ಬೆಂಗಳೂರು : ಕೆಜಿಎಫ್2 (KGF 2) ಈಗಾಗಲೇ ಎಲ್ಲಾ ಕಡೆಯಲ್ಲೂ ಹವಾ ಸೃಷ್ಟಿಸಿದೆ. ಕನ್ನಡದ ಕೆಜಿಎಫ್ 2 ಚಿತ್ರ ಈಗ ಸಾಕಷ್ಟು ಸುದ್ದಿಯಲ್ಲಿದೆ. ಚಿತ್ರ ಸದ್ಯದಲ್ಲೇ ರಿಲೀಸ್ ಆಗಲಿದೆ. ಅದಕ್ಕಿಂತ ಮೊದಲೇ ಅದರ ಬೇರೆ ಬೇರೆ ಭಾಷೆಯ ಆವೃತ್ತಿಯ ಹಕ್ಕುಗಳು ಸದ್ದು ಮಾಡುತ್ತಿದೆ. 


COMMERCIAL BREAK
SCROLL TO CONTINUE READING

65 ಕೋಟಿಗೆ ಸೇಲಾಯಿತು ತೆಲುಗು ರೈಟ್ಸ್.!
ಕನ್ನಡ, ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಸೇರಿ ಒಟ್ಟು 5 ಭಾಷೆಗಳಲ್ಲಿ ಕೆಜಿಎಫ್ ಚಿತ್ರ (Cinema) ತೆರೆಕಾಣುತ್ತಿದೆ. ರಾಕಿಂಗ್ ಸ್ಟಾರ್ ಯಶ್ (Rocking Star Yash) , ಸಂಜಯ್ ದತ್ (Sanjay Dut) , ರವೀನಾ ಟಂಡನ್ (Ravina Tandon)  ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ಪ್ರಶಾಂತ್ ನೀಲ್ (Prashant Neil) ಆಕ್ಷನ್ ಕಟ್ ಹೇಳಿದ್ದಾರೆ. ಹಾಗಾಗಿ ಚಿತ್ರದ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 


ಇದನ್ನೂ ಓದಿ : Kiccha sudeep: ತವರು ಜಿಲ್ಲೆಯಲ್ಲಿ ಗ್ರಾಮವೊಂದನ್ನು ದತ್ತು ಪಡೆದ 'ಕಿಚ್ಚ' ಸುದೀಪ್‌..!


ಇದೀಗ ಸುದ್ದಿಯಾಗಿರುವುದು ಚಿತ್ರದ ತೆಲುಗು ರೈಟ್ಸ್ Telugu Rights). ಗೊತ್ತಾಗಿರುವ ಮಾಹಿತಿ ಪ್ರಕಾರ, ಕೆಜಿಎಫ್ 2 (KGF 2) ಚಿತ್ರದ ತೆಲುಗು ರೈಟ್ಸ್ ಬರೋಬ್ಬರಿ 65 ಕೋಟಿ ರೂಪಾಯಿಗಳಿಗೆ ಸೇಲಾಗಿದೆಯಂತೆ. ಟಾಲಿವುಡ್ (tollywood) ಖ್ಯಾತ ನಿರ್ಮಾಪಕ ದಿಲ್ ರಾಜು (Telugu Producer) ಟಾಲಿವುಡ್ ರೈಟ್ಸ್ ಪಡೆದಿದ್ದಾರಂತೆ. ಮೊದಲು 85 ಕೋಟಿ ರೂಪಾಯಿ ತನಕವೂ ಬೇಡಿಕೆ ಇತ್ತಂತೆ. ನಂತರ ಮಾತುಕತೆ ನಡೆದು 65 ಕೋಟಿ ರೂಪಾಯಿಗಳಿಗೆ ಫೈನಲ್ ಡೀಲ್ ನಡೆದಿದೆ ಎಂದು ಉದ್ಯಮದ ಮೂಲಗಳು ಹೇಳಿವೆ. 


ಕೇವಲ ಟೀಸರ್ ನಿಂದಲೇ ಕೋಟಿ ಗಳಿಸಿದ ಚಿತ್ರ :


ಕೆಜಿಎಫ್ 2 ಟೀಸರ್ (KGF 2 teaser) ಇದುವರೆಗೆ 155 ಮಿಲಿಯನ್ ವ್ಯೂವ್ಸ್ ಪಡೆದಿದೆ. ಈ ಲೆಕ್ಕಾಚಾರದಲ್ಲಿ 2.18 ಕೋಟಿ ರೂಪಾಯಿ ಅದು ಯುಟ್ಯೂಬ್ನಿಂದಲೇ (Youtube) ಗಳಿಸಿದೆ. ಟೀಸರ್ ಬಿಡುಗಡೆಯಾದ ಸಂದರ್ಭದಲ್ಲೇ ಅದು ಯುಟ್ಯೂಬ್ನಿಂದ 1 ಕೋಟಿ ರೂಪಾಯಿ ಗಳಿಸಿದೆ ಎಂದು ಹೇಳಲಾಗಿದೆ. ನಿಮಗೆ ಗೊತ್ತಿರಲಿ, ವಿಡಿಯೋ ಎಷ್ಟು ವಿವ್ಸ್ (Views) ಪಡೆದಿದೆ ಎಂಬ ಲೆಕ್ಕಾಚಾರದ ಮೇಲೆ ಯುಟ್ಯೂಬ್ ದುಡ್ಡು ನೀಡುತ್ತಿದೆ. ಈ ಲೆಕ್ಕದ ಆಧಾರದ ಮೇಲೆ ಕೆಜಿಎಫ್ 2 ಇದುವರೆಗೆ 2.18 ಕೋಟಿ ಗಳಿಸಿದೆಯಂತೆ. ವಿಶೇಷವೆಂದರೆ ಇದು ಕನ್ನಡದ ಹೀರೋ ಪಡೆಯುವ ಸಂಭಾವನೆಗಿಂತಲೂ ಹೆಚ್ಚು.


ಇದನ್ನೂ ಓದಿ : ಮತ್ತೆ ತಾಯಿಯಾದ ಸಂಭ್ರಮದಲ್ಲಿ Kareena Kapoor Khan, ತಮ್ಮನನ್ನು ಸ್ವಾಗತಿಸಿದ Taimur


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.