Kranti Movie Review: ಕ್ರಾಂತಿ... ಯೆಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸಿನಿಮಾ. ಫೈನಲಿ ತೆರೆಯ ಮೇಲೆ ಅಬ್ಬರಿಸಿ ಬೊಬ್ಬಿರಿದಿದೆ. 2021 ರಲ್ಲಿ ರಾಬರ್ಟ್ ಸಿನಿಮಾ ತೆರೆಕಂಡಿತ್ತು.ಅದಾದ ಬಳಿಕ ಡಿ ಬಾಸ್ ಫ್ಯಾನ್ಸ್ ಬಿಗ್ ಸ್ಕ್ರೀನ್ ಮೇಲೆ ಕರಿಯನನ್ನ ನೋಡಬೇಕು ಅಂತ ತುದಿಗಾಲಲ್ಲಿ ನಿಂತಿದ್ದರು. ಕ್ರಾಂತಿ ಸಿನಿಮಾ ಜನವರಿ 26ಕ್ಕೆ ರಿಲೀಸ್ ಆಗುತ್ತಿದೆ ಅನ್ನೋ ಮ್ಯಾಟರ್ ಕೇಳಿನೇ ಥ್ರಿಲ್ ಆಗಿದ್ದರು. ಕೊನೆಗೂ ಆ ದಿನ ಬಂದೇ ಬಿಟ್ಟಿದೆ. ಡಿ ಬಾಸ್ ನಟನೆಯ ಕ್ರಾಂತಿ ಕರುನಾಡಿನಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದೆ.


COMMERCIAL BREAK
SCROLL TO CONTINUE READING

ಹೌದು, ಕ್ರಾಂತಿ ಸಿನಿಮಾದಲ್ಲಿ ಡಿ ಬಾಸ್ ದರ್ಶನ್ ತುಂಬಾ ಡಿಫರೆಂಟ್ ಆಗೇ ಕಾಣಿಸಿದ್ದಾರೆ. ಪಾತ್ರದ ಒಳ ಹೊಕ್ಕಿ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಮ್ಮ ನೆಲ, ಭಾಷೆ, ರಾಜ್ಯದ ಸರ್ಕಾರಿ ಶಾಲೆಗಳ ಸ್ಥಿತಿಗತಿ ಬಗ್ಗೆ ಚಿತ್ರದ ಕಥೆ ಹೆಣೆಯಲಾಗಿದ್ದು ಒಂದು ಉತ್ತಮ ಸಂದೇಶ ಸಾರುವ ಸಿನಿಮಾ ಇದಾಗಿದೆ. 


ಇದನ್ನೂ ಓದಿ- Kranti : ಡೋಂಟ್ ಮೆಸ್ ವಿತ್ ಹಿಮ್.. 'ಕ್ರಾಂತಿ'ಯ ಮಾಸ್ ಹಾಡಿಗೆ ಫ್ಯಾನ್ಸ್‌ ಫಿದಾ!


ಕ್ರಾಂತಿ ಅನ್ನೋ ಟೈಟಲ್ಲೇ ಕೇಳಿದ್ರೆನೇ ರಕ್ತ ಕೊತಕೊತ ಅಂತ ಕುದಿಯುತ್ತೆ.  ಈ ಚಿತ್ರದಲ್ಲೂ ಡಿ ಬಾಸ್ ಕಣ್ಣಲ್ಲೇ ಕ್ರಾಂತಿ ಅನ್ನೋದು ಎದ್ದು ಕಾಣಿಸಿದೆ. ಜನರಿಗೆ ಒಂದು ಒಳ್ಳೆ ಸಂದೇಶ ನೀಡುವ ಸಿನಿಮಾ ಇದಾಗಿದ್ದು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವ ಪ್ರತಿಯೊಬ್ಬರು ಕೂಡ ಒಂದೊಳ್ಳೆ ಮೆಸ್ಸೇಜ್ ಮೂಲಕ ಹೊರಬರಬಹುದು. 


ಇದನ್ನೂ ಓದಿ- Pathaan kranti : ಕರುನಾಡಲ್ಲಿ ಕಿಂಗ್‌ ಖಾನ್‌ ʼಪಠಾಣ್‌ʼ ಕಲೆಕ್ಷನ್‌ಗೆ ದರ್ಶನ್‌ ʼಕ್ರಾಂತಿʼ ಕಿಚ್ಚು ತಟ್ಟುತ್ತಾ..!?


ಕ್ರಾಂತಿ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ರಚಿತಾ ರಾಮ್ ನಾಯಕಿಯಾಗಿ ಸಖತ್ ಆಗಿ ಶೈನ್ ಆಗಿದ್ದಾರೆ. ಇವರಿಬ್ಬರ ಜೋಡಿ ತೆರೆ ಮೇಲೆ ನೋಡಲು ತುಂಬಾ ಮಜಾ ಅನಿಸುತ್ತೆ. ಕ್ರಾಂತಿ ಸಿನಿಮಾ ಬೊಂಬೆ ಬೊಂಬೆ ಮತ್ತು ಶೇಕ್ ಇಟ್ ಪುಷ್ಪಾವತಿ ಹಾಡನ್ನ ದೊಡ್ಡ ಪರದೆ ಮೇಲೆ ನೋಡೋ ಖುಷಿ ಇದಿಯಲ್ಲ ಅದನ್ನು ವರ್ಣಿಸಲು ಅಸಾಧ್ಯ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.