ʼವಿಕ್ರಾಂತ್‌ ರೋಣʼ ಚಿತ್ರಕ್ಕೆ ಕುಂಬ್ಳೆ ಫುಲ್‌ ಮಾರ್ಕ್ಸ್‌ : ಗೆಳೆಯನ ಸಿನಿಮಾಗೆ ಹೀಗಂದ್ರು ಮಾಜಿ ಸ್ಪಿನ್ನರ್‌..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾ ʼವಿಕ್ರಾಂತ್‌ ರೋಣʼ ಓಟಿಟಿಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದೀಗ ಭಾರತ ಕ್ರಿಕೆಟ್​ ತಂಡದ ಮಾಜಿ ಸ್ಪಿನ್ನರ್​ ಅನಿಲ್ ಕುಂಬ್ಳೆ ಚಿತ್ರವನ್ನು ವಿಕ್ಷೀಸಿದ್ದು, ಕಿಚ್ಚನ ಆಕ್ಟಿಂಗ್‌ಗೆ ಫುಲ್‌ ಮಾರ್ಕ್ಸ್‌ ನೀಡಿದ್ದಾರೆ.

Written by - Krishna N K | Last Updated : Sep 8, 2022, 01:26 PM IST
  • ʼವಿಕ್ರಾಂತ್‌ ರೋಣʼ ಓಟಿಟಿಯಲ್ಲಿ ಭಾರಿ ಸದ್ದು ಮಾಡುತ್ತಿದೆ.
  • ಅನಿಲ್ ಕುಂಬ್ಳೆ ಚಿತ್ರವನ್ನು ವಿಕ್ಷೀಸಿದ್ದು, ಕಿಚ್ಚನ ಆಕ್ಟಿಂಗ್‌ಗೆ ಫುಲ್‌ ಮಾರ್ಕ್ಸ್‌ ನೀಡಿದ್ದಾರೆ.
  • ‘ಜೀ 5’ ಒಟಿಟಿಯಲ್ಲಿ ‘ವಿಕ್ರಾಂತ್​ ರೋಣ’ ಬಿಡುಗಡೆಯಾಗಿದ್ದು, 500 ಮಿಲಿಯನ್​ ನಿಮಿಷಗಳಷ್ಟು ವೀಕ್ಷಣೆ ಕಂಡಿದೆ.
ʼವಿಕ್ರಾಂತ್‌ ರೋಣʼ ಚಿತ್ರಕ್ಕೆ ಕುಂಬ್ಳೆ ಫುಲ್‌ ಮಾರ್ಕ್ಸ್‌ : ಗೆಳೆಯನ ಸಿನಿಮಾಗೆ ಹೀಗಂದ್ರು ಮಾಜಿ ಸ್ಪಿನ್ನರ್‌..! title=

ಬೆಂಗಳೂರು:  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾ ʼವಿಕ್ರಾಂತ್‌ ರೋಣʼ ಓಟಿಟಿಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದೀಗ ಭಾರತ ಕ್ರಿಕೆಟ್​ ತಂಡದ ಮಾಜಿ ಸ್ಪಿನ್ನರ್​ ಅನಿಲ್ ಕುಂಬ್ಳೆ ಚಿತ್ರವನ್ನು ವಿಕ್ಷೀಸಿದ್ದು, ಕಿಚ್ಚನ ಆಕ್ಟಿಂಗ್‌ಗೆ ಫುಲ್‌ ಮಾರ್ಕ್ಸ್‌ ನೀಡಿದ್ದಾರೆ.

‘ವಿಕ್ರಾಂತ್​ ರೋಣ’ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿರುವ ಕುಂಬ್ಳೆ ಗೆಳೆಯ, ವಿಕ್ರಾಂತ್‌ ರೋಣ ಚಿತ್ರವನ್ನು ನೋಡಿದೆ. ನನ್ನ ಆತ್ಮೀಯ ಗೆಳೆಯ ಸುದೀಪ್‌ ಅಭಿನಯ ಅದ್ಭುತವಾಗಿದೆ. ಸಸ್ಪೆನ್ಸ್‌ ಅಂಶ ಕೊನೆಯವರೆಗೂ ಉಳಿಯಿತು. ವಿಜಯ್‌ ಪ್ರಕಾಶ್‌ ಅವರ ಲಾಲಿ ಹಾದು ಅಧ್ಬುತವಾಗಿದೆ. ಇಡೀ ತಂಡಕ್ಕೆ ಅಭಿನಂದನೆಗಳು ಎಂದು ಟ್ಟೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Bigg Boss 9: ಅತಿ ಶೀಘ್ರದಲ್ಲೇ ನಿಮ್ಮ ಟಿವಿ ಪರದೆ ಮೇಲೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 9

ಕನ್ನಡ ಚಿತ್ರರಂಗಕ್ಕೂ ಅನಿಲ್​ ಕುಂಬ್ಳೆ ಅವರಿಗೂ ಮೊದಲಿನಿಂದಲೂ ನಂಟು. ಅಲ್ಲದೆ, ಸುದೀಪ್​ ಹಾಗೂ ಕಿಚ್ಚನ ನಡುವೆ ಉತ್ತಮ ಸ್ನೇಹ ಇದೆ. ಸದ್ಯ ವಿಕ್ರಾಂತ್‌ ರೋಣ ನೋಡಿರುವ ಅನಿಲ್‌ ಕುಂಬ್ಳೆ ಗೆಳೆಯನ ಸಿನಿಮಾಗೆ ಶಬ್ಭಾಶ್‌ ಹೇಳಿದ್ದಾರೆ. ಅನೂಪ್​ ಭಂಡಾರಿ ನಿರ್ದೇಶನದ ಈ ಸಿನಿಮಾಗೆ ಜಾಕ್​ ಮಂಜು ಬಂಡವಾಳ ಹೂಡಿದ್ದು, ಒಟಿಟಿಯಲ್ಲೂ ‘ವಿಕ್ರಾಂತ್​ ರೋಣ’ ಸಿನಿಮಾ ಧೂಳೆಬ್ಬಿಸುತ್ತಿದೆ.

ಇನ್ನು ಅನಿಲ್‌ ಕುಂಬ್ಳೆ ಅವರಿಗೆ ಕಿಚ್ಚ ಸುದೀಪ್‌ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ‘ಸಮಯ ಮಾಡಿಕೊಂಡು ನಮ್ಮ ಸಿನಿಮಾ ನೋಡಿದ್ದಕ್ಕೆ ಧನ್ಯವಾದಗಳು ಸರ್​’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ‘ಜೀ 5’ ಒಟಿಟಿಯಲ್ಲಿ ‘ವಿಕ್ರಾಂತ್​ ರೋಣ’ ಬಿಡುಗಡೆಯಾಗಿದ್ದು, 500 ಮಿಲಿಯನ್​ ನಿಮಿಷಗಳಷ್ಟು ವೀಕ್ಷಣೆ ಕಂಡಿದೆ.

ಸಿನಿಮಾದಲ್ಲಿ ನೀತಾ ಅಶೋಕ್​, ಜಾಕ್ವೆಲಿನ್​ ಫರ್ನಾಂಡಿಸ್​, ನಿರೂಪ್​ ಭಂಡಾರಿ, ಮಿಲನಾ ನಾಗರಾಜ್​ ಮುಂತಾದ ತಾರಾಬಳಗ ಇದೆ. ಚಿತ್ತಕ್ಕೆ ಅಜನೀಶ್​ ಬಿ. ಲೋಕನಾಥ್​ ಸಂಗೀತ ನೀಡಿದ್ದು, ‘ರಾ ರಾ ರಕ್ಕಮ್ಮ..’ ಹಾಡು ಸೆನ್ಸೇಷನಲ್​ ಹಿಟ್‌ ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News