ್ನಡ ಭಾಗದಲ್ಲಿ ಹುಟ್ಟಿದ ಬಾಹುಬಲಿ ದೇವಸೇನಾ ಸದ್ಯ ಕಾಂತಾರ ಸಿನಿಮಾ ನೋಡಿದ್ದು, ಚಿತ್ರತಂಡ ಹಾಗೂ ನಟ ನಿರ್ದೇಶಕ ರಿಷಬ್‌ ಶೆಟ್ಟಿಯವರಿಗೆ ಅದ್ಭುತ ಸಿನಿಮಾ ನೀಡಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ ಯಶಸ್ವಿ ಬೆನ್ನಲ್ಲೆ ಕಾಂತಾರ ಓಟ ಶುರುವಾಗಿದ್ದು, ಅನ್ಯರಾಜ್ಯಗಳಲ್ಲೂ ರಿಷಬ್‌ ಸಿನಿಮಾ ಅಬ್ಬರಿಸುತ್ತಿದೆ.

ಇದನ್ನೂ ಓದಿ: ʼಸಲಾರ್‌ ಜಗತ್ತಿನ ವಿಲನ್‌ ಪೋಸ್ಟರ್‌ ರಿಲೀಸ್‌ʼ : ಪೃಥ್ವಿರಾಜ್‌ ಖಡಕ್‌ ಲುಕ್‌ಗೆ ಫ್ಯಾನ್ಸ್‌ ಶಾಕ್‌...!

ಹಿಂದಿಯಲ್ಲಿ ಬಿಡುಗಡೆಯಾದ ಸಿನಿಮಾಗೆ ಅದ್ಭುತ ರೆಸ್ಪಾನ್ಸ್‌ ಸಿಕ್ಕಿದೆ. ಇತ್ತ ತೆಲುಗಿನಲ್ಲೂ ಕಾಂತಾರದ ಹೈಪ್‌ ಜೋರಾಗಿದೆ. ಈ ಹಿಂದೆ ಎರಡು ಬಾರಿ ಸಿನಿಮಾ ನೋಡಿ ನಟ ಪ್ರಭಾಸ್‌ ಮೆಚ್ಚಿಕೊಂಡಿದ್ದರು. ತಮಿಳು ನಟ ಧನುಷ್‌ ಅವರು ಸಹ ಕಾಂತಾರದ ಕುರಿತು ಮಾತನಾಡಿದ್ದರು. ಸದ್ಯ ಕಾಂತಾರ ಬಗ್ಗೆ ಅನುಷ್ಕಾ ಅವರು ತಮ್ಮ ಟ್ಟಿಟರ್‌ ಖಾತೆಯಲ್ಲಿ ಮೆಚ್ಚುಗೆಯ ಬರಹಗಳನ್ನು ಬರೆದುಕೊಂಡಿದ್ದಾರೆ. ದಕ್ಷಿಣ ಕನ್ನಡದಲ್ಲೇ ಹುಟ್ಟಿದ ಅನುಷ್ಕಾ ಅವರಿಗೆ ಕರಾವಳಿ ಸಂಪ್ರದಾಯ ತಿಳಿದಿರುತ್ತದೆ. ಹೀಗಾಗಿ ಅವರೂ ಕೂಡ ಕಾಂತಾರ ಸಿನಿಮಾಕ್ಕೆ ಫಿದಾ ಆಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News