ಕನ್ನಡ ಸಿನಿರಂಗದ ಬಹುನಿರೀಕ್ಷಿತ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್‌ ಚಾಪ್ಟರ್‌ 2 ಇಂದು ಅದ್ಧೂರಿಯಾಗಿ ಬೆಳ್ಳಿ ತೆರೆಗೆ ಅಪ್ಪಳಿಸಿದೆ. ಕೊರೊನಾ ಕಾರಣದಿಂದಾಗಿ ತಡವಾಗಿ ರಿಲೀಸ್ ಆದ ಈ ಚಿತ್ರಕ್ಕಾಗಿ ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: KGF 2 Twitter Review: 'ಕೆಜಿಎಫ್ 2' ಸಿನಿಮಾ ಬಗ್ಗೆ ಏನನ್ನುತ್ತೆ ಟ್ವಿಟರ್‌ ರಿವೀವ್‌?


ಮಧ್ಯರಾತ್ರಿಯಿಂದಲೇ ಜನ ಕೆಜಿಎಫ್‌2 ಸಿನಿಮಾ ವೀಕ್ಷಿಸುತ್ತಿದ್ದಾರೆ. ಬೆಂಗಳೂರಿನ ಥಿಯೇಟರ್‌ ಒಂದರಲ್ಲಿ ಇನ್ನೇನು ಸಿನಿಮಾ ಶುರುವಾಗಬೇಕು ಎನ್ನುವಷ್ಟರಲ್ಲಿ ವೀಕ್ಷಕರಿಗೆ ಒಮ್ಮೆಲೇ ನಿರಾಸೆಯಾಗಿದೆ. ಇದೇ ಕಾರಣಕ್ಕೆ ಸಿನಿಮಾ ನೋಡಲು ಬಂದವರು  ಆಕ್ರೋಶ ಹೊರಹಾಕಿದ್ದಾರೆ.


ಬೆಂಗಳೂರಿನ ಮಾಗಡಿ ರಸ್ತೆಯ ವಿರೇಶ್ ಥಿಯೇಟರ್‌ನ ಸಿಬ್ಬಂದಿಗಳ ಯಡವಟ್ಟಿನಿಂದಾಗಿ ಕೆಜಿಎಫ್‌ ಚಾಪ್ಟರ್ 2 ರ ಬದಲಿಗೆ ಚಾಪ್ಟರ್ 1 ಹಾಕಲಾಗಿದೆ. ಶೋ ಶುರುವಾದ 20 ನಿಮಿಷ ಕೆಜಿಎಫ್ ಚಾಪ್ಟರ್ 1 ಪ್ರದರ್ಶನಗೊಂಡಿದೆ. ಇದನ್ನು ನೋಡಿದ ಸಿನಿಪ್ರಿಯರು ಥಿಯೇಟರ್‌ ಸಿಬ್ಬಂದಿ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಥಿಯೇಟರ್ ಹಾಲ್‌ನಿಂದ ಹೊರಬಂದು ಥಿಯೇಟರ್ ಸಿಬ್ಬಂದಿ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. 


ಇದನ್ನೂ ಓದಿ: KGF 2 Box Office:ಬಾಕ್ಸ್ ಆಫೀಸಿನಲ್ಲಿ ಇದು ವರೆಗೆ ಕೆಜಿಎಫ್2 ಕಲೆ ಹಾಕಿದ್ದೆಷ್ಟು?


ವಿರೇಶ್ ಥಿಯೇಟರ್ ನ ಸ್ಕ್ರೀನ್ 2 ರಲ್ಲಿ ಕೆಜಿಎಫ್‌ ಚಾಪ್ಟರ್ 2 ರ ಬದಲಿಗೆ ಚಾಪ್ಟರ್ 1 ಪ್ರದರ್ಶನ ಮಾಡಿದ್ದ ಸಿಬ್ಬಂದಿ ಟೆಕ್ನಿಕಲ್ ಇಶ್ಯೂ ಆಗಿ ಕನ್ಫ್ಯೂಸ್ ಆಗಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಬೆಳಗ್ಗೆ 5 ಗಂಟೆಗೆ ಬಂದು ಕಾಯ್ತಿದ್ದೀವಿ ಕೆಜಿಎಫ್‌ 2 ರ ಬದಲಿಗೆ ಕೆಜಿಎಫ್‌ 1 ಹಾಕಿದ್ದಾರೆ ಎಂದು ಫ್ಯಾನ್ಸ್‌ ಅಸಮಾಧಾನಗೊಂಡಿದ್ದಾರೆ.  ಬೆಳಗ್ಗೆ 6 ಗಂಟೆಯ ಶೋನಲ್ಲಿ ಈ ಯಡವಟ್ಟು ಸಂಭವಿಸಿದೆ. 40 ನಿಮಿಷ ತಡವಾಗಿ ಕೆಜಿಎಫ್ ಚಾಪ್ಟರ್ 2 ಪ್ರದರ್ಶನ ಆರಂಭವಾಗಿದೆ. 


ಲೈಸೆನ್ಸ್ ಇಶ್ಯೂ ಆಗಿ ಕೆಜಿಎಫ್ ಚಾಪ್ಟರ್ 2 ಪ್ರದರ್ಶನ ತಡವಾಗಿತ್ತು ಎಂದು ತಿಳಿದುಬಂದಿದೆ. ಸದ್ಯ ವಿರೇಶ್ ಥಿಯೇಟರ್ ನ ಹಾಲ್ 2 ನಲ್ಲಿ ಕೆಜಿಎಫ್ 2 ಪ್ರದರ್ಶನವಾಗುತ್ತಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.