ಬೆಂಗಳೂರು : ಅಪ್ಪು ಕರುನಾಡಿನ ಆಸ್ತಿ. ಕನ್ನಡ ನಾಡಿನ ಹೆಮ್ಮೆಯ ಪುತ್ರ.ನಿಜ ಜೀವನದಲ್ಲಿ ದೇವರಾಗಿ ಎಲ್ಲರ ಹೃದಯದಲ್ಲಿ ನೆಲೆ ನಿಂತ ದೈವ ಅಂದ್ರೆ ಅದು ಡಾ.ಪುನೀತ್ ರಾಜಕುಮಾರ್. ಯೆಸ್ ಅಪ್ಪು ದೇವರ ಪಾತ್ರದಲ್ಲಿ ಕಾಣಿಸಿಕೊಂಡ 'ಲಕ್ಕಿ ಮ್ಯಾನ್' ಸಿನಿಮಾ ಫೈನಲಿ ತೆರೆಮೇಲೆ ಅಪ್ಪಳಿಸಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸಾಲು ಸಾಲು ಅಪ್ಪು ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡೋ ಮೂಲಕ ಖುಷ್ ಆಗಿದ್ದಾರೆ. ಅಭಿಮಾನಿಗಳ ಕೆಡೆಯಿಂದ ಲಕ್ಕಿ ಮ್ಯಾನ್ ಸಿನಿಮಾಗೆ ಫುಲ್ ಮಾರ್ಕ್ಸ್ ಸಿಕ್ಕಾಗಿದೆ. ಹಾಗಾದ್ರೆ ಲಕ್ಕಿ ಮ್ಯಾನ್ ಸಿನಿಮಾ ನಿಜಕ್ಕೂ ಹೇಗಿದೆ ಅನ್ನೋ ಪಕ್ಕಾ ರಿವ್ಯೂ  ಇಲ್ಲಿದೆ. 


COMMERCIAL BREAK
SCROLL TO CONTINUE READING

ಲಕ್ಕಿ ಮ್ಯಾನ್​’ಚಿತ್ರ ಒಂದು ರೀತಿಯಲ್ಲಿ ಸರಪಳಿಯಿದ್ದ ಹಾಗಿದೆ. ಪುನೀತ್​ ರಾಜ್​ಕುಮಾರ್​ ನಟಿಸಿದ ಕೊನೇ ಸಿನಿಮಾ ಇದು. ಆ ಕಾರಣದಿಂದ ಭಾವುಕತೆ ಆಗುತ್ತದೆ. ಅಪ್ಪು ಸ್ಕ್ರೀನ್ ಗೆ ಎಂಟ್ರಿ ಕೊಟ್ಟ ತಕ್ಷಣ ಎಂಥಹ ಕಲ್ಲು ಹೃದಯವಿದ್ದರೂ ಕರಗಿ ನೀರಾಗೋದು ಪಕ್ಕಾ. 


ಇದನ್ನೂ ಓದಿ : All OK New Song: ಸಮುದ್ರದಲೆಗಳ ಮೇಲೆ ಚುಟು ಚುಟು ಚೆಲುವೆ, ಸಿಂಗಾಪುರದಲ್ಲಿ ಕನ್ನಡದ ಕಂಪು


ಹೀರೋ ಆಗಿ ಡಾರ್ಲಿಂಗ್​ ಕೃಷ್ಣ ಸಖತ್ ಮೋಡಿ ಮಾಡಿದ್ದಾರೆ. ಮೊದಲ ನಿರ್ದೇಶನದ ಪ್ರಯತ್ನದಲ್ಲಿ ಎಸ್​. ನಾಗೇಂದ್ರ ಪ್ರಸಾದ್​ ಗಮನ ಸೆಳೆದಿದ್ದಾರೆ. ಲಕ್ಕಿ ಮ್ಯಾನ್ ಸಿನಿಮಾ ನೋಡಿದವರು ಹೊಟ್ಟೆ ತುಂಬಾ ನಗಲೂ ಬಹುದು. ದುಃಖದಿಂದ ಜೋರಾಗಿ ಅಳಲೂಬಹುದು. ನೋಡುಗರು ಮಿಕ್ಸ್ಡ್ ಎಮೋಷನ್ ಆಗೋದು ಗ್ಯಾರಂಟಿ.


 ಬಾಲ್ಯದ ಸ್ನೇಹಿತೆಯನ್ನೇ ಮದುವೆ ಆಗುವ ಡಾರ್ಲಿಂಗ್ ಕೃಷ್ಣಗೆ ವೈವಾಹಿಕ ಜೀವನ ಕಠಿಣವೆನಿಸಿ  ಡಿವೋರ್ಸ್​ಗಾಗಿ ಆತ ಕೋರ್ಟ್​ ಮೆಟ್ಟಿಲು ಏರುತ್ತಾನೆ. ಅಪ್ಪು ಬಾಸ್ ಎಂಟ್ರಿ ಬಳಿಕ ಕಥಾನಾಯಕನ  ಜೀವನದಲ್ಲಿ ಏನೆಲ್ಲಾ ಬದಲಾವಣೆ ಮತ್ತು ಬೆಳವಣಿಗೆಯಾಗುತ್ತೆ ಅನ್ನೋದನ್ನ ನೀವು ಥೀಯೇಟರ್ ಗೆ ಬಂದು ನೋಡಿದ್ರೆ ಸೂಕ್ತ. ಕಥೆಯಲ್ಲಿ ದೇವರು ಕೊಟ್ಟ ಎರಡನೇ ಅವಕಾಶವನ್ನು ಕಥಾನಾಯಕ ಸರಿಯಾಗಿ ಉಪಯೋಗಿಸಿಕೊಳ್ಳುತ್ತಾನಾ? ಎರಡನೇ ಲೈಫ್​ನಲ್ಲಿ ಆತ ಯಾರನ್ನು ಮದುವೆ ಆಗ್ತಾನೆ? ಅಂತಿಮವಾಗಿ ಅವನಿಗೆ ಡಿವೋರ್ಸ್​ ಸಿಗುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಉತ್ತರವಿದೆ. ಅಪ್ಪು ಮತ್ತು ಪ್ರಭುದೇವ್ ನೃತ್ಯ  ಸೂಪರ್ ಆಗಿದೆ. ಅದನ್ನ ನೀವು ತೆರೆಯ ಮೇಲೆಯೇ ನೋಡಿ ಎಂಜಾಯ್ ಮಾಡಬೇಕು. 


ಇದನ್ನೂ ಓದಿ :  ʼವಿಕ್ರಾಂತ್‌ ರೋಣʼ ಚಿತ್ರಕ್ಕೆ ಕುಂಬ್ಳೆ ಫುಲ್‌ ಮಾರ್ಕ್ಸ್‌ : ಗೆಳೆಯನ ಸಿನಿಮಾಗೆ ಹೀಗಂದ್ರು ಮಾಜಿ ಸ್ಪಿನ್ನರ್‌..!


ಸಿನಿಮಾದಲ್ಲಿ ಯಾವ ಅಂಶ ಕೂಡ ಬೋರು ಅಂತ ಅನಿಸೋದೆ ಇಲ್ಲ. ಅಪ್ಪು  ದೇವರಾಗೇ ಒಂದಷ್ಟು  ಫೈಟ್ ಕೂಡ ಮಾಡೋದ್ರ ಮೂಲಕ ರಂಜಿಸಿದ್ದಾರೆ. ನೀವು ಕೊಡೋ ಹಣಕ್ಕೆ 100% ಮನರಂಜನೆ ಸಿಗೋದು ಕನ್ಫರ್ಮ್. ಸಂಗೀತ ಶೃಂಗೇರಿ ಸಿಕ್ಕ ಅವಕಾಶವನ್ನ ಸೂಪರ್ ಆಗಿ ಬಳಸಿಕೊಂಡಿದ್ದಾರೆ. ಇನ್ನು ಡಾರ್ಲಿಂಗ್ ಕೃಷ್ಣ ಥ್ರಿಲ್ ಅನಿಸುವಷ್ಟರ ಮಟ್ಟಿಗೆ ನಟನೆ ಮೂಲಕ ಖುಷಿ ಕೊಟ್ಟಿದ್ದಾರೆ.


ಎಸ್​. ನಾಗೇಂದ್ರ ಪ್ರಸಾದ್​ ನಿರ್ದೇಶನದ ಈ ಸಿನಿಮಾಗೆ ಪಿ.ಆರ್​. ಮೀನಾಕ್ಷಿ ಸುಂದರಂ, ಆರ್​. ಸುಂದರ ಕಾಮರಾಜ್​ ಬಂಡವಾಳ ಹಾಕಿದ್ದಾರೆ. ಡಾರ್ಲಿಂಗ್​ ಕೃಷ್ಣ, ಸಂಗೀತಾ ಶೃಂಗೇರಿ, ರೋಷಿನಿ ಪ್ರಕಾಶ್​, ಸಾಧು ಕೋಕಿಲ, ನಾಗಭೂಷಣ್, ರಂಗಾಯಣ ರಘು​ ತೆರೆಯ ಮೇಲೆ ಬೇರೆಯದ್ದೇ ಲೋಕ ತೋರಿಸಿದ್ದಾರೆ.


 



ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.