ಮುಂಬೈ: ದಿ ಕಪಿಲ್ ಶರ್ಮಾ ಷೋನಲ್ಲಿ ಕಾಣಿಸಿಕೊಂಡಿದ್ದ ಅವಳಿ ಸಹೋದರಿಯರಾದ ಚಿಂಕಿ-ಮಿಂಕಿ ತನ್ನ ವಿಶೇಷ ಹಾವಭಾವಗಳಿಗಾಗಿ ಭಾರಿ ಖ್ಯಾತಿ ಪಡೆದಿದ್ದಾರೆ. ಈ ಇಬ್ಬರು ಸಹೋದರಿಯರು ನೋಡಲು ಡಿಟ್ಟೋ ಸೇಮ್ ಆಗಿದ್ದಾರೆ. ಅವರಿಬ್ಬರ ಮಾತನಾಡುವ ಶೈಲಿ ಕೂಡ ಒಂದೇ ತೆರನಾಗಿದೆ. ಅವರಿಬ್ಬರೂ ಪರಸ್ಪರ ಯಾವ ರೀತಿಯ ಹೋಲಿಕೆ ಹೊಂದಿದ್ದಾರೆ ಎಂದರೆ, ಇಬ್ಬರಲ್ಲಿ ಚಿಂಕಿ ಯಾರು ಹಾಗೂ ಮಿಂಕಿ ಯಾರು ಎಂಬುದೇ ಜನರಿಗೆ ಗೊತ್ತಾಗುವುದಿಲ್ಲ. 


COMMERCIAL BREAK
SCROLL TO CONTINUE READING

ಇದನ್ನು ಓದಿ- Video: ಯುವರತ್ನ'ನ ಪವರ್ ಫುಲ್ ಸ್ಟೆಪ್ ಗೆ ಪುನೀತ್ ರಾಜಕುಮಾರ್ ಅಭಿಮಾನಿಗಳು ಫಿದಾ


ಇತ್ತೀಚಿಗೆ ಈ ಇಬ್ಬರ ಸಯೋದರಿಯರ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಪ್ರಸಿದ್ಧಿಯನ್ನು ಪಡೆದುಕೊಂಡಿವೆ. ಆದರೆ, ಪ್ರಸ್ತುತ ಈ ಅವಳಿ ಸಹೋದರಿಯರ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.


ಇದನ್ನು ಓದಿ- Viral Video: ಕಡಲು ತೀರದಲ್ಲಿ Transparent Dressನಲ್ಲಿ ಕಂಡು ಬಂದ Nora Fatehi


ಈ ವಿಡಿಯೋದಲ್ಲಿ ಚಿಂಕಿ-ಮಿಂಕಿ ನೋರಾ ಫತೇಹಿ (Nora Fatehi) ಹಾಗೂ ಗುರು ರಂಧಾವಾ ಅವರ ಇತ್ತೀಚಿಗೆ ಬಿಡುಗಡೆಯಾದ 'ನಾಚ್ ಮೇರಿ ರಾಣಿ ರಾಣಿ' ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಇವರಿಬ್ಬರ ಡ್ಯಾನ್ಸಿಂಗ್ ಮೂವ್ಸ್ ಗೆ ಅಭಿಮಾನಿಗಳು ಯಾವ ರೀತಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದರೆ ಈ ವಿಡಿಯೋ ಯುಟ್ಯೂಬ್ ನಲ್ಲಿ ಭಾರಿ ವೈರಲ್ ಆಗುತ್ತಿದೆ.



ಇದನ್ನು ಓದಿ- Video: ಫ್ರೆಂಡ್ಸ್ ಜೊತೆ ಬೈಕ್ ನಲ್ಲಿ ಜಾಲಿ ರೈಡ್ ಹೊರಟ ಡಿ-ಬಾಸ್..!


ಇದಕ್ಕೂ ಮೊದಲು ಚಿಂಕಿ-ಮಿಂಕಿ 'ದಿ ಕಪಿಲ್ ಶರ್ಮಾ ಷೋ'ನಲ್ಲಿ ಕಾಣಿಸಿಕೊಂಡಿದ್ದರು. ಈ ಷೋ ನಲ್ಲಿ ಈ ಸಹೋದರಿಯರು ಹೇಳಿದ್ದ 'ಮುಝೆ ತೋ ಚಾಹಿಯೇ- ಇಸ್ಕಾ ಪತಾ ನಹಿ' ಭಾರಿ ವೈರಲ್ ಆಗಿತ್ತು.