Kiccha Sudeep first movie : 27 ವರ್ಷಗಳ  ಸಿನಿ ಜರ್ನಿ ಪೂರೈಸಿರುವ ಕಿಚ್ಚ ಸುದೀಪ್‌ ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಸಾಕಷ್ಟು ಸೋಲು, ಗೆಲುವನ್ನು ಕಂಡು, ಇಂದು ಜಗತ್ತಿನಾದ್ಯಂತ ಕಿಚ್ಚ ಸುದೀಪ್‌ ಚಿರಪರಿಚಿತರಾಗಿದ್ದಾರೆ. ಹುಚ್ಚ ಚಿತ್ರದ ನಂತರ ಸುದೀಪ್ ಸಿನಿ ಕರಿಯರ್‌ ಗೋಲ್ಡನ್‌ ಅಧ್ಯಾಯ ಶುರುವಾಯಿತು. ಬಾಕ್ಸ್ ಆಫೀಸ್ ನಲ್ಲಿ ಅನೇಕ ಸಿನಿಮಾಗಳು ಮುಗ್ಗರಿಸಿದ್ದವು. ಕಿಚ್ಚನ ಸಿನಿ ಕರಿಯರ್‌ಗೆ ಟರ್ನಿಂಗ್‌ ಪಾಯಿಂಟ್‌ ನೀಡಿದ್ದೆ ಹುಚ್ಚ ಸಿನಿಮಾ. ಕನ್ನಡ ಮಾತ್ರವಲ್ಲ ತೆಲುಗು, ಹಿಂದಿ, ಹಾಗೂ ತಮಿಳು ಸೇರಿದಂತೆ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಈಗಲೂ ಅನೇಕರು ಪ್ಯಾನ್ ಇಂಡಿಯಾ ಸ್ಟಾರ್‌ ಕಿಚ್ಚ ಸುದೀಪ್‌ ಮೊದಲ ಸಿನಿಮಾ ʻಸ್ಪರ್ಷʼ ಎಂದು ಕೊಂಡಿದ್ದಾರೆ. ಆದರೆ ಸುದೀಪ್‌ ಮೊದಲು ಬಣ್ಣ ಹಚ್ಚಿದ ಸಿನಿಮಾ ಸ್ಪರ್ಷ ಅಲ್ಲ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : #27YearsOfKichcha : ಕಿಚ್ಚನ ಸಿನಿ ಪಯಣಕ್ಕೆ 27 ವರ್ಷ, ಫ್ಯಾನ್ಸ್‌ಗೆ ಬಿಗ್‌ ಸರ್‌ಪ್ರೈಸ್?


ಸುದೀಪ್ 27 ವರ್ಷಗಳ ಹಿಂದೆ ಜನವರಿ 31ರಂದು ಮೊದಲು ಬಣ್ಣ ಹಚ್ಚಿ, ಕ್ಯಾಮರಾ ಮುಂದೆ ಅಭಿನಯಿಸಿದರು. ಆದರೆ ಆ ಸಿನಿಮಾ ರಿಲೀಸ್‌ ಆಗಲಿಲ್ಲ. ಸುದೀಪ್ ಮೊದಲು ಅಭಿನಯಿಸಿದ ಈ ಚಿತ್ರ ʻಬ್ರಹ್ಮʼ. ʻಸ್ಪರ್ಷʼ ಸಿನಿಮಾಗಿಂತ ಮೊದಲು ಸುದೀಪ್‌ ʻಬ್ರಹ್ಮʼ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹೀಗಾಗು ಸುದೀಪ್‌ ಅಭಿನಯದ ಮೊದಲ ಸಿನಿಮಾ ʻಬ್ರಹ್ಮʼ. 


ಹೌದು, ಸುದೀಪ್‌ ತಮ್ಮ ಸಿನಿ ಜರ್ನಿಯಲ್ಲಿ ಸಾಕಷ್ಟು ಏಳು ಬೀಳು ಕಂಡವರು. ಕಿಚ್ಚನ ಮೊದಲ ಮೂರು ಸಿನಿಮಾಗಳಲ್ಲಿ ಬ್ರಹ್ಮ, ಓ ಕುಸುಮ ಬಾಲೆ ಸಿನಿಮಾಗಳು ಬಿಡುಗಡೆಯಾಗಲೇ ಇಲ್ಲ. ಸ್ಪರ್ಶ ಚಿತ್ರದ ಮೂಲಕ ನಟ ಸುದೀಪ್‌ ಖ್ಯಾತಿ ಪಡೆದರು. ನಂತರ ಬಂದ ಹುಚ್ಚ ಸಿನಿಮಾ ಸಕ್ಸ್‌ಸ್‌ ನೀಡಿತು. ಅಲ್ಲಿಂದ ಇಲ್ಲಿಯವರೆಗೂ ಕಿಚ್ಚ ಬೆಳೆದು ಬಂದ ಹಾದಿ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. 


ಇದನ್ನೂ ಓದಿ : Sudeep - Puneeth : ಅಪ್ಪು ಇದ್ರೆ ಕಾಲ್ ಮಾಡ್ತಿದ್ರು ಅನ್ಸುತ್ತೇ.! ಸುದೀಪ್‌ಗೆ ಪುನೀತ್‌ ವಿಶ್‌ ಮಾಡಿದ್ದ ಆಡಿಯೋ ವೈರಲ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.