BBK 9: ಗೋಲ್ಡ್ ಮೈನ್ ಟಾಸ್ಕ್‌ನಲ್ಲಿ ಸೋಲು ಅನುಭವಿಸಿ ಬಿಗ್ ಬಾಸ್ ನೀಡಿದ್ದ ವಿಶೇಷ ಚಟುವಟಿಯಲ್ಲಿ ಗೆದ್ದ ದೀಪಿಕಾ ದಾಸ್‌ಗೆ ಕ್ಯಾಪ್ ಕ್ಯಾಪ್ಟನ್ಸಿ ನೀಡಲಾಗಿದೆ. ಅಲ್ಲದೆ, ಅರುಣ್ ಸಾಗರ್ ಕಳಪೆ ಸ್ಪರ್ಧಿಯಾಗಿದ್ದು, ದೀಪಕಾ ಅತ್ಯುತ್ತಮ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.
ಬಿಗ್ ಬಾಸ್ ನೀಡಿದ್ದ ʼಗೋಲ್ಡ್ ಮೈನ್’ ಟಾಸ್ಕ್‌ನ ಆರಂಭದಲ್ಲೇ ದೀಪಿಕಾ ಸೋಲನ್ನು ಅನುಭವಿಸಿದರು. ತದನಂತರ ಬಿಗ್ ಬಾಸ್ ನೀಡಿದ್ದ ಟಂಗ್ ಟ್ವೀಸ್ಟ್ ವಿಶೇಷ ಟಾಸ್ಕ್‌ನಲ್ಲಿ ಗೆಲುವು ಸಾಧಿಸಿದರು. ಆ ಮೂಲಕ ಮತ್ತೆ ಗೋಲ್ಡ್ ಮೈನ್ ಆಟಕ್ಕೆ ದೀಪಿಕಾ ಸೇರ್ಪಡೆಯಾದರು. ಇನ್ನು ಕ್ಯಾಪ್ಟನ್ಸಿ ಟಾಸ್ಕ್ ತುಂಬಾ ಕಠಿಣವಾಗಿತ್ತು.
ಇನ್ನು ನಾಯಕತ್ವದ ರೇಸ್‌ನಲ್ಲಿದ್ದ ಅನುಪಮಾ ಗೌಡ, ರೂಪೇಶ್ ಶೆಟ್ಟಿ ಹಾಗೂ ದೀಪಿಕಾ ಇದ್ದರು.
ಇದನ್ನೂ ಓದಿ: ʼಗಂಧದಗುಡಿʼ ಅಪ್ಪು ಜೊತೆ ʼತ್ರಿಬಲ್ ರೈಡಿಂಗ್ʼ ಹೊರಟ ಗೋಲ್ಡನ್ ಸ್ಟಾರ್ ಗಣೇಶ್..!
ನಾಯಕತ್ವ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಕಣ್ಣಿಗೆ ಪಟ್ಟಿಯನ್ನು ಕಟ್ಟಿಕೊಂಡು ತಮಗೆ ನೀಡಿದ್ದ ದಾರಿಯ ಒಳಗೆ ಹೋಗಿ 6 ಆಕೃತಿಗಳನ್ನು ಹುಡುಕಬೇಕಿತ್ತು. ಈ ರೀತಿಯಾಗಿ ಮೊದಲು ಯಾರೂ 6 ಆಕೃತಿಗಳನ್ನು ತರುತ್ತಾರೋ ಅವರು ಬಿಗ್‌ಬಾಸ್ ಮನೆಯ ಕ್ಯಾಪ್ಟೆನ್. ಈ ಟಾಸ್ಕ್‌ನಲ್ಲಿ ದೀಪಿಕಾ ದಾಸ್ ಗೆದ್ದು ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
ವಿಶೇಷ ಅಂದ್ರೆ ಹಿಂದೆ ಬಿಗ್ ಬಾಸ್ ಕನ್ನಡ ಸೀಸನ್ 7 ರಲ್ಲಿ ದೀಪಿಕಾ ಒಂದು ಬಾರಿಯೂ ಕ್ಯಾಪ್ಟನ್ ಆಗಿರಲಿಲ್ಲ. ಸದ್ಯ ಬಿಗ್ ಬಾಸ್ ಕನ್ನಡ 9ರಲ್ಲಿ ನಾಯಕಿಯಾಗಿ ದೀಪಿಕಾ ಗೆಲುವಿನ ನಗೆ ಬೀರಿದ್ದಾರೆ. ಈ ಕುರಿತು ಸಂತೋಷ ಹಂಚಿಕೊಂಡಿರುವ ದೀಪಾಕ, ಇದನ್ನ ನಂಬೋಕೆ ಸಾಧ್ಯವಾಗುತ್ತಿಲ್ಲ. ಕಳೆದ ಸೀಸನ್‌ನಲ್ಲಿ ಒಮ್ಮೆಯೂ ಕ್ಯಾಪ್ಟನ್ ಆಗಿರಲಿಲ್ಲ. ಸದ್ಯ ನನ್ನ ಕನಸು ಈಡೇರಿದೆ. ಎಲ್ಲರಿಗೂ ಥ್ಯಾಂಕ್ಸ್ ಎಂದು ಖುಷಿ ಹಂಚಿಕೊಂಡರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.