ಆಸ್ಕರ್‌ ಗೆದ್ದ ಎನ್‌ಟಿಆರ್‌ಗೆ ಹೈದ್ರಾಬಾದ್‌ನಲ್ಲಿ ಅದ್ಧೂರಿ ಸ್ವಾಗತ..! ವಿಡಿಯೋ ನೋಡಿ

 ರಾಜಮೌಳಿ ನಿರ್ದೇಶನ ಆರ್‌ಆರ್‌ಆರ್‌ ಸಿನಿಮಾಗೆ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ಲಭಿಸಿದೆ. ಭಾರತೀಯ ಸಿನಿ ಅಭಿಮಾನಿಗಳು ಸೇರಿದಂತೆ ನಟ, ನಟಿಯರು, ರಾಜಕೀಯ ಧುರೀಣರು ಚಕ್ಕಣನ ತಂಡಕ್ಕೆ ಶುಭ ಕೋರುತ್ತಿದ್ದಾರೆ. ಇನ್ನು ಲಾಸ್​ ಏಂಜಲಿಸ್​ನ ಡಾಲ್ಬಿ ಥಿಯೇಟರ್​ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿ ಹೈದ್ರಾಬಾದ್‌ಗೆ ಆಗಮಿಸಿದ ಎನ್‌ಟಿಆರ್‌ಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ. ಈ ಕುರಿತು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Written by - Krishna N K | Last Updated : Mar 15, 2023, 02:43 PM IST
  • ರಾಜಮೌಳಿ ನಿರ್ದೇಶನ ಆರ್‌ಆರ್‌ಆರ್‌ ಸಿನಿಮಾಗೆ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ಲಭಿಸಿದೆ.
  • ನಿರ್ದೇಶಕ ರಾಜಮೌಳಿ, ಎನ್‌ಟಿಆರ್‌, ರಾಮ್‌ಚರಣ್‌ ಅಭಿಮಾನಿಗಳು ಖುಷಿಯಾಗಿದ್ದಾರೆ.
  • ಹೈದ್ರಾಬಾದ್‌ಗೆ ಆಗಮಿಸಿದ ಎನ್‌ಟಿಆರ್‌ಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ.
ಆಸ್ಕರ್‌ ಗೆದ್ದ ಎನ್‌ಟಿಆರ್‌ಗೆ ಹೈದ್ರಾಬಾದ್‌ನಲ್ಲಿ ಅದ್ಧೂರಿ ಸ್ವಾಗತ..! ವಿಡಿಯೋ ನೋಡಿ title=

Jr NTR :  ರಾಜಮೌಳಿ ನಿರ್ದೇಶನ ಆರ್‌ಆರ್‌ಆರ್‌ ಸಿನಿಮಾಗೆ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ಲಭಿಸಿದೆ. ಭಾರತೀಯ ಸಿನಿ ಅಭಿಮಾನಿಗಳು ಸೇರಿದಂತೆ ನಟ, ನಟಿಯರು, ರಾಜಕೀಯ ಧುರೀಣರು ಚಕ್ಕಣನ ತಂಡಕ್ಕೆ ಶುಭ ಕೋರುತ್ತಿದ್ದಾರೆ. ಇನ್ನು ಲಾಸ್​ ಏಂಜಲಿಸ್​ನ ಡಾಲ್ಬಿ ಥಿಯೇಟರ್​ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿ ಹೈದ್ರಾಬಾದ್‌ಗೆ ಆಗಮಿಸಿದ ಎನ್‌ಟಿಆರ್‌ಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ. ಈ ಕುರಿತು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಆರ್‌ಆರ್‌ಆರ್‌ ಚಿತ್ರದ ʼನಾಟು ನಾಟು..ʼ ಹಾಡಿಗೆ ಆಸ್ಕರ್‌ ಲಭಿಸಿದೆ. ಮೊನ್ನೆ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಮತ್ತು ಸಾಹಿತಿ ಚಂದ್ರಬೋಸ್‌ ಅವರಿಗೆ ಆಸ್ಕರ್‌ ನೀಡಿ ಗೌರವಿಸಲಾಯಿತು. ದೇಶದಲ್ಲಿ ಸಿನಿಮಾ ಬಿಡುಗಡೆಗೂ ಮುನ್ನವೇ ನಾಟು ನಾಟು ಸಖತ್‌ ಹಿಟ್‌ ಆಗಿತ್ತು. ನಂತರ ಪ್ರಂಪಂಚದಾದ್ಯಂತ ರಾಮ್​ ಚರಣ್​ ಮತ್ತು ಎನ್​ಟಿಆರ್​ ಡ್ಯಾನ್ಸ್‌ಗೆ​ ಪ್ರೇಕ್ಷಕರು ಫಿದಾ ಆಗಿದ್ದರು. ಅಲ್ಲದೆ, ಉತ್ತಮ ಮೂಲ ಗೀತೆಗಾಗಿ ಹಲವು ಇಂಟರ್‌ನ್ಯಾಷುನಲ್‌ ಪ್ರಶಸ್ತಿಗಳು ಕೂಡ ಲಭಿಸಿದ್ದವು. 

ಇದನ್ನೂ ಓದಿ: Mouni Roy : ಕೆಜಿಎಫ್ ಬೆಡಗಿಯ ಹಾಟ್ ಅವತಾರಕ್ಕೆ ಫ್ಯಾನ್ಸ್ ಫಿದಾ!

ಸದ್ಯ ಎಲ್ಲರ ಭರವಸೆ ನಿಜವಾಗಿದ್ದು, ಆಸ್ಕರ್‌ ಪ್ರಶಸ್ತಿ ಲಭಿಸಿದೆ. ಚಿತ್ರತಂಡ ಸೇರಿದಂತೆ ರಾಜಮೌಳಿ, ಎನ್‌ಟಿಆರ್‌, ರಾಮ್‌ಚರಣ್‌ ಅಭಿಮಾನಿಗಳು ಖುಷಿಯಾಗಿದ್ದಾರೆ. ಇದೀಗ ಕಾರ್ಯಕ್ರಮ ಮುಗಿಸಿಕೊಂಡು ಹೈದ್ರಾಬಾದ್‌ಗೆ ಬಂದ ಎನ್‌ಟಿಆರ್‌ಗೆ ಅವರ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ. ಈ ಕುರಿತು ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಇನ್ನು​ ಎನ್​ಟಿಆರ್​ ಅಭಿನಯದ ಮುಂಬರುವ ಸಿನಿಮಾ ʼಎನ್​ಟಿಆರ್​ 30ʼ ಚಿತ್ರದ ಶೂಟಿಂಗ್‌ ಪ್ರಾರಂಭವಾಗಬೇಕಿದೆ. ಈ ಚಿತ್ರತಂಡವನ್ನು ಜಾನ್ವಿ ಕಪೂರ್‌ ಸೇರಿಕೊಂಡ ವಿಚಾರ ಎಲ್ಲರಿಗೂ ತಿಳಿದಿದೆ. ಖ್ಯಾತ ನಿರ್ದೇಶಕ ಕೊರಟಾಲ ಶಿವ ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಈ ಚಿತ್ರದ ನಂತರ ಎನ್‌ಟಿಆರ್‌ ಪ್ರಶಾಂತ್​ ನೀಲ್​ ಅವರ ಜೊತೆ ಸಿನಿಮಾ ಮಾಡಲಿದ್ದಾರೆ. ಪ್ರಶಾಂತ್‌ ನೀಲ್‌ ಚಿತ್ರವನ್ನು ʼಮೈತ್ರಿ ಮೂವೀ ಮೇಕರ್ಸ್​ʼ ನಿರ್ಮಾಣ ಮಾಡಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News