Nayanatara : 6 ವರ್ಷಗಳ ಹಿಂದೆಯೇ ಮದುವೆಯಾಗಿದ್ರು ನಯನತಾರಾ!? ಬಾಡಿಗೆ ತಾಯ್ತನ ಕೇಸ್‌ಗೆ ರೋಚಕ ಟ್ವಿಸ್ಟ್​!!

Nayanatara : ನಯನತಾರಾ ಮತ್ತು ವಿಘ್ನೇಶ್ ಶಿವನ್ ಇತ್ತೀಚೆಗೆ ಅವಳಿ ಮಕ್ಕಳ ಪೋಷಕರಾಗಿದ್ದಾರೆ. ಮದುವೆಯಾದ 4 ತಿಂಗಳಲ್ಲೇ ಬಾಡಿಗೆ ತಾಯ್ತನದಿಂದ ಮಕ್ಕಳನ್ನು ಪಡೆದ ಈ ದಂಪತಿ ಸದ್ಯ ಸಂಕಷ್ಟದಲ್ಲಿದ್ದಾರೆ. ಇದೇ ವೇಳೆ ಈ ವಿಚಾರವಾಗಿ ಒಂದು ಸುದ್ದಿ ಹೊರಬೀಳುತ್ತಿದೆ. 6 ವರ್ಷಗಳ ಹಿಂದೆಯೇ ನಯನತಾರಾ ಮದುವೆಯಾಗಿದ್ದರಂತೆ. ಬಾಡಿಗೆ ತಾಯ್ತನದ ಈ ಪ್ರಕರಣದಲ್ಲಿ ರೋಚಕ ಟ್ವಿಸ್ಟ್‌ ಸಿಕ್ಕಿದೆ.   

Written by - Chetana Devarmani | Last Updated : Oct 17, 2022, 10:30 AM IST
  • 6 ವರ್ಷಗಳ ಹಿಂದೆಯೇ ಮದುವೆಯಾಗಿದ್ರು ನಯನತಾರಾ!?
  • ಬಾಡಿಗೆ ತಾಯ್ತನದ ಈ ಪ್ರಕರಣದಲ್ಲಿ ರೋಚಕ ಟ್ವಿಸ್ಟ್‌!
  • ದಕ್ಷಿಣ ಭಾರತದ ಖ್ಯಾತ ತಾರಾ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್
Nayanatara : 6 ವರ್ಷಗಳ ಹಿಂದೆಯೇ ಮದುವೆಯಾಗಿದ್ರು ನಯನತಾರಾ!? ಬಾಡಿಗೆ ತಾಯ್ತನ ಕೇಸ್‌ಗೆ ರೋಚಕ ಟ್ವಿಸ್ಟ್​!! title=
ನಯನತಾರಾ ಮತ್ತು ವಿಘ್ನೇಶ್ ಶಿವನ್

Nayanthara - Vignesh: ದಕ್ಷಿಣ ಭಾರತದ ಖ್ಯಾತ ತಾರಾ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಇತ್ತೀಚೆಗೆ ಪೋಷಕರಾಗಿದ್ದಾರೆ. ವಿಘ್ನೇಶ್ ಶಿವನ್ ಮತ್ತು ನಯನತಾರಾ ಅವಳಿ ಗಂಡು ಮಕ್ಕಳ ಪಾಲಕರಾಗಿದ್ದಾರೆ. ಈ ಸಂತಸದ ಸುದ್ದಿಯಮ್ಮು ಅವರು ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದ್ದರು. ಮದುವೆಯಾದ ನಾಲ್ಕೇ ತಿಂಗಳಲ್ಲಿ ತಂದೆ - ತಾಯಿಯಾದ ಕಾರಣ ಇಬ್ಬರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಯನತಾರಾ ಮತ್ತು ವಿಘ್ನೇಶ್ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ರಾಜ್ಯ ಸರ್ಕಾರ ಮಾತುಕತೆ ನಡೆಸಿತ್ತು. ಇದೀಗ ಈ ವಿಚಾರದಲ್ಲಿ ಹೊಸದೊಂದು ಮಾಹಿತಿ ಬಹಿರಂಗವಾಗಿದೆ. 

ಇದನ್ನೂ ಓದಿ : Suicide Cases: ಆತ್ಮಹತ್ಯೆಗೆ ಶರಣಾದ ಸಿನಿಮಾ ರಂಗದ ತಾರೆಯರಿವರು.. ಹಲವರ ಸಾವು ನಿಗೂಢ!

ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ :

ಇತ್ತೀಚೆಗೆ ವಿಘ್ನೇಶ್ ಶಿವನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಾಕುವ ಮೂಲಕ  ತಂದೆ - ತಾಯಿಯಾದ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದಾದ ನಂತರ ತಮಿಳುನಾಡು ಆರೋಗ್ಯ ಸಚಿವ ಸುಬ್ರಮಣ್ಯಂ ಮಕ್ಕಳ ಜನನದ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಅದೇ ಸಮಯದಲ್ಲಿ, ದಂಪತಿಗಳು ಈ ವಿಷಯದಲ್ಲಿ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು. ವರದಿಗಳ ಪ್ರಕಾರ, ನಯನತಾರಾ ಮತ್ತು ವಿಘ್ನೇಶ್ ಸರ್ಕಾರಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ. ಈ ಅಫಿಡವಿಟ್ ನಲ್ಲಿ ಅವರ ಮದುವೆಯ ಸತ್ಯಾಂಶದ ಬಗ್ಗೆ ರೋಚಕ ಮಾಹಿತಿ ಬಯಲಾಗಿದೆ.

ಮದುವೆಯಾಗಿ 6 ​​ವರ್ಷ ಕಳೆದಿದೆಯೇ?

ಮಾಧ್ಯಮ ವರದಿಗಳ ಪ್ರಕಾರ, ನಯನತಾರಾ ಮತ್ತು ವಿಘ್ನೇಶ್ ಶಿವನ್ ಆರು ವರ್ಷಗಳ ಹಿಂದೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದರಂತೆ. ಆರು ವರ್ಷಗಳ ಹಿಂದೆ ದಂಪತಿ ತಮ್ಮ ವಿವಾಹವನ್ನು ನೋಂದಾಯಿಸಿದ್ದರಂತೆ. ಅಫಿಡವಿಟ್‌ನಲ್ಲಿ ದಂಪತಿಗಳು ವಿವಾಹ ಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ನಯನತಾರಾ ಮತ್ತು ವಿಘ್ನೇಶ್ ಅವರ ಬಾಡಿಗೆ ತಾಯಿ ಯುಎಇಯಲ್ಲಿ ವಾಸಿಸುವ ನಟಿಯ ಸಂಬಂಧಿ ಎಂದು ಸಹ ಸುದ್ದಿಗಳು ಹರಿದಾಡುತ್ತಿವೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ಅವಳಿ ಮಕ್ಕಳು ಜನಿಸಿದ ಚೆನ್ನೈನಲ್ಲಿರುವ ಆಸ್ಪತ್ರೆಯನ್ನು ರಾಜ್ಯ ಸರ್ಕಾರ ಗುರುತಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಸುದ್ದಿಗೆ ನಯನತಾರಾ ಮತ್ತು ವಿಘ್ನೇಶ್ ಅವರಿಂದ ಯಾವುದೇ ದೃಢೀಕರಣವಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಬಾಡಿಗೆ ತಾಯ್ತನ ಕಾಯಿದೆ 2021 ರ ಪ್ರಕಾರ, ಪೋಷಕರಾಗಲು ಬಾಡಿಗೆ ತಾಯ್ತನವನ್ನು ಆಯ್ಕೆ ಮಾಡಲು ಬಯಸುವ ಯಾವುದೇ ದಂಪತಿಗಳು ಮದುವೆಯಾಗಿ ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಳೆದಿರಬೇಕು. ಬಾಡಿಗೆ ತಾಯಿ ಉದ್ದೇಶಿತ ಪೋಷಕರ ಹತ್ತಿರದ ಸಂಬಂಧಿಯಾಗಿರಬೇಕು. ಇಂತಹ ಪರಿಸ್ಥಿತಿಯಲ್ಲಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರು ಈ ಎಲ್ಲಾ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಶ್ರದ್ಧೆಯಿಂದ ಪಾಲಿಸಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. (ಗಮನಿಸಿ : Zee Kannada News ಈ ವರದಿಗಳು ಹಾಗೂ ವದಂತಿಗಳ ಸತ್ಯಾಸತ್ಯತೆಯನ್ನು ಖಚಿತಪಡಿಸುವುದಿಲ್ಲ.)

ಇದನ್ನೂ ಓದಿ : ರಾಷ್ಟ್ರಗೀತೆ ಹಾಡಿ ಕಬ್ಬಡಿಗೆ ಚಾಲನೆ ಕೊಟ್ರು ರಿಷಭ್: ಕಾಂತಾರ ಕಾಂತಾರ ಎಂದು ಕೂಗಿದ ಫ್ಯಾನ್ಸ್

ಜೂನ್ 2022 ರಲ್ಲಿ ವಿವಾಹ :

ನಯನತಾರಾ ಮತ್ತು ವಿಘ್ನೇಶ್ ಈ ವರ್ಷ ಜೂನ್ 2022 ರಲ್ಲಿ ವಿವಾಹವಾದರು. ಜೂನ್ 9 ರಂದು, ಅವರ ಮದುವೆ ಬಹಳ ಅದ್ಭುತವಾಗಿ ನಡೆಯಿತು. ದಕ್ಷಿಣ ಭಾರತದ ಸ್ಟಾರ್‌ ಜೋಡಿಯ ಈ ಅದ್ಧೂರಿ ಮದುವೆಗೆ ಬಾಲಿವುಡ್ ನಟ ಶಾರುಖ್ ಖಾನ್ ಕೂಡ ಆಗಮಿಸಿದ್ದರು. ಅಷ್ಟೇ ಅಲ್ಲ, ನಯನತಾರಾ ಮತ್ತು ವಿಘ್ನೇಶ್ ಮದುವೆಯ ಸಾಕ್ಷ್ಯಚಿತ್ರವನ್ನೂ ಸಹ ಮಾಡಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News