ಬೆಂಗಳೂರು: ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ, ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡ ನಡೆಸಿದವರಿಗೆ, ಸೇನಾಪಡೆಗಳ ಮೇಲೆ ದಾಳಿ ನಡೆಸಿದವರಿಗೆ ಕಾಂಗ್ರೆಸ್ ಹತ್ತಿರವಾಗಿತ್ತು ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ(The Kashmir Files Film)ಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಬುಧವಾರ ಸರಣಿ ಟ್ವೀಟ್ ಮಾಡಿದೆ.


COMMERCIAL BREAK
SCROLL TO CONTINUE READING

‘ದಿ ಕಾಶ್ಮೀರಿ ಫೈಲ್ಸ್’ ಸಿನಿಮಾ ಕುರಿತು ಕಾಂಗ್ರೆಸ್ ನಾಯಕರು ಉಡಾಫೆಯ ಮಾತುಗಳನ್ನಾಡುವ ಮೂಲಕ ಕಾಶ್ಮೀರದಲ್ಲಿ ಹತ್ಯೆಯಾದ ಕಾಶ್ಮೀರಿ ಪಂಡಿತರ(Kashmiri Pandits), ದಲಿತರ, ಮುಸಲ್ಮಾನರ ಹತ್ಯೆಯನ್ನು ತುಚ್ಛವಾಗಿಸುತ್ತಿದ್ದಾರೆ. ವಾಸ್ತವವನ್ನು ಒಪ್ಪಿಕೊಳ್ಳಲೂ ಕಾಂಗ್ರೆಸ್‌ ಹಿಂಜರಿಯುತ್ತಿದೆ ಏಕೆಂದರೆ ಇದರ ರೂವಾರಿಗಳು ಅವರೇ ಆಗಿದ್ದಾರೆ’ ಅಂತಾ ಟೀಕಿಸಿದೆ.


Hijab verdict: ‘ಹಿಜಾಬ್ ಒಳಗಿರುವ ಮತ ಗಟ್ಟಿಗೊಳಿಸಲು ಯತ್ನಿಸಿದ ಸಿದ್ದರಾಮಯ್ಯಗೆ ಹಿನ್ನಡೆ’


 


‘ವಿಧಾನ ಮಂಡಲದ ಉಭಯ ಸದನದಲ್ಲಿ #TheKashmirFiles ಸಿನಿಮಾ ಬಗ್ಗೆ ಕಾಂಗ್ರೆಸ್(Congress) ಪ್ರತಿರೋಧ ತೋರುತ್ತಿದೆ. ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡವನ್ನು ಕಾಂಗ್ರೆಸ್ ಪಕ್ಷ ಸಮರ್ಥಿಸುತ್ತಿದೆಯೇ?’ ಅಂತಾ ಬಿಜೆಪಿ ಪ್ರಶ್ನಿಸಿದೆ.


‘ಕಾಂಗ್ರೆಸ್ ಪಕ್ಷ #TheKashmirFiles ಸಿನಿಮಾವನ್ನು ಏಕೆ ವಿರೋಧಿಸುತ್ತಿದೆ ಗೊತ್ತೇ? ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ, ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡ ನಡೆಸಿದವರಿಗೆ, ಸೇನಾಪಡೆಗಳ ಮೇಲೆ ದಾಳಿ ನಡೆಸಿದವರಿಗೆ ಕಾಂಗ್ರೆಸ್ ಹತ್ತಿರವಾಗಿತ್ತು. ಸಾಕ್ಷ್ಯ ಇಲ್ಲಿದೆ, ಮಾಜಿ ಪ್ರಧಾನಿ ಭಯೋತ್ಪಾದಕನೊಂದಿಗೆ ಸಂವಾದ ನಡೆಸುತ್ತಿರುವ ಕ್ಷಣಗಳು!!!’ ಅಂತಾ ಮನಮೋಹನ್ ಸಿಂಗ್ ಅವರ ವಿಡಿಯೋವೊಂದನ್ನು ಬಿಜೆಪಿ(BJP) ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.


ಮಕ್ಕಳ ಭವಿಷ್ಯದ ಬಗ್ಗೆ ನಿರ್ಲಕ್ಷ್ಯ ಬೇಡ; ತೀರ್ಪು ಪಾಲನೆ ಎಲ್ಲರ ಕರ್ತವ್ಯ ಎಂದ ಎಚ್ಡಿಕೆ


‘ಕಾಶ್ಮೀರದ ವಾಸ್ತವ ತೆರೆದಿಟ್ಟಿರುವ ‘ದಿ ಕಾಶ್ಮೀರ್‌ ಫೈಲ್ಸ್‌’ (The Kashmir Files) ಸಿನಿಮಾವನ್ನು ನೋಡುವಂತೆ ಪ್ರಧಾನಿ ನರೇಂದ್ರ ಮೋದಿಯವರೇ ಕರೆ ನೀಡಿದ್ದಾರೆ. ಕಾಶ್ಮೀರದಲ್ಲಿ ದಶಕಗಳ ಕಾಲ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯ ಮತ್ತು ದಬ್ಬಾಳಿಕೆ ಮೇಲೆ ಬೆಳಕು ಚೆಲ್ಲುವ ‘ದಿ ಕಾಶ್ಮೀರ್ ಫೈಲ್ಸ್’ ಅತ್ಯುತ್ತಮ ಚಿತ್ರವಾಗಿದೆ ಎಂದು ಮೋದಿ ಹೇಳಿದ್ದಾರೆ’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.   


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.