ಬೆಂಗಳೂರು: ಕನ್ನಡ ಕಿರುತೆರೆಯ ಬಹುನಿರೀಕ್ಷಿತ ರಿಯಾಲಿಟಿ ಶೋಗಳಲ್ಲಿ ‘ಬಿಗ್‌ ಬಾಸ್‌’ ಕೂಡ ಒಂದು. ಪ್ರತಿಯೊಬ್ಬರೂ ಈ ಶೋಗಾಗಿ ಕಾತರದಿಂದ ಕಾಯ್ತಿದ್ದಾರೆ. ಅದರಲ್ಲೂ ಕಳೆದ ಸೀಸನ್‌ ಜೂನ್‌ ತಿಂಗಳಲ್ಲಿ ಮುಗಿದಿತ್ತು. ‘ಮಜಾ ಭಾರತ’ದ ಮಂಜು ಪಾವಗಡ ವಿನ್ನರ್‌ ಆಗಿ ಹೊರಹೊಮ್ಮಿದ್ರು. ರೇಸರ್‌ ಅರವಿಂದ್‌ ಫಸ್ಟ್‌ ರನ್ನರ್‌ಅಪ್‌ ಸ್ಥಾನ ಗಿಟ್ಟಿಸಿಕೊಂಡ್ರೆ, ದಿವ್ಯಾ ಉರುಡುಗ ಸೆಕೆಂಡ್‌ ರನ್ನರ್‌ಅಪ್‌ ಆಗಿ ಮಿಂಚಿದ್ರು.


COMMERCIAL BREAK
SCROLL TO CONTINUE READING

ವಿಶೇಷ ಅಂದ್ರೆ ಪ್ರತಿ ಬಾರಿಗಿಂತ ಕಳೆದ ಬಿಗ್‌ ಬಾಸ್‌ನಲ್ಲಿ ಕಾಂಪಿಟೇಷನ್‌ ತುಂಬಾನೇ ಇತ್ತು. ಯಾರಪ್ಪಾ ವಿನ್‌ ಆಗ್ತಾರೆ ಅನ್ನೋ ಕುತೂಹಲ ಕೊನೆ ಕ್ಷಣದವರೆಗೂ ನೋಡುಗರಿಗೆ ಕನ್‌ಫ್ಯೂಸ್‌ ಉಂಟುಮಾಡಿತ್ತು. ಮಂಜು ಪಾವಗಡ ವಿನ್‌ ಆಗಿದ್ದು ಪ್ರೇಕ್ಷಕರಿಗೆ ಖುಷಿ ಕೂಡ ನೀಡಿತ್ತು.


ಇನ್ನು ‘ಬಿಗ್‌ಬಾಸ್‌ ಸೀಸನ್‌ 8’ರ ಕಂಟೆಸ್ಟೆಂಟ್‌ಗಳ ವಿಷಯಕ್ಕೆ ಬಂದ್ರೆ ಒಬ್ಬೊಬ್ಬರೂ ಒಂದೊಂದು ರೀತಿಯ ಪ್ರತಿಭೆಗಳು. ಒಬ್ರು ನಟಿಯಾದ್ರೆ, ಮತ್ತೊಬ್ಬರು ಬೈಕ್‌ ರೇಸರ್‌, ಸಿಂಗರ್‌, ಸೋಷಿಯಲ್‌ ವರ್ಕರ್‌, ಕಾಮಿಡಿಯನ್‌, ಸೋಷಿಯಲ್‌ ಮೀಡಿಯಾ ಸ್ಟಾರ್‌, ಸ್ಪೋರ್ಟ್ಸ್‌ ಪರ್ಸ್‌ನ್‌ ಹೀಗೆ ಪ್ರತಿಯೊಂದು ಫೀಲ್ಡ್‌ನಿಂದ ಕಂಟೆಸ್ಟೆಂಟ್‌ಗಳನ್ನು ಆಯ್ಕೆ ಮಾಡಲಾಗಿತ್ತು. ದೊಡ್ಮನೆಯಲ್ಲಿ ಕಂಟೆಸ್ಟೆಂಟ್‌ಗಳ ಆಟ ಅದ್ಭುತವಾಗಿ ಮೂಡಿ ಬರುತ್ತಿತ್ತು. ಆದ್ರೆ ಕೊರೊನಾ ಕಾರಣದಿಂದ ಬಿಗ್‌ಬಾಸ್‌ ಅರ್ಧಕ್ಕೆ ನಿಂತಿತ್ತು. ಅಲ್ಲಿಗೆ ಸೀಸನ್‌ 8ರ ಕಥೆ ಫಿನೀಶ್‌ ಎಂಬ ಮಾತುಗಳು ಕೂಡ ಹರಿದಾಡ್ತಾಯಿತ್ತು. ಆದ್ರೆ ‘ಬಿಗ್‌ಬಾಸ್‌ ಸೀಸನ್‌ 8’ರ ಸೆಕೆಂಡ್‌ ಇನ್ನಿಂಗ್ಸ್‌ ಆರಂಭವಾಗಿ ಬಿಗ್‌ಬಾಸ್‌ ಹಿಸ್ಟರಿಯಲ್ಲಿ ಮೊದಲ ಬಾರಿಗೆ ಸೆಕೆಂಡ್‌ ಇನ್ನಿಂಗ್ಸ್‌ ಶುರು ಮಾಡಿದ್ದು ಕನ್ನಡದವರು ಎಂಬ ಹೆಗ್ಗಳಿಕೆಗೆ ಪಾತ್ರವಾಯ್ತು. ‘ಕನ್ನಡ ಬಿಗ್‌ಬಾಸ್‌ ಸೀಸನ್‌ 8’ ಹಾಗೂ ಸೆಕೆಂಡ್‌ ಇನ್ನಿಂಗ್ಸ್‌ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯ್ತು.


ಇದನ್ನೂ ಓದಿ: ಹೇಗಿರಲಿದೆ ಗೊತ್ತಾ ಸಮಂತಾರ ʼಯಶೋದ ʼಚಿತ್ರ..! ?


ಆದಾದ ನಂತ್ರ ಶುರುವಾಗಿದ್ದೇ ಕನ್ನಡದ ಮಿನಿ ಬಿಗ್‌ಬಾಸ್‌. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಾಯಿದ್ದ ಧಾರಾವಾಹಿಗಳ ನಟ ಹಾಗೂ ನಟಿಯರು ಮಿನಿ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ರು. ಅವರ ಹಾವಭಾವ, ಕಂಪ್ಲೀಟ್‌ ಮಾಡಿದ ಟಾಸ್ಕ್‌, ಅವರ ಡ್ಯಾನ್ಸ್‌, ಹಾಡುಗಳು ಪ್ರೇಕ್ಷರಿಗೆ ಫುಲ್‌ ಪ್ಯಾಕ್‌ ಎಂಟರ್‌ಟೈನ್‌ಮೆಂಟ್‌ ನೀಡಿದವು. ಆರಂಭದಲ್ಲಿ 1 ವಾರ ಮಿನಿ ಬಿಗ್‌ಬಾಸ್‌ ಬರಬಹುದು ಎಂದು ಊಹಿಸಿದ್ದ ಜನಕ್ಕೆ ಲೈಟ್‌ ಆಗಿ ಶಾಕ್‌ ನೀಡಿ 15 ದಿನಗಳ ಕಾಲ ಕಂಟಿನ್ಯೂ ಮಾಡಲಾಯಿತು.


ಇದೀಗ ‘ಬಿಗ್‌ಬಾಸ್‌ ಸೀಸನ್‌ 9’ ಯಾವಾಗ ಪ್ರಾರಂಭವಾಗುತ್ತೆ ಅನ್ನೋ ಪ್ರೆಶ್ನೆ ಪ್ರತಿಯೊಬ್ಬರಲ್ಲೂ ಮೂಡಿದೆ. ವಿಶೇಷ ಅಂದ್ರೆ ಪ್ರತಿವರ್ಷ ಅಕ್ಟೋಬರ್‌ನಲ್ಲಿ ಬಿಗ್ ಬಾಸ್ ಕನ್ನಡ ಶೋ ಆರಂಭವಾಗುತ್ತಿತ್ತು. ಆದರೆ ಕೊರೊನಾ ಎಂಬ ಮಹಾಮಾರಿ ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿದೆ. ಹೀಗಾಗಿ ಕಳೆದ ವರ್ಷ ಬಿಗ್ ಬಾಸ್‌ ಶೋ ಶುರುವಾಗೋದು ಲೇಟ್ ಆಗಿತ್ತು. ಆದರೆ ಈ ವರ್ಷ ಅಕ್ಟೋಬರ್‌ನಲ್ಲಿಯೇ ಸೀಸನ್ 9 ಶುರುವಾಗಲಿದೆ ಎಂಬ ಮಾಹಿತಿ ಸದ್ಯ ಎಲ್ಲಡೆ ಸದ್ದು ಮಾಡ್ತಿದೆ.


ಅದರಲ್ಲೂ ಸದ್ಯ ಎಲ್ಲೆಡೆ ಕೊರೊನಾ 4ನೇ ಅಲೆ ಕೊಂಚಮಟ್ಟಿಗೆ ಹಾವಳಿ ಮಾಡ್ತಿದೆ. ಹೀಗಾಗಿ ಬಿಗ್‌ಬಾಸ್‌ ಆರಂಭ ಮಾಡೋಕೆ ಕೂಡ ಸ್ವಲ್ಪ ಯೋಚನೆ ಮಾಡುವಂತಾಗಿದೆ. ಕಳೆದ ಬಾರಿ ಎಲ್ಲ ಸ್ಪರ್ಧಿಗಳನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಬಳಿಕ ಪ್ರತಿಯೊಬ್ಬರಿಗೂ ಕೊರೊನಾ ಟೆಸ್ಟ್‌ ಮಾಡಿಸಿ ನಂತ್ರ ದೊಡ್ಮನೆಗೆ ಪ್ರವೇಶ ಮಾಡಿಸಲಾಗಿತ್ತು. ಈ ವರ್ಷವೂ ಕೂಡ ಸೆಪ್ಟೆಂಬರ್‌ ತಿಂಗಳಲ್ಲಿ ಈ ಕಾರ್ಯಗಳು ನಡೆದ ಬಳಿಕ ‘ಬಿಗ್‌ ಬಾಸ್‌ ಸೀಸನ್‌ 9’ ಗ್ರಾಂಡ್‌ ಓಪನಿಂಗ್‌ ನಡೆಯಲಿದೆಯಂತೆ.


ಇದನ್ನೂ ಓದಿ: Salman Khan Net worth : 2300 ಕೋಟಿ ಆಸ್ತಿಯ ಒಡೆಯ ಸಲ್ಮಾನ್ : ಮದುವೆಯಾಗದಿದ್ದರೆ ಉತ್ತರಾಧಿಕಾರಿ ಯಾರು?


ಈ ಬಾರಿಯ ಸ್ಪರ್ಧಿಗಳು ಯಾರಾಗಲಿದ್ದಾರೆ? ಯಾವ ಫೀಲ್ಡ್‌ನಿಂದ ಆಯ್ಕೆ ಮಾಡಲಿದ್ದಾರೆ? ಎಂಬ ಪ್ರಶ್ನೆ ಎಲ್ಲರಲ್ಲಿ  ಮೂಡಿದ್ದು, ಸದ್ಯದಲ್ಲೇ ಅದಕ್ಕೆ ಬ್ರೇಕ್‌ ಬೀಳಲಿದೆ. ಇನ್ನು ಬಿಗ್‌ಬಾಸ್‌ ಅಂದಾಕ್ಷಣ ಮೊದಲು ನನೆಪಾಗೋದು ಆ ದೊಡ್ಮನೆ. ಪ್ರತಿ ಸೀಸನ್‌ನಿಂದ ಸೀಸನ್‌ಗೂ ಮನೆಯಲ್ಲಿ ಚೇಂಜಸ್‌ ತುಂಬಾನೆ ಇರತ್ತೆ. ಅದೇ ರೀತಿ ಈ ಬಾರಿ ಕೂಡ ಮನೆಯಲ್ಲಿ ಹೆಚ್ಚು ಬದಲಾವಣೆಗಳಿದ್ದು, ಈಗಾಗಲೇ ಕೆಲಸ ಶುರುವಾಗಿದೆ ಎಂಬ ಮಾತು ಕೇಳಿಬರುತ್ತಿದೆ.


ಇನ್ನು ಕಿಚ್ಚ ಬಾಸ್‌ ಅವರನ್ನು ಬಿಗ್‌ಬಾಸ್‌ ಸ್ಟೇಜ್‌ ಮೇಲೆ ಯಾವಾಗ ಕಣ್ತುಂಬಿಕೊಳ್ಳಬಹುದು ಎಂಬ ಕಾತರದಲ್ಲಿದ್ದಾರೆ ಅಭಿಮಾನಿಗಳು. ಮತ್ತೊಂದು ವಿಚಾರ ಅಂದ್ರೆ ಬಿಗ್‌ಬಾಸ್‌ ಶುರುವಾದ್ರೆ ಯಾವುದಾದ್ರೂ 2 ಸೀರಿಯಲ್‌ಗಳು ವೈಂಡ್‌ ಆಗೋದು ಪಕ್ಕಾ. ಆದ್ರೆ ಯಾವ ಸೀರಿಯಲ್‌ ಅನ್ನೋ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಆದ್ರೆ ತೆರೆಯ ಹಿಂದಿನ ತಯಾರಿಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ‘ಬಿಗ್‌ಬಾಸ್‌ ಸೀಸನ್‌ 9’ಕ್ಕೆ ಮೂಹೂರ್ತ ಇನ್ನೇನು ಕೆಲವೇ ದಿನಗಳಲ್ಲಿ ಫಿಕ್ಸ್‌ ಆಗೋದು ಪಕ್ಕಾ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.