Viral Video: ಡ್ಯಾನ್ಸ್ ಮಾಡುತ್ತಲೇ ವೇದಿಕೆಯ ಮೇಲೆ ಬಿದ್ದ ಸಪ್ನಾ ಚೌಧರಿ..!

ಸಪ್ನಾ ಚೌಧರಿ ಈ ಹಿಂದೆಯೂ ಅನೇಕ ಬಾರಿ ನೃತ್ಯ ಮಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದ ಪ್ರಸಂಗಗಳು ಜರುಗಿವೆ

Written by - Puttaraj K Alur | Last Updated : Oct 2, 2021, 01:28 PM IST
  • ತನ್ನದೇ ಹಿಟ್ ಹಾಡು ‘ಗೋಲಿ ಚಲ್ ಜಾವೇಗಿ’ಗೆ ಸಖತ್ ಆಗಿ ಡ್ಯಾನ್ಸ್ ಮಾಡುತ್ತಿದ್ದ ಸಪ್ನಾ ಚೌಧರಿ
  • ವೇದಿಕೆಯ ಮೇಲೆ ಮೈಮರೆತು ನೃತ್ಯ ಮಾಡುತ್ತಿದ್ದ ವೇಳೆ ಜಾರಿಬಿದ್ದ ಸಪ್ನಾ ಚೌಧರಿ
  • ಹರಿಯಾಣದ ಸೂಪರ್‌ಸ್ಟಾರ್ ಸಪ್ನಾ ಚೌಧರಿ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್
Viral Video: ಡ್ಯಾನ್ಸ್ ಮಾಡುತ್ತಲೇ ವೇದಿಕೆಯ ಮೇಲೆ ಬಿದ್ದ ಸಪ್ನಾ ಚೌಧರಿ..! title=
ನೃತ್ಯ ಮಾಡುತ್ತಿದ್ದ ವೇಳೆ ಜಾರಿಬಿದ್ದ ಸಪ್ನಾ ಚೌಧರಿ (Photo Courtesy: @Zee News)

ನವದೆಹಲಿ: ಹರಿಯಾಣದ ದೇಸಿ ಕ್ವೀನ್ ಎಂದೇ ಖ್ಯಾತಯಾಗಿರುವ ಸಪ್ನಾ ಚೌಧರಿ(Sapna Chaudhary)ಯ ಅನೇಕ ಡ್ಯಾನ್ಸ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ತನ್ನ ಮೋಹಕ ನೃತ್ಯದ ಮೂಲಕ ಅಭಿಮಾನಿಗಳ ಹೃದಯಬಡಿತವನ್ನು ಹೆಚ್ಚಿಸುವ ಡ್ಯಾನ್ಸರ್ ಸಪ್ನಾರ ಮತ್ತೊಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ.   

ತನ್ನ ಮನಮೋಹಕ ನೃತ್ಯ(Sapna Chaudhary Dance)ದ ಮೂಲಕವೇ ಅಪಾರ ಜನಪ್ರಿಯತೆ ಗಳಿಸಿರುವ ಸಪ್ನಾ ಚೌಧರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರ ವೇದಿಕೆ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಸೇರುತ್ತಾರೆ. ಮದುವೆಯಾಗಿ ಒಂದು ಮಗುವಿನ ತಾಯಿಯೂ ಆಗಿರುವ ಸಪ್ನಾ ನೃತ್ಯ ಮಾಡುವುದನ್ನು ಇಂದಿಗೂ ನಿಲ್ಲಿಸಿಲ್ಲ. ಆಗಾಗ ಡ್ಯಾನ್ಸ್ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಲೇ ಸದ್ದು ಮಾಡುವ ಸಪ್ನಾರ ಕ್ರೇಜ್ ಎಳ್ಳಷ್ಟು ಕಡಿಮೆಯಾಗಿಲ್ಲ.

ಇದನ್ನೂ ಓದಿ: ಮದುವೆಯಲ್ಲಿ ಊಟ ಕೊಡಲಿಲ್ಲವೆಂದು ಫೋಟೋಗಳನ್ನೇ ಡಿಲೀಟ್ ಮಾಡಿದ ಫೋಟೋಗ್ರಾಫರ್!

ಸಪ್ನಾರ ನೃತ್ಯ ಕಾರ್ಯಕ್ರಮವಿದೆ ಎಂದರೆ ಸಾಕು ಅವರನ್ನು ನೋಡಲು ಜನರು ದಂಡಿಯಾಗಿ ಆಗಮಿಸುತ್ತಾರೆ. ಹೀಗೆ ಮೈಮರೆತು ಡ್ಯಾನ್ಸ್ ಮಾಡುತ್ತಿರುವಾಗ ವೇದಿಕೆ ಮೇಲೆಯೇ ಸಪ್ನಾ ಅನೇಕ ಬಾರಿ ಮುಜುಗರಕ್ಕೊಳಗಾದ ಪ್ರಸಂಗಗಳು ಜರುಗಿವೆ. ಹರಿಯಾಣದ ಸೂಪರ್‌ಸ್ಟಾರ್ ಸಪ್ನಾ ಚೌಧರಿ ವೇದಿಕೆ ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಆಯತಪ್ಪಿ ಜಾರಿಬಿದಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾ(Social Media)ದಲ್ಲಿ ಸಖತ್ ವೈರಲ್ ಆಗಿದೆ.   

ಸಪ್ನಾ ಚೌಧರಿ ಲೈವ್ ಸ್ಟೇಜ್ ಶೋನಲ್ಲಿ ತನ್ನದೇ ಹಿಟ್ ಹಾಡು ‘ಗೋಲಿ ಚಲ್ ಜಾವೇಗಿ’(Goli Chal Javegi)ಗೆ ಸಖತ್ ಆಗಿ ಡ್ಯಾನ್ಸ್ ಮಾಡುತ್ತಿದ್ದರು. ನೆರೆದಿದ್ದ ನೂರಾರು ಜನರು ಅವರ ನೃತ್ಯವನ್ನು ಕಂಡು ದಂಗುಬಡಿದಿದ್ದರು. ಈ ವೇಳೆ ಮೈಮರೆತು ಡ್ಯಾನ್ಸ್ ಮಾಡುತ್ತಿದ್ದ ಸಪ್ನಾ ಇದ್ದಕ್ಕಿದ್ದಂತೆಯೇ ವೇದಿಕೆ ಮೇಲೆಯೇ ಜಾರಿಬಿದ್ದಿದ್ದಾರೆ. ಈ ವೇಳೆ ನೋಡುತ್ತಿದ್ದ ಜನರಿಗೆ ಅಲ್ಲಿ ಏನಾಗುತ್ತಿದೆ ಎಂಬುದೇ ಗೊತ್ತಾಗಿಲ್ಲ. ಆದರೆ ಸಪ್ನಾ ಕೂಡಲೇ ಚೇತರಿಸಿಕೊಂಡು ಏನೂ ಆಗಿಯೇ ಇಲ್ಲವೆಂಬಂತೆ ಎದ್ದು ಮತ್ತೆ ನೃತ್ಯ ಮಾಡಲು ಶುರು ಮಾಡುತ್ತಾರೆ.

ಇದನ್ನೂ ಓದಿ: Today Petrol Prices : ವಾಹನ ಸವಾರರಿಗೆ ಬಿಗ್ ಶಾಕ್ : ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಪೆಟ್ರೋಲ್-ಡೀಸೆಲ್ ಬೆಲೆ

ವಿಡಿಯೋದಲ್ಲಿ ಸಪ್ನಾ(Sapna Chaudhary Viral Video) ಹಿಮ್ಮುಖವಾಗಿ ನೃತ್ಯ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಕೆಲವು ಜನರು ಸಪ್ನಾ ಡ್ಯಾನ್ಸ್ ಮಾಡುತ್ತಿದ್ದಾಗ ಹಣ ಎಸೆಯುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅನೇಕರು ಸಪ್ನಾರ ಧೈರ್ಯವನ್ನು ಹೊಗಳುತ್ತಿದ್ದು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಪ್ನಾ ಈ ಹಿಂದೆಯೂ ಅನೇಕ ಬಾರಿ ನೃತ್ಯ ಮಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದ ಪ್ರಸಂಗಗಳು ಜರುಗಿವೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News