‘ರಾಧೆ-ಶ್ಯಾಮ್’ ರಿಲೀಸ್ ದಿನಾಂಕ ಮುಂದಕ್ಕೆ: ‘ಬಾಹುಬಲಿ’ ಫ್ಯಾನ್ಸ್ ಗೆ ನಿರಾಸೆ..!

ರೊಮ್ಯಾಂಟಿಕ್​ ಲವ್​ ಸ್ಟೋರಿ ಹೊಂದಿರುವ ‘ರಾಧೆ-ಶ್ಯಾಮ್’ ಸಿನಿಮಾ ಪ್ರಭಾಸ್​ ವೃತ್ತಿಜೀವನದ ಡಿಫರೆಂಟ್ ಚಿತ್ರ ಎನ್ನಲಾಗುತ್ತಿದೆ. 

Written by - Puttaraj K Alur | Last Updated : Jan 5, 2022, 12:58 PM IST
  • ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ರಾಧೆ-ಶ್ಯಾಮ್’ ಬಿಡುಗಡೆ ದಿನಾಂಕ ಮುಂದೂಡಿಕೆ
  • ಕೊರೊನಾ 3ನೇ ಅಲೆಯ ಭೀತಿ ಹಿನ್ನೆಲೆ ಸಿನಿಮಾ ರಿಲೀಸ್ ಪೋಸ್ಟ್ ಪೋನ್
  • ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗುತ್ತೆಂದು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆ
‘ರಾಧೆ-ಶ್ಯಾಮ್’ ರಿಲೀಸ್ ದಿನಾಂಕ ಮುಂದಕ್ಕೆ: ‘ಬಾಹುಬಲಿ’ ಫ್ಯಾನ್ಸ್ ಗೆ ನಿರಾಸೆ..! title=
‘ರಾಧೆ-ಶ್ಯಾಮ್’ ಬಿಡುಗಡೆ ದಿನಾಂಕ ಮುಂದೂಡಿಕೆ

ನವದೆಹಲಿ: ಬಾಹುಬಲಿ ಪ್ರಭಾಸ್ ಫ್ಯಾನ್ಸ್ ಗೆ ಸಿಕ್ಕಾಪಟ್ಟೆ ಬ್ಯಾಡ್ ನ್ಯೂಸ್ ವೊಂದು ಹೊರಬಿದ್ದಿದೆ. ಬಹುನಿರೀಕ್ಷಿತ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ‘ರಾಧೆ-ಶ್ಯಾಮ್’ ರಿಲೀಸ್ ದಿನಾಂಕ(Radhe Shyam Release Date) ಪೋಸ್ಟ್ ಪೋನ್ ಆಗಿದೆ. ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತೋ ಅಂತಾ ಸಿನಿಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ ಚಿತ್ರತಂಡ ಇದೀಗ ಸಿನಿಮಾ ಮುಂದೂಡಿಕೆ ಮಾಡಿರುವ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದೆ.

ಯುವಿ ಕ್ರಿಯೇಷನ್ಸ್ ಬ್ಯಾನರ್ ನಡಿ ತಯಾರಾದ ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಟಾಲಿವುಡ್ ಸ್ಟಾರ್ ಪ್ರಭಾಸ್ ಜೊತೆ ಪೂಜಾ ಹೆಗಡೆ(Prabhas & Pooja Hegde)ಸ್ಕ್ರೀನ್ ಶೇರ್ ಮಾಡಿದ್ದರು. ಇದೇ ಸಂಕ್ರಾಂತಿ ಹಬ್ಬಕ್ಕೆ (ಜ.14) ತೆರೆ ಕಾಣಬೇಕಿದ್ದ ಈ ಚಿತ್ರ ಇದೀಗ ಕೊರೊನಾ 3ನೇ ಅಲೆಯ ಭೀತಿ ಹೆಚ್ಚಾಗಿರುವ ಹಿನ್ನೆಲೆ ಮುಂದೂಡಿಕೆಯಾಗಿದೆ.  

ಇದನ್ನೂ ಓದಿ: ಟಾಲಿವುಡ್​ಗೆ ಎಂಟ್ರಿ ಕೊಟ್ಟ 'ಸಲಗ': ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ ದುನಿಯಾ ವಿಜಯ್

ದೇಶದಲ್ಲಿ ಕೊರೊನಾ(CoronaVirus) ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು, ಬಹುದೊಡ್ಡ ಆತಂಕ ಮೂಡಿಸಿದೆ. ಶೀಘ್ರವೇ 3ನೆ ಅಲೆ ಅಪ್ಪಳಿಸುವ ಸೂಚನೆ ಸಿಕ್ಕಿದ್ದು, ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಸಾಂಕ್ರಾಮಿಕ ರೋಗದ​ ನಿಯಂತ್ರಣಕ್ಕೆ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ.

ಈಗಾಗಲೇ ರಾಜ್ಯದ ಚಿತ್ರಮಂದಿರದಲ್ಲಿ ಶೇ.50 ಆಸನ ವ್ಯವಸ್ಥೆಗೆ ಮಾತ್ರ ಸರ್ಕಾರ ಅವಕಾಶ ನೀಡಿ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಜೊತೆಗೆ ವೀಕೆಂಡ್​ ಕರ್ಫ್ಯೂ ಹೇರಲಾಗಿದ್ದು, ವಾರಾಂತ್ಯದಲ್ಲಿ ಸಿನಿಮಾ ಪ್ರದರ್ಶನ ಅಸಾಧ್ಯವಾಗಿದೆ. ಈ ಹಿನ್ನೆಲೆ ‘ರಾಧೆ-ಶ್ಯಾಮ್’ ಚಿತ್ರತಂಡ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಿಕೆ ಮಾಡಲು ನಿರ್ಧಿಸಿದೆ. ಇತ್ತೀಚೆಗಷ್ಟೇ ಎಸ್.ಎಸ್.ರಾಜಮೌಳಿ(SS Rajamouli) ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ(RRR Movie) ರಿಲೀಸ್​ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿತ್ತು. ಈಗ ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್​’ ಕೂಡ ಪೋಸ್ಟ್ ಪೋನ್ ಆಗಿದೆ.

ಇದನ್ನೂ ಓದಿ: Alia Bhatt:ಆಲಿಯಾ ಭಟ್ ಅವರನ್ನು ಆಕರ್ಷಿಸುತ್ತದಂತೆ ಹುಡುಗರಲ್ಲಿನ ಈ ವಿಶೇಷ ಗುಣ!

ಪ್ರಭಾಸ್​ ಮತ್ತು ಪೂಜಾ ಹೆಗ್ಡೆ ಅಭಿನಯದ ‘ರಾಧೆ ಶ್ಯಾಮ್​’ ಚಿತ್ರ(Radhe Shyam Movie)ದ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಚಿತ್ರದ ಟ್ರೇಲರ್​ ಕೂಡ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಈ ಚಿತ್ರಕ್ಕೆ ರಾಧಾಕೃಷ್ಣ ಕುಮಾರ್​ ಆಕ್ಷನ್ ಕಟ್ ಹೇಳಿದ್ದು, ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ‘ರಾಧೆ ಶ್ಯಾಮ್​’ ತೆರೆಕಾಣಲು ಸಿದ್ಧವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News