Kiara Pregnant : ಮದುವೆಗೆ ಮುನ್ನವೇ ಕಿಯಾರಾ ಅಡ್ವಾಣಿ ಗರ್ಭಿಣಿ.!?

Kiara Pregnant Rumors : ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇತ್ತೀಚೆಗೆ ಜೈಸಲ್ಮೇರ್‌ನ ಅರಮನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಕೆಲವೇ ದಿನಗಳಲ್ಲಿ, ಕಿಯಾರಾ ಅಡ್ವಾಣಿ ಗರ್ಭಧಾರಣೆಯ ವದಂತಿಗಳು ಹರಡಲು ಪ್ರಾರಂಭಿಸಿವೆ. 

Written by - Chetana Devarmani | Last Updated : Feb 10, 2023, 10:36 AM IST
  • ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ
  • ಕಿಯಾರಾ ಅಡ್ವಾಣಿ ಗರ್ಭಧಾರಣೆಯ ವದಂತಿ
  • ಮದುವೆಗೆ ಮುನ್ನವೇ ಕಿಯಾರಾ ಅಡ್ವಾಣಿ ಗರ್ಭಿಣಿ.!?
Kiara Pregnant : ಮದುವೆಗೆ ಮುನ್ನವೇ ಕಿಯಾರಾ ಅಡ್ವಾಣಿ ಗರ್ಭಿಣಿ.!?  title=
Kiara Pregnant Rumors

Kiara Pregnant Rumors : ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇತ್ತೀಚೆಗೆ ಜೈಸಲ್ಮೇರ್‌ನ ಅರಮನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಕೆಲವೇ ದಿನಗಳಲ್ಲಿ, ಕಿಯಾರಾ ಅಡ್ವಾಣಿ ಗರ್ಭಧಾರಣೆಯ ವದಂತಿಗಳು ಹರಡಲು ಪ್ರಾರಂಭಿಸಿವೆ. ವಾಸ್ತವವಾಗಿ, ಮದುವೆಯ ನಂತರ ಜೈಸಲ್ಮೇರ್‌ನಿಂದ ದೆಹಲಿಗೆ ಹಿಂದಿರುಗುವಾಗ, ಕಿಯಾರಾ ಅಡ್ವಾಣಿ ಕಪ್ಪು ಬಟ್ಟೆಯನ್ನು ಧರಿಸಿದ್ದರು. ಇದರೊಂದಿಗೆ, ನಟಿ ಬೂದು-ಕಪ್ಪು ಬಣ್ಣದ ಶಾಲು ಧರಿಸಿದ್ದರು. ಕಿಯಾರಾ ಅಡ್ವಾಣಿ ಫೋಟೋಗಳಿಗೆ ಪೋಸ್‌ ನೀಡುವಾಗ ಶಾಲು ಹೊದ್ದುಕೊಂಡು ಮತ್ತೆ ಮತ್ತೆ ಅಡ್ಜಸ್ಟ್ ಮಾಡಿಕೊಂಡು ಹೊಟ್ಟೆ ಮುಚ್ಚಿಕೊಳ್ಳುತ್ತಿದ್ದ ಸ್ಟೈಲ್ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಇದೇ ಕಾರಣಕ್ಕೆ ನಟಿಯ ಗರ್ಭಧಾರಣೆಯ ಬಗ್ಗೆ ನೆಟ್ಟಿಗರು ಊಹಾಪೋಹ ಶುರು ಮಾಡಿದ್ದಾರೆ. 

Kiara Pregnant Rumors

ಕಿಯಾರಾ ಅಡ್ವಾಣಿ ಅವರ‌ ಈ ವಿಮಾನ ನಿಲ್ದಾಣದ ಲುಕ್ ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ಟ್ರೋಲ್ ಆಗುತ್ತಿದೆ. ಮೊದಲು ಕಪ್ಪು ಬಟ್ಟೆ ಧರಿಸಿ, ಈಗ ಶಾಲು ಹೊದ್ದು ಹೊಟ್ಟೆ ಮುಚ್ಚುವ ಶೈಲಿ ಪ್ರಗ್ನೆನ್ಸಿ ಊಹಾಪೋಹಗಳಿಗೆ ಕಾರಣವಾಗಿವೆ. "ಈ ಮೇಡಮ್ 3-4 ತಿಂಗಳಲ್ಲಿ ಒಳ್ಳೆಯ ಸುದ್ದಿ ನೀಡಲಿದ್ದಾರೆ, ಅವರ ಗರ್ಭಧಾರಣೆಯ ಸುದ್ದಿಯೂ ಬರಲಿದೆ. ದುಪಟ್ಟಾದಿಂದ ಹೊಟ್ಟೆ ಮರೆಮಾಚಿಕೊಂಡಿದ್ದಾರೆ" ಎಂದಿ ಒಬ್ಬ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. ಕಿಯಾರಾ ಗರ್ಭಧಾರಣೆಯ ಬಗ್ಗೆ ಏನೇ ಚರ್ಚೆಗಳು ನಡೆಯುತ್ತಿದ್ದರೂ ಅದು ಕೇವಲ ವದಂತಿ ಮಾತ್ರ.

ಇದನ್ನೂ ಓದಿ : DDLJ release: ‘ಪಠಾಣ್​’ ಸಕ್ಸಸ್‌ ಬೆನ್ನಲ್ಲೇ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ' ರೀ-ರಿಲೀಸ್!

ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ವಿವಾಹವು ಫೆಬ್ರವರಿ 7 ರಂದು ಜೈಸಲ್ಮೇರ್‌ನ ಸೂರ್ಯಗಢ ಅರಮನೆಯಲ್ಲಿ ನಡೆಯಿತು. ಈಗ ದೆಹಲಿಯಲ್ಲಿ ಆರತಕ್ಷತೆ ನಡೆಯಲಿದೆ. ದಂಪತಿಗಳು ಫೆಬ್ರವರಿ 12 ರಂದು ಮುಂಬೈನ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ರಿಸೆಪ್ಶನ್‌ ಆಯೋಜಿಸಿದ್ದಾರೆ. ವರದಿಗಳ ಪ್ರಕಾರ, ಸಿದ್ಧಾರ್ಥ್ ಮತ್ತು ಕಿಯಾರಾ ಅವರ ಆರತಕ್ಷತೆಯಲ್ಲಿ ಶಾರುಖ್ ಖಾನ್, ಅಜಯ್ ದೇವಗನ್ ಸೇರಿ ಸೌತ್ ಸೂಪರ್‌ಸ್ಟಾರ್ ರಾಮ್ ಚರಣ್ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. 

ಇದನ್ನೂ ಓದಿ : Tamannah: ಸನ್ಯಾಸತ್ವ ಸ್ವೀಕರಿಸಿದ್ರಾ ತಮನ್ನಾ!! ಮಿಲ್ಕಿ ಬ್ಯೂಟಿ ಕಾವಿ ಬಟ್ಟೆ ಧರಿಸಿದ್ದೇಕೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News