ಬೆಂಗಳೂರು: ಇಂದಿನಿಂದ ನವರಾತ್ರಿ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಸಿನಿ ಪ್ರಿಯರಿಗೆ ಶುಭ ಸುದ್ದಿಯೊಂದು ದೊರೆತಿದೆ. ಕಿಚ್ಚ ಸುದೀಪ್ (Kichcha Sudeepa) ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ-3 (Kotigobba 3) ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದ್ದು, ನವರಾತ್ರಿಯ ಮೊದಲ ದಿನವಾದ ಇಂದು ಚಿತ್ರದ ಟ್ರೈಲರ್ ಬಿಡುಗಡೆ ಆಗಲಿದೆ.


COMMERCIAL BREAK
SCROLL TO CONTINUE READING

ಇದೇ ಅಕ್ಟೋಬರ್ 14ರಂದು ಬೆಳ್ಳಿತೆರೆಯ ಮೇಲೆ ಅದ್ಧೂರಿಯಾಗಿ ಲಗ್ಗೆ ಇಡಲು ಸಜ್ಜಾಗಿರುವ 
'ಕೋಟಿಗೊಬ್ಬ-3' (Kotigobba 3) ಸಿನಿಮಾ ಸೆನ್ಸಾರ್ ಮಂಡಳಿಯಲ್ಲಿ ಪಾಸ್ ಆಗಿದ್ದು ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಈ ಬಗ್ಗೆ ಸ್ವತಃ ಕಿಚ್ಚ ಸುದೀಪ್ (Kichcha Sudeepa) ಅವರೇ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. 


Nora Fatehi Viral Photo:Instagramನಲ್ಲಿ ಹಂಚಿಕೊಳ್ಳುತ್ತಲೇ ವೈರಲ್ ಅದ ನೋರಾ ಫತೇಹಿ ಭಾವಚಿತ್ರ


ಮುಂದಿನವಾರ ಸಿನಿಮಾ ಬಿಡುಗಡೆಗಾಗಿ ಸಿನಿ ಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ನವರಾತ್ರಿಯ ಉಡುಗೊರೆಯಾಗಿ ಇಂದು ಕೋಟಿಗೊಬ್ಬ-3 ಸಿನಿಮಾದ ಟ್ರೈಲರ್ (Kotigobba 3 Trailer) ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಕುರಿತಂತೆ ಕಿಚ್ಚ ಸುದೀಪ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.


Katrina Kaif: ಅಕ್ಷಯ್ ಕುಮಾರ್‌ಗೆ ರಾಖಿ ಕಟ್ಟಲು ಬಯಸಿದ್ದ ಕತ್ರಿನಾ ಕೈಫ್, ಕಾರಣ ಏನು ಗೊತ್ತಾ?


ಕೋಟಿಗೊಬ್ಬ-3 ಸಿನಿಮಾದ ಮೂಲಕ ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಪ್ರಥಮ ಬಾರಿಗೆ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿದ್ದಾರೆ.  ಚಿತ್ರಕ್ಕೆ ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಮಾಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.