ಮುಂಬೈ : ಬಾಲಿವುಡ್ ತಾರೆಯರಾದ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಅವರು ಭಾನುವಾರ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ಬಾಲಿವುಡ್ ಬೆಬೋ ಮತ್ತೊಮ್ಮೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದರೊಂದಿಗೆ ಈಗ ತೈಮೂರ್ ಅಲಿ ಖಾನ್ ಹಿರಿಯ ಸಹೋದರರಾಗಿದ್ದಾರೆ. ಕರೀನಾ ಕಪೂರ್ ಖಾನ್ (Kareen Kapoor Khan) ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಆಗಸ್ಟ್ 2020 ರಲ್ಲಿ, ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ (Saif Ali Khan) ಜಂಟಿ ಹೇಳಿಕೆಯಲ್ಲಿ ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಘೋಷಿಸಿದ್ದರು. ಕರೀನಾ ಕಪೂರ್ ಖಾನ್ (Kareen Kapoor Khan) ಅವರನ್ನು ಇಂದು ಮುಂಜಾನೆ 4: 45 ಕ್ಕೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಫೆಬ್ರವರಿ 21 ರ ಭಾನುವಾರ ದಂಪತಿಗಳು ಮಗುವನ್ನು ಸ್ವಾಗತಿಸಿದರು. 


ಇದನ್ನೂ ಓದಿ - ನಾನೆಂದೂ ರಾಜಕೀಯ ಪ್ರವೇಶಿಸುವುದಿಲ್ಲ: ಕರೀನಾ ಕಪೂರ್


ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಬಾರೀ ವೈರಲ್ ಆಗುತ್ತಿದ್ದು ಕರೀನಾ ಕಪೂರ್ ಖಾನ್ (Kareen Kapoor Khan) ಮತ್ತು ಸೈಫ್ ಅಲಿ ಖಾನ್ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.


ವಾಸ್ತವವಾಗಿ ಫೆಬ್ರವರಿ 15ರಂದೇ ಕರೀನಾ ಕಪೂರ್ ಅವರಿಗೆ ಡೆಲಿವರಿ ಡೇಟ್ ನೀಡಲಾಗಿತ್ತು. ಸೈಫ್ ಮತ್ತು ರಣಧೀರ್ ಅವರ ಹೊರತಾಗಿ, ಕರೀನಾ ಕಪೂರ್ ಅವರ ಸಹೋದರಿ ಸಬಾ ಅಲಿ ಖಾನ್ ಸಹ ಕರೀನಾ ಅವರಿಗೆ ಫೆಬ್ರವರಿ 15ರಂದು ಡೆಲಿವರಿ ಆಗಬಹುದೆಂದು ಸುಳಿವು ನೀಡಿದ್ದರು.


ಇದನ್ನೂ ಓದಿ - COVID-19 ವಿರುದ್ಧದ ಹೋರಾಟಕ್ಕೆ UNICEFಗೆ ದೇಣಿಗೆ ನೀಡಿದ ಕರೀನಾ ದಂಪತಿಗೆ ನೆಟಿಜನ್‌ಗಳ ಪ್ರಶ್ನೆ ಇದು


ಗರ್ಭಾವಸ್ಥೆಯಲ್ಲಿ ಎಲ್ಲಾ ಕೆಲಸಗಳನ್ನು ನಿರ್ವಹಿಸಿದ್ದ ಕರೀನಾ ಕಪೂರ್ ಖಾನ್:
ಗಮನಿಸಬೇಕಾದ ಸಂಗತಿಯೆಂದರೆ ಕರೀನಾ ಕಪೂರ್ ಖಾನ್ ತಮ್ಮ ಗರ್ಭಾವಸ್ಥೆಯಲ್ಲಿ ವಿರಾಮ ತೆಗೆದುಕೊಳ್ಳದೆ ತಮ್ಮೆಲ್ಲಾ ನಿಗದಿತ ಕೆಲಸಗಳನ್ನು ಮುಗಿಸುವಲ್ಲಿ ನಿರತರಾಗಿದ್ದರು. ಬಾಲಿವುಡ್ ಮೂಲದಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕರೀನಾ ಚಿತ್ರ ಹಾಗೂ ಜಾಹಿರಾತಿನ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ತಮ್ಮೆಲ್ಲಾ ಕೆಲಸಗಳನ್ನು ಡೆಲಿವರಿಗೆ  (Kareena Kapoor Delivery) ಮೊದಲೇ ಪೂರ್ಣಗೊಳಿಸಿದ್ದಾರೆ ಎಂದು ಹೇಳಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.