ʼತಿರುಪತಿ ಬೆಟ್ಟದಲ್ಲಿ ಕ್ರಷ್ ಆಗಿತ್ತು, ಲಡ್ಡು ಕೊಟ್ಟಿದ್ದ : ಕಾವ್ಯಾಶ್ರೀ ಪ್ರೇಮ ಪುರಾಣ
ಬಿಗ್‌ಬಾಸ್ ಮನೆ ಮಂದಿಯ ಮನದಾಳದ ಮಾತುಗಳು ಒಂದೊಂದಾಗಿ ಹೊರಗೆ ಬರುತ್ತಿದೆ. ತಮ್ಮ ಮನಸ್ಸಿನಲ್ಲಿ ನಿಗೂಢವಾಗಿಟ್ಟಿದ್ದ ಗುಟ್ಟುಗಳನ್ನು ರಟ್ಟು ಮಾಡುತ್ತಿದ್ದಾರೆ. ಸದ್ಯ ಕಾವ್ಯಾಶ್ರೀ ಗೌಡ ತಮ್ಮ ಪ್ರೇಮ ಪುರಾಣದ ಬಗ್ಗೆ ಬಾಯ್ಬಿಟ್ಟಿದ್ದಾರೆ.
BBK9 : ಬಿಗ್‌ಬಾಸ್ ಮನೆ ಮಂದಿಯ ಮನದಾಳದ ಮಾತುಗಳು ಒಂದೊಂದಾಗಿ ಹೊರಗೆ ಬರುತ್ತಿದೆ. ತಮ್ಮ ಮನಸ್ಸಿನಲ್ಲಿ ನಿಗೂಢವಾಗಿಟ್ಟಿದ್ದ ಗುಟ್ಟುಗಳನ್ನು ರಟ್ಟು ಮಾಡುತ್ತಿದ್ದಾರೆ. ಸದ್ಯ ಕಾವ್ಯಾಶ್ರೀ ಗೌಡ ತಮ್ಮ ಪ್ರೇಮ ಪುರಾಣದ ಬಗ್ಗೆ ಬಾಯ್ಬಿಟ್ಟಿದ್ದಾರೆ.
ದೊಡ್ಮನೆ ಸ್ಪರ್ಧಿಗಳು ತಮ್ಮ ನೋವು ನಲಿವುಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಜೀವನದಲ್ಲಿ ನಡೆದ ಘಟನೆ, ಲವ್ ಲೈಪ್, ಇಷ್ಟ ಕಷ್ಟಗಳ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ನಟಿ ಕಾವ್ಯಾಶ್ರೀ ತಮ್ಮ ಕ್ರಷ್‌ಗಳ ಮ್ಯಾಟರ್ ಲೀಕ್ ಮಾಡಿದ್ದಾರೆ. ನಾನು ನಮ್ಮ ಅಜ್ಜಿಯ ಊರಿನ ಜಾತ್ರೆಗೆ ಹೋಗಿದ್ದೆ. ಅಲ್ಲಿ ಒಬ್ಬ ಹುಡುಗ ನನ್ನ ಫಾಲೋ ಮಾಡ್ತೀದ್ದ. ಅವನು ನೋಡೋಕೆ ಯಶ್ ಥರಾ ಇದ್ದ. ಅವನು ಹಾಗೂ ಅವನ ಸ್ನೇಹಿತರು ನನ್ನ ಫಾಲೋ ಮಾಡುತ್ತಿದ್ರು. ಅವನು ಹತ್ತಿರ ಬಂದಾಗ ನನಗೆ ಎದರಿಕೆ ಆಯ್ತು. ಅವನು ನನ್ನ ಬ್ಯಾಗ್‌ನಲ್ಲಿ ಅವನ ಫೋನ್ ನಂಬರ್ ಬರೆದ ಚೀಟಿ ಹಾಕಿ ಹೋದ. ನಾನು ಹೆದರಿ ಅಲ್ಲಿಂದ ಹೋಗ್ಬಿಟ್ಟೆ. ಅಷ್ಟೇ ಆ ಮ್ಯಾಟರ್ ಅಲ್ಲಿಗೆ ಕ್ಲೋಸ್ ಆಯ್ತು ಎಂದ್ರು.
ಇದನ್ನೂ ಓದಿ: ಸೋತು, ಗೆದ್ದು ಬಿಗ್ ಹೌಸ್ ಕ್ಯಾಪ್ಟನ್ ಆದ ದೀಪಿಕಾ ದಾಸ್..!
ಅಲ್ಲದೆ ಇನ್ನೊಂದು ಕ್ರಷ್ ಮ್ಯಾಟರ್ ಒಪನ್ ಮಾಡಿದ ಕಾವ್ಯಾಶ್ರೀ, ತಿರುಪತಿ ಬೆಟ್ಟದಲ್ಲಿ ನನ್ಗೆ ಇನ್ನೊಂದು ಕ್ರಷ್ ಆಗಿತ್ತು. ಒಬ್ಬ ಹುಡುಗ ನನ್ನ ಫಾಲೋ ಮಾಡಿದ್ದ. ನಾನು ಎಲ್ಲಿ ಹೋದ್ರು ಅವನು ಅಲ್ಲಿ ಇರ್ತಿದ್ದ. ತಿರುಪತಿ ದೇವರ ದರ್ಶನಕ್ಕೆ ಹೋದಾಗಲೂ ಸಹ ಅವನು ಹಿಂಬಾಲಿಸಿಕೊಂಡು ಬಂದಿದ್ದ. ನಾನು ಎಲ್ಲಿ ಹೋದ್ರು ಅವನು ಅಲ್ಲಿ ಇರ್ತಿದ್ದ. ಹೀಗೆ ಫಾಲೋ ಮಾಡಿ ಕೊನೆಗೆ ಲಡ್ಡು ಕೊಟ್ಬಿಟ್ಟ. ಆಗ ಅಮ್ಮ ಯಾರು ಕೊಟ್ಟರು ಅಂತ ಕೇಳಿದ್ರು. ಅಲ್ಲಿಂದ ದೇವಸ್ಥಾನದ ಆಚೆ ಬಂದಾಗ ನನ್ನ ಬ್ಯಾಗ್‌ನಲ್ಲಿ ಅವನ ಫೋನ್ ನಂಬರ್ ಇಟ್ಟು ಹೋಗಿದ್ದ ಎಂದು ತಮ್ಮ ಪ್ರೇಮ ಕಥೆಗಳನ್ನು ಮನೆ ಸದಸ್ಯರ ಮುಂದೆ ಕಾವ್ಯಾಶ್ರೀ ಹೇಳಿಕೊಂಡರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.