ಪ್ರಭಾಸ್ (Prabhas) ಹಾಗೂ ಪೂಜಾ ಹೆಗ್ಡೆ (Pooja Hegde) ಅಭಿನಯದ 'ರಾಧೆ ಶ್ಯಾಮ್' ಈಗಾಗಲೇ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ. ಚಿತ್ರದ ಪೋಸ್ಟರ್, ಟೀಸರ್ ಮೊದಲಾದವುಗಳು ಈಗಾಗಲೇ ಕುತೂಹಲ ಹೆಚ್ಚಿಸಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Madhuri Dixit: ಮಾಧುರಿ ದೀಕ್ಷಿತ್ ಜೀವನಾಧರಿತ American series ರದ್ದು!


ಚಿತ್ರದ ಹಾಡುಗಳು ಕೂಡ ಸಿನಿಪ್ರಿಯರ ಮನಗೆದ್ದಿವೆ. ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ (Radhe Shyam) ಚಿತ್ರ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. 


ಕೋವಿಡ್ (Covid-19)ಭೀತಿಯಿಂದಾಗಿ ಹಲವೆಡೆ ಚಿತ್ರಮಂದಿರಗಳ ಮೇಲೆ ನಿರ್ಬಂಧ ವಿಧಿಸಿದ್ದರಿಂದ ಜನವರಿ 14 ರಂದು 'ರಾಧೆ ಶ್ಯಾಮ್' ರಿಲೀಸ್ ಆಗಲಿಲ್ಲ. ಬಳಿಕ ಹೊಸ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿತು. 'ರಾಧೆ ಶ್ಯಾಮ್' ಸಿನಿಮಾ ಮಾರ್ಚ್ 11 ರಂದು ರಿಲೀಸ್ ಆಗಲಿದೆ. 


ಇದಕ್ಕಾಗಿ ಚಿತ್ರತಂಡ ಭರ್ಜರಿ ಪ್ರಚಾರ ನಡೆಸಿದೆ. ಇದಕ್ಕೆ ಸಾಕ್ಷಿಯೆಂಬಂತೆ ಮೆಟ್ರೋ (Metro) ಟ್ರೈನ್ ಮೇಲೆಯೂ 'ರಾಧೆ ಶ್ಯಾಮ್' ಪೋಸ್ಟರ್ ರಾರಾಜಿಸುತ್ತಿದೆ. 


ಇದನ್ನೂ ಓದಿ: Duniya Vijay : 'ಸಲಗ' ಬಳಿಕ ಮತ್ತೊಂದು ಮಾಸ್‌ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ ದುನಿಯಾ ವಿಜಿ


ತೆಲುಗು,  ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ರಾಧಾ ಕೃಷ್ಣ ಕುಮಾರ್ ನಿರ್ದೇಶನದ ಈ ಸಿನಿಮಾ ಒಂದು ರೋಮ್ಯಾಂಟಿಕ್ ಕಥೆಯಾಗಿದೆ.  


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.