ಬೆಂಗಳೂರು:  ಕಳೆದ ಎರಡು ವರ್ಷಗಳಿಂದ ಕೆಜಿಎಫ್ 2 ಗಾಗಿ (KGF 2) ಕಾಯುತ್ತಿದ್ದ ಯಶ್ (Yash) ಅಭಿಮಾನಿಗಳಿಗೆ , ಸಿನಿ ಪ್ರಿಯರಿಗೊಂದು  ಸಿಹಿ ಸುದ್ದಿ. ಕೆಜಿಎಫ್ 2 ಟೀಸರ್ (Teaser) ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. 


COMMERCIAL BREAK
SCROLL TO CONTINUE READING

2021ರ ಜ. 8ಕ್ಕೆ ಕೆಜಿಎಫ್ (KGF) ಟೀಸರ್ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಸಿಹಿ ಸುದ್ದಿ ನೀಡಿದ್ದಾರೆ.  ಜ. 8 ಬೆಳಿಗ್ಗೆ 10 ಗಂಟೆ 18 ನಿಮಿಷಕ್ಕೆ ಸರಿಯಾಗಿ ಹೊಂಬಾಳೆ ಫಿಲಂಸ್ (Hombale films)ಯೂಟ್ಯೂಬ್ ಚಾನೆಲ್ ನಲ್ಲಿ ಕೆಜಿಎಫ್ 2 ಟೀಸರ್ ಬಿಡುಗಡೆಯಾಗಲಿದೆ. 


ಕೆಜಿಎಫ್ 2 ಇದೊಂದು ಸಾಮ್ರಾಜ್ಯದ ಝಲಕ್, ಇದಕ್ಕಾಗಿ ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬೇಕಾಯಿತು. ಆದರೆ ನಾವು ಬಹಳ ಬಲಿಷ್ಟರಾಗಿ, ದೊಡ್ಡ ರೀತಿಯಲ್ಲಿ ನಿಮ್ಮ ಮುಂದೆ ಬರಲಿದ್ದೇವೆ ಎಂದು ಪ್ರಶಾಂತ್ ನೀಲ್ (Prashanth neel) ಟ್ವೀಟ್ ಮೂಲಕ ತಿಳಿಸಿದ್ದಾರೆ. 


ಇಂಟರ್ನೆಟ್ ನಲ್ಲಿ ಮುಂದುವರೆದ 'KGF 2 Chapter-2' ನಟ ಯಶ್ ಜಾದೂ, ಲಕ್ಷಾಂತರ ಟ್ವೀಟ್


ಡಿ. 21, 2018ಕ್ಕೆ ಹಿಂದಿ ಸೇರಿ ಪಂಚಭಾಷೆಗಳಲ್ಲಿ ಬಿಡುಗಡೆಯಾದ ಕೆಜಿಎಫ್ ಚಾಪ್ಟರ್ 1, ಎಲ್ಲಾ ಕಡೆ ಯಶಸ್ಸು ಕಂಡಿತ್ತು.


ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ 'KGF 2' ತಂಡದಿಂದ ಗಿಫ್ಟ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.