Akshata Deshpande : ʼಕಥೆಯೊಂದು ಶುರುವಾಗಿದೆʼ ಧಾರಾವಾಹಿಯ ಮೂಲಕ ಬೆಳಗಾವಿ ಬೆಡಗಿ ಅಕ್ಷತಾ ದೇಶಪಾಂಡೆ ಸಖತ್‌ ಮಿಂಚುತ್ತಿದ್ದಾರೆ. ತೆರೆ ಮೇಲೆ ಡಿಸೆಂಟ್‌ ಆಗಿ ಕಾಣಿಸಿಕೊಳ್ಳುವ ಅಕ್ಷತಾ ತೆರೆ ಹಿಂದೆ ತುಂಬಾ ತುಂಟಿ ಅಂತ ನಿಮ್ಗೆ ಜೀ ಕನ್ನಡ ನ್ಯೂಸ್‌ ನಡೆಸಿದ ಸಂದರ್ಶನದ ವಿಡಿಯೋ ನೋಡಿದ್ರೆ ಅರ್ಥವಾಗುತ್ತೆ. ಅಲ್ಲದೆ, ಶ್ರಮವಹಿಸಿ, ಇಷ್ಟದ ಕೆಲಸ ಮಾಡುತ್ತಿರುವ ಕುಂದಾನಗರಿ ಸುಂದರಿ ತಮ್ಮ ಸಿನಿ ಜರ್ನಿ ಕುರಿತ ಸಾಕಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಕಿರುತೆರೆ ಜರ್ನಿಯ ಕುರಿತು ಮಾತನಾಡಿದ ಅಕ್ಷತಾ, ನಂಗೆ ತುಂಬಾ ಚಿಕ್ಕವಳಿದ್ದಾಗ ಟೀಚರ್‌ ಅಗ್ಬೇಕು ಅಂತ ಆಸೆ ಇತ್ತು. ಆಮೇಲೆ ಐಎಸ್‌ಎ ಆಗ್ಬೇಕು ಅಂತ ಆಸೆಯಾಯ್ತು. ಸ್ವಲ್ಪ ದೊಡ್ಡವಳಾದ್ಮೇಲೆ ಡಾಕ್ಟರ್‌ ಆಗ್ಬೇಕು ಅಂತ ಅನಿಸ್ತು... ಆವಾಗವಾಗ ಅಮ್ಮನಿಗೆ ಟಿವಿ ಒಳಗೆ ಹೆಂಗ್‌ ಹೋಗುದು ಅಮ್ಮ ಅಂತ ಕೇಳ್ತಿದ್ದೆ. ಅವರು ಜನ ಟಿವಿ ಒಳಗೆ ಇರ್ತಾರೆ ಅಂತ ಹೇಳ್ತೀದ್ರು.. ನಾನು ಟಿವಿ ಒಳಗೆಲ್ಲ ನೋಡ್ತೀದ್ದೆ ಎಲ್ಲಾದ್ರೂ ಕಾಣ್ತಾರಾ ಅಂತ.. ಹಾಗೆ ಇಂಟ್ರಸ್ಟ್‌ ಶುರುವಾಯ್ತು. ಯಾವಾಗ ನಾನ್‌ ಕಾಲೇಜ್‌ಗೆ ಬಂದೆ ನಾನು ತುಂಬಾ ನೀಟ್‌ ಆಗಿ ರೆಡಿಯಾಗಿ ಹೋಗ್ತಿದ್ದೆ, ನನಗೆ ಹುಡುಗಿಯರಿಗಿಂತ ಹುಡುಗರೆ ಫ್ರೆಂಡ್ಸ್‌ ಜಾಸ್ತಿ, ಸೋ ಹೀಗಾಗಿ ನನಗೆ ನಾನು ಹೀರೋಯಿನ್‌ ಆಗ್ಬಹುದು ಅಂತ ಅನಿಸ್ತಿತ್ತು. 


ಇದನ್ನೂ ಓದಿ: ಡಾಲಿ ʼಹೊಯ್ಸಳʼ ಸಿನಿಮಾದ ಟ್ರೈಲರ್ ಬಿಡುಗಡೆಗೆ ಡೇಟ್ ಫಿಕ್ಸ್..!


ಹುಡುಗರು ನನ್ನ ಹಿಂದೆ ಎಷ್ಟು ಬಿಳ್ತೀದ್ರು.. ಸೋ ಅವಾಗ ನಾವು ನನ್ನ ಪ್ರೇಂಡ್ಸ್‌ನ ಕೇಳ್ತಿದ್ದೆ.. ನಿಂಗೆ ಎಷ್ಟು ಪ್ರಪೋಸ್‌ ಬಂತು ಆಂತ.. ನನಗೆ ಜಾಸ್ತಿ ಪ್ರಪೋಸಲ್‌ ಬರ್ತೀದ್ವು ಆಗ.. ನಾನೇ ಹಿರೋಯಿನ್‌ ಅಂತ ಅಂದುಕೊಳ್ತಿದ್ದೆ. ಪಿಯು ಇದ್ದಾಗ ಮಾಡ್ಲಿಂಗ್‌ ಮಾಡ್ತೀದ್ದೆ. ಎಲ್ಲಾ ಪ್ಯಾಶನ್‌ ಇವೆಂಟ್‌ ನಲ್ಲಿ ಭಾಗವಹಿಸುತ್ತಿದ್ದೆ. ಒಂದು ದಿನ ಫೇಸ್‌ಬುಕ್‌ನಲ್ಲಿ ಮೆಸೇಜ್‌ ಬಂತು ಅಡಿಷನ್‌ಗೆ. ಆದಾದ ನಂತರ 6 ತಿಂಗಳು ನಾನು ಬೆಂಗಳೂರು ಟು ಬೆಳಗಾವಿ ಬೆಳಗಾವಿಯಿಂದ ಬೆಂಗಳೂರು ಹೀಗೆ ತಿರುಗಾಡ್ತಿದದ್ದೆ. ಬೆಂಗಳೂರು ಬಂದು ಆಡಿಷನ್‌ ಕೊಟ್ಟು ಮತ್ತೆ ಹೊಗ್ತಿದ್ದೆ.


ನಾನು ಯಾವ್‌ ರಿಲೇಟಿವ್‌ ಮನೆಗೂ ಹೋಗ್ತಿದ್ದಿಲ್ಲ. ಟು ಬಿ ಫ್ರ್ಯಾಂಕ್‌.. ನಮ್ಗೆ ಯಾರೂ ಸಂಬಂಧಿಕರು ಆಗ್ಬಂದಿಲ್ಲ.. ಅವರು ಬೇಕಾಗೂ ಇಲ್ಲ..! ನಮ್ಮಪ್ಪ, ನಮ್ಮಮ್ಮ, ನಮ್ಮಕ್ಕ ಇದೆ ನನ್ನ ಪ್ರಂಪಂಚ. ಉಳಿದವರು ಎನ್‌ ಮಾಡಿದ್ರು ನಾನು ತಲೆಕೆಡಿಸಿಕೊಳ್ಳಲ್ಲ. ರಿಲೆಟಿವ್‌ ಮನೆಗೆ ಹೋಗುದು ಬರೋದು ನಮ್ಗೆ ಇಷ್ಟ ಇರಲಿಲ್ಲ. ಒಂಥರಾ ಮಾತ್ತಾಡ್ತಾರೆ.. ಯಾಕ್‌ ಬೇಕು.. ಅದಿಕ್ಕೆ ಬೆಂಗಳೂರು ಟು ಬೆಳಗಾವಿ ಹೋಗೋದು ಬರೋದು ಮಾಡ್ತಿದ್ದೆ.


ಇದನ್ನೂ ಓದಿ: ಆಸ್ಕರ್‌ ಗೆದ್ದ ಎನ್‌ಟಿಆರ್‌ಗೆ ಹೈದ್ರಾಬಾದ್‌ನಲ್ಲಿ ಅದ್ಧೂರಿ ಸ್ವಾಗತ..! ವಿಡಿಯೋ ನೋಡಿ


ಅಮ್ಮ ಅಪ್ಪು ಯಾಗಾಗ್ಲೂ ಪ್ರೋತ್ಸಾಹ ನೀಡ್ತಾರೆ. ಹುಷಾರಿಗು ಅಂತ ಸಪೋರ್ಟ್‌ ಮಾಡ್ತಾರೆ. 6 ತಿಂಗಳು ಸೈಕಲ್‌ ಹೊಡೆದೆ.. ಕೊನೆಗೂ ಒಂದು ದಿನ ನನಗೂ ಟೈಮ್‌ ಬಂತು.. ಸೋ ಕೆರಿಯರ್‌ ಸ್ಟಾರ್ಟ್‌ ಆಯ್ತು ಅಮೃತ ವರ್ಷಿಣಿ 2 ಮೂಲಕ ನಾನು ಜರ್ನಿ ಸ್ಟಾರ್ಟ್‌ ಮಾಡಿದೆ. ಇಂದಿಗೂ ನನ್ನ ಅಕ್ಕ ನನಗೆ ಬೆನ್ನೆಲುಬಾಗಿ ನಿಂತಿದಾಳೆ. ಅಪ್ಪ ಅಮ್ಮ ಸಪೋರ್ಟ್‌ ಇದೆ.. ಇಷ್ಟೆ ಸಾಕು ಅಂತ ಅಕ್ಕಿ ತಮ್ಮ ಕಷ್ಟದ ದಿನಗಳನ್ನು ನೆನೆದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.