ನಾನೆಂದೂ ರಾಜಕೀಯ ಪ್ರವೇಶಿಸುವುದಿಲ್ಲ: ಕರೀನಾ ಕಪೂರ್

ನಾನು ಚಿತ್ರರಂಗದಲ್ಲಿಯೇ ಮುಂದುವರೆಯಲಿದ್ದೇನೆ. ಈ ಕ್ಷೇತ್ರದಲ್ಲಿಯೇ ಮತ್ತಷ್ಟು ಹೆಸರು ಮಾಡುವ ಗುರಿ ನನ್ನದು. ಆದರೆ ರಾಜಕೀಯ ಪ್ರವೇಶಿಸುವ ಯಾವುದೇ ಆಶಯ ಇಲ್ಲ ಎಂದು ಬಾಲಿವುಡ್ ನಟಿ ಕರೀನಾ ಕಪೂರ್ ಹೇಳಿದ್ದಾರೆ. 

Last Updated : Jan 22, 2019, 05:15 PM IST
ನಾನೆಂದೂ ರಾಜಕೀಯ ಪ್ರವೇಶಿಸುವುದಿಲ್ಲ: ಕರೀನಾ ಕಪೂರ್ title=

ನವದೆಹಲಿ: ನಾನು ರಾಜಕೀಯ ಪ್ರವೇಶಿಸುವ ವಿಚಾರ ಕೆಲವ ವದಂತಿ ಅಷ್ಟೇ. ನಾನೆಂದೂ ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಸ್ಪಷ್ಟಪಡಿಸಿದ್ದಾರೆ. 

ಈ ಹಿಂದೆ ನಟಿ ಕರೀನಾ ಕಪೂರ್ ಅವರು ಮಧ್ಯಪ್ರದೇಶದ ಭೂಪಾಲ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಎಲ್ಲೆಡೆ ಹಬ್ಬಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕರೀನಾ, "ನಾನು ಚಿತ್ರರಂಗದಲ್ಲಿಯೇ ಮುಂದುವರೆಯಲಿದ್ದೇನೆ. ಈ ಕ್ಷೇತ್ರದಲ್ಲಿಯೇ ಮತ್ತಷ್ಟು ಹೆಸರು ಮಾಡುವ ಗುರಿ ನನ್ನದು. ಆದರೆ ರಾಜಕೀಯ ಪ್ರವೇಶಿಸುವ ಯಾವುದೇ ಆಶಯ ಇಲ್ಲ. ನಾನೆಂದೂ ರಾಜಕೀಯ ಪ್ರವೇಶಿಸುವುದಿಲ್ಲ. ಈ ಬಗ್ಗೆ ಹಬ್ಬಿರುವ ಎಲ್ಲಾ ವರದಿಗಳೂ ಸತ್ಯಕ್ಕೆ ದೂರವಾದುದು" ಎಂದಿದ್ದಾರೆ. 

ಕರೀನಾ ಅತ್ತೆ ಶರ್ಮಿಳಾ ಟಾಗೋರ್ ಮೂಲತಃ ಭೋಪಾಲ್‌ವರು. ಅವರ ಪತಿ, ಸೈಫ್ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಭೋಲಾಪ್‌ನಿಂದ ಕಣಕ್ಕಿಳಿದು ಸೋತಿದ್ದರು. ಈಗ ಅದೇ ವಾರಸುದಾರಿಕೆಯನ್ನು ಮುಂದುವರಿಸುವ ಸಲುವಾಗಿ ಕಾಂಗ್ರೆಸ್ ಕರೀನಾ ಕಪೂರ್ ಅವರನ್ನು ಕಣಕ್ಕಿಳಿಸಲಿದೆ ಎಂಬ ಸುದ್ದಿ ಕೇಳಿಬಂದಿತ್ತು.

Trending News