Mary trailer released : ‘ಆನ’ ಸಿನಿಮಾ ಮೂಲಕ ಗುರುತಿಸಿಕೊಂಡಿರುವ ಮನೋಜ್ ಪಿ ನಡಲುಮನೆ ನಿರ್ದೇಶನದ ಎರಡನೇ ಸಿನಿಮಾ ವೆಂಚರ್ ‘ಮೇರಿ’. ಫಸ್ಟ್ ಲುಕ್ ಮೂಲಕ ಗಮನ ಸೆಳೆದ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಥ್ರಿಲ್ಲರ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದ ಇಂಟ್ರಸ್ಟಿಂಗ್ ಟ್ರೇಲರ್ ಹೊತ್ತು ಬಂದ ಚಿತ್ರತಂಡ ಸಿನಿಮಾ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡಿದೆ. ‘ಮೇರಿ' ಪಶ್ಚಿಮ ಘಟ್ಟದ ಗ್ರಾಮಾಂತರ ಠಾಣೆಯಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದ್ದು, ವಿಕಾಶ್ ಉತ್ತಯ್ಯ, ಅನೂಷ ಕೃಷ್ಣ, ಚೇತನ್ ವಿಕ್ಕಿ, ತೇಜಸ್ವಿನಿ ಶರ್ಮಾ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸಂದೀಪ್ ನೀನಾಸಂ, ಭಾರ್ಗವ್ ವೆಂಕಟೇಶ್, ಸುಶಾಂತ್, ದೀಪಕ್ ಗೌಡ ಒಳಗೊಂಡ ಕಲಾವಿದರ ಬಳಗ ಚಿತ್ರದಲ್ಲಿದೆ.


COMMERCIAL BREAK
SCROLL TO CONTINUE READING

ನಿರ್ದೇಶಕ ಮನೋಜ್ ಪಿ ನಡುಲುಮನೆ ಮಾತನಾಡಿ ‘ಮೇರಿ’ ಒಂದು ತಂಡದ ಪರಿಶ್ರಮ. ಥ್ರಿಲ್ಲರ್ ಸಬ್ಜೆಕ್ ಸಿನಿಮಾ. ಪೊಲೀಸ್ ಠಾಣೆಯಲ್ಲಿ ನಡೆಯುವ ಘಟನೆ ಚಿತ್ರದಲ್ಲಿದೆ. ಫೆಬ್ರವರಿ 24ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಚಿಕ್ಕಮಗಳೂರಿನ ಜಿಲ್ಲೆಯ ಕಾಡು ಮಧ್ಯದಲ್ಲಿರುವ ಒಂದು ಗ್ರಾಮದ ಪೊಲೀಸ್ ಠಾಣೆಗೆ ಹೊಸದಾಗಿ ಅಪಾಯಿಂಟ್ ಆದ ಎಸ್ಐ ಮುಂದೆ ಒಂದು ಹುಡುಗಿ ತನ್ನ ಮೇಲೆ ರೇಪ್ ಆಗಿದೆ ಎಂದು ಹೇಳಿದಾಗ ಆ ದಿನ ಏನೇನು ಘಟನೆ ನಡೆಯುತ್ತೆ ಅನ್ನೋದು ಈ ಸಿನಿಮಾದ ಎಳೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾ ನೋಡಿ ಚಿತ್ರತಂಡಕ್ಕೆ ಸಪೋರ್ಟ್ ಮಾಡಿ ಎಂದು ತಿಳಿಸಿದ್ರು.


ಇದನ್ನೂ ಓದಿ : Tamannah: ಸನ್ಯಾಸತ್ವ ಸ್ವೀಕರಿಸಿದ್ರಾ ತಮನ್ನಾ!! ಮಿಲ್ಕಿ ಬ್ಯೂಟಿ ಕಾವಿ ಬಟ್ಟೆ ಧರಿಸಿದ್ದೇಕೆ?


ನಟ ವಿಕಾಶ್ ಉತ್ತಯ್ಯ ಮಾತನಾಡಿ ಈ ಚಿತ್ರದಲ್ಲಿ ಎಸ್ ಐ ಪಾತ್ರ ಮಾಡಿದ್ದೇನೆ. ರವಿಕುಮಾರ್ ಪಾತ್ರದಲ್ಲಿ ನಟಿಸಿದ್ದೇನೆ. ಆನ ಸಿನಿಮಾದಲ್ಲೂ ಲೀಡ್ ಆಗಿ ಮಾಡಿದ್ದೇನೆ. ಸೆಕೆಂಡ್ ಲಾಕ್ ಡೌನ್ ನಲ್ಲಿ ಮನೋಜ್ ಈ ಚಿತ್ರದ ಸ್ಕ್ರಿಪ್ಟ್ ರೆಡಿ ಮಾಡಿದ್ದರು. ತುಂಬಾ ವಿಭಿನ್ನವಾಗಿ ಸಿನಿಮಾ ಮೂಡಿ ಬಂದಿದೆ. ಎಲ್ಲರೂ ಸಿನಿಮಾ ನೋಡಿ ಸಪೋರ್ಟ್ ಮಾಡಿ ಎಂದು ತಿಳಿಸಿದ್ರು.


Kiara Pregnant : ಮದುವೆಗೆ ಮುನ್ನವೇ ಕಿಯಾರಾ ಅಡ್ವಾಣಿ ಗರ್ಭಿಣಿ.!?


ನಿರ್ಮಾಪಕ ರನ್ವಿತ್ ಶಿವಕುಮಾರ್ ಮಾತನಾಡಿ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಚಿತ್ರದ ಟೆಕ್ನಿಶಿಯನ್ ಗಳು ನಿರ್ದೇಶಕ ವಿಷನ್ ಚೆನ್ನಾಗಿ ತೆರೆ ಮೇಲೆ ತಂದಿದ್ದಾರೆ. ಕಲಾವಿದರು ಕೂಡ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಫೆಬ್ರವರಿ 24ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಸಿನಿಮಾ ನೋಡಿ ತಂಡಕ್ಕೆ ಸಪೋರ್ಟ್ ಮಾಡಿ ಎಂದ್ರು. ವಿನೋದ್ ಭಾರತಿ ಛಾಯಾಗ್ರಹಣ, ಸೂರಜ್ ಜೋಯ್ಸ್ ಸಂಗೀತ ನಿರ್ದೇಶನ, ನಾಗೇಂದ್ರ ಉಜ್ಜನಿ ಸಂಕಲನ ಚಿತ್ರಕ್ಕಿದೆ. ಡಿಕೆಎಸ್ ಸ್ಟುಡಿಯೋಸ್ ಬ್ಯಾನರ್ ನಡಿ ರನ್ವಿತ್ ಶಿವಕುಮಾರ್, ಹರೀಶ್ ಜಿ.ಬಿ ಮೇರಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.