ಡಾಲಿ ʼಹೊಯ್ಸಳʼ ಸಿನಿಮಾದ ಟ್ರೈಲರ್ ಬಿಡುಗಡೆಗೆ ಡೇಟ್ ಫಿಕ್ಸ್..!

ಸ್ಯಾಂಡಲ್‌ವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟರಲ್ಲಿ ಡಾಲಿ ಧನಂಜಯ ಸಹ ಒಬ್ಬರು ಅಂದ್ರೆ ತಪ್ಪಾಗಲ್ಲ. ಈಗಾಗಲೇ ತಮ್ಮ ವಿಭಿನ್ನ ಪಾತ್ರಗಳಿಂದ ಮನೆ ಮಾತಾಗಿರುವ ಡಾಲಿ ಸಿನಿ ಜರ್ನಿಯ ಸಿಲ್ವರ್ ಜೂಬ್ಲೀ ಸಂಭ್ರಮ ಬಹಳ ಜೋರಾಗಿದೆ. ಧನಂಜಯ ಅಭಿನಯದ 25ನೇ ಸಿನೆಮಾ ಗುರುದೇವ್ ಹೊಯ್ಸಳ ಭರವಸೆ ಹೆಚ್ಚಿಸಿದ್ದು, ಈ ಚಿತ್ರದಲ್ಲಿ ಡಾಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ಮಾಡಿರದ ರೀತಿಯ ಪಾತ್ರ ಧರಿಸಿ, ಗುರುದೇವ್ ಹೊಯ್ಸಳ ಆಗಿ ಡಾಲಿ ಧನಂಜಯ್ ತೆರೆ ಮೇಲೆ ಅಬ್ಬರಿಸಲಿದ್ದಾರೆ.

Written by - YASHODHA POOJARI | Edited by - Krishna N K | Last Updated : Mar 15, 2023, 03:27 PM IST
  • ಧನಂಜಯ ಅಭಿನಯದ 25ನೇ ಸಿನೆಮಾ ಗುರುದೇವ್ ಹೊಯ್ಸಳ.
  • ಈ ಚಿತ್ರದಲ್ಲಿ ಡಾಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
  • ಟ್ರೈಲರ್ ಯಾವಾಗ ಬಿಡುಗಡೆ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಬ್ರೇಕ್ ಬಿದ್ದಿದೆ.
ಡಾಲಿ ʼಹೊಯ್ಸಳʼ ಸಿನಿಮಾದ ಟ್ರೈಲರ್ ಬಿಡುಗಡೆಗೆ ಡೇಟ್ ಫಿಕ್ಸ್..! title=

Hoysala movie trailer : ಸ್ಯಾಂಡಲ್‌ವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟರಲ್ಲಿ ಡಾಲಿ ಧನಂಜಯ ಸಹ ಒಬ್ಬರು ಅಂದ್ರೆ ತಪ್ಪಾಗಲ್ಲ. ಈಗಾಗಲೇ ತಮ್ಮ ವಿಭಿನ್ನ ಪಾತ್ರಗಳಿಂದ ಮನೆ ಮಾತಾಗಿರುವ ಡಾಲಿ ಸಿನಿ ಜರ್ನಿಯ ಸಿಲ್ವರ್ ಜೂಬ್ಲೀ ಸಂಭ್ರಮ ಬಹಳ ಜೋರಾಗಿದೆ. ಧನಂಜಯ ಅಭಿನಯದ 25ನೇ ಸಿನೆಮಾ ಗುರುದೇವ್ ಹೊಯ್ಸಳ ಭರವಸೆ ಹೆಚ್ಚಿಸಿದ್ದು, ಈ ಚಿತ್ರದಲ್ಲಿ ಡಾಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ಮಾಡಿರದ ರೀತಿಯ ಪಾತ್ರ ಧರಿಸಿ, ಗುರುದೇವ್ ಹೊಯ್ಸಳ ಆಗಿ ಡಾಲಿ ಧನಂಜಯ್ ತೆರೆ ಮೇಲೆ ಅಬ್ಬರಿಸಲಿದ್ದಾರೆ.

ಈಗಾಗಲೇ ಹೊಯ್ಸಳ ಸಿನೆಮಾದ ಹಾಡುಗಳು, ಟೀಸರ್ ಬಿಡುಗಡೆಯಾಗಿದ್ದು, ಭಾರಿ ಸದ್ದು ಮಾಡುತ್ತಿವೆ. ನಿರೀಕ್ಷೆ ಹೆಚ್ಚಿಸುತ್ತಲೇ ಇರುವ ಗುರುದೇವ್ ಹೊಯ್ಸಳ ಸಿನೆಮಾ ರಿಲೀಸ್ ಗೆ ಇನ್ನೇನು ಕೆಲವೇ ಕೆಲವು ದಿನ ಬಾಕಿ ಇದ್ದು, ಅಭಿಮಾನಿಗಳು ಕಾತುರರಾಗಿ ಕಾಯುತ್ತಿದ್ದಾರೆ. ಹೀಗಿರುವಾಗಲೇ ಚಿತ್ರತಂಡ ಟ್ರೈಲರ್ ಯಾವಾಗ ಬಿಡುಗಡೆ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಬ್ರೇಕ್ ಬಿದ್ದಿದೆ. ಮಾರ್ಚ್ 20, ಸಂಜೆ 7.29 ನಿಮಿಷಕ್ಕೆ "ಗುರುದೇವ್ ಹೊಯ್ಸಳ" ಚಿತ್ರದ ಟ್ರೈಲರ್ ಅನ್ನು ಆನಂದ್ ಆಡಿಯೋ ಚಾನಲ್ ನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಆಸ್ಕರ್‌ ಗೆದ್ದ ಎನ್‌ಟಿಆರ್‌ಗೆ ಹೈದ್ರಾಬಾದ್‌ನಲ್ಲಿ ಅದ್ಧೂರಿ ಸ್ವಾಗತ..! ವಿಡಿಯೋ ನೋಡಿ

"ಗುರುದೇವ್ ಹೊಯ್ಸಳ" ಚಿತ್ರದ ನಾಯಕ ನಟ ಪ್ರಾಮಾಣಿಕ ಅಧಿಕಾರಿನಾ? ನಟರಾಕ್ಷಸನ ರೀತಿ ಭಯಂಕರ ಖಡಕ್ ಅಧಿಕಾರಿನಾ? ಇಲ್ಲಾ ಎನ್​ಕೌಂಟರ್ ಸ್ಪೆಷಲಿಸ್ಟಾ? ಈ ಎಲ್ಲ ಪ್ರಶ್ನೆಗಳು ಸಿನಿ ಪ್ರೇಕ್ಷಕರನ್ನು ಕಾಡುತ್ತಿದ್ದು, ಟ್ರೈಲರ್ ನಲ್ಲಿ ಈ ಎಲ್ಲಾ ಪ್ರಶ್ನೆಗೆ ಉತ್ತರ ಸಿಗುತ್ತಾ ಎಂದು ಕಾಯಬೇಕಿದೆ. ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಯೋಗಿ. ಜಿ. ರಾಜ್ ಹಾಗೂ ಕಾರ್ತಿಕ್ ಗೌಡ ಅವರು ನಿರ್ಮಿಸಿರುವ ‘ಗುರುದೇವ್ ಹೊಯ್ಸಳ’ ಸಿನಿಮಾ ಇದೇ ಮಾರ್ಚ್ 30ರಂದು ವಿಶ್ವದಾದ್ಯಂತ ಕನ್ನಡ ಭಾಷೆಯಲ್ಲಿಯೇ ಬಿಡುಗಡೆಯಾಗಲಿದೆ.

ಒಂದು ಸೋಷಿಯಲ್ ಮೆಸೇಜ್ ಹೊತ್ತಿರುವ ಪಕ್ಕಾ ಕಮರ್ಷಿಯಲ್ ಸಿನೆಮಾ ಇದಾಗಿದ್ದು ನಿರ್ದೇಶಕ ವಿಜಯ್. ಎನ್ ರವರು ಆಕ್ಷನ್ ಕಟ್ ಹೇಳಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಗುರುದೇವ್ ಹೊಯ್ಸಳನಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದು, ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್ ಹಾಗೂ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News