Divya Suresh: ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್​ಗೆ ಅಪಘಾತ..!

ಕೊರೊನಾ ವ್ಯಾಕ್ಸಿನ್(COVID-19 Vaccine)ತೆಗೆದುಕೊಂಡು ಮನೆಗೆ ತೆರಳುವಾಗ ಈ ಅಪಘಾತ ನಡೆದಿದೆ ಎಂದು ತಿಳಿದುಬಂದಿದೆ.

Written by - Zee Kannada News Desk | Last Updated : Jan 19, 2022, 03:47 PM IST
  • ಕನ್ನಡ ‘ಬಿಗ್ ಬಾಸ್ ಸೀಸನ್ 8’ರ ಸ್ಪರ್ಧಿ ದಿವ್ಯಾ ಸುರೇಶ್ ಗೆ ಅಪಘಾತ
  • ದ್ವಿಚಕ್ರ ವಾಹನದಲ್ಲಿ ತೆರಳುವಾಗ ನಾಯಿಗಳು ಅಡ್ಡಬಂದ ಪರಿಣಾಮ ಅಪಘಾತ
  • ಕೊರೊನಾ ವ್ಯಾಕ್ಸಿನ್ ತೆಗೆದುಕೊಂಡು ಮನೆಗೆ ತೆರಳುವಾಗ ನಡೆದ ಘಟನೆ
Divya Suresh: ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್​ಗೆ ಅಪಘಾತ..! title=
ಅಪಘಾತದಿಂದ ದಿವ್ಯಾ ಸುರೇಶ್ ಗೆ ಸಣ್ಣಪುಟ್ಟ ಗಾಯಗಳಾಗಿವೆ

ಬೆಂಗಳೂರು: ಕನ್ನಡ ‘ಬಿಗ್ ಬಾಸ್ ಸೀಸನ್ 8’ರಲ್ಲಿ ಸಖತ್ ಸದ್ದು ಮಾಡಿದ್ದ ಸ್ಯಾಂಡಲ್ ವುಡ್ ನಟಿ ದಿವ್ಯಾ ಸುರೇಶ್(Divya Suresh)​  ಅವರಿಗೆ ಅಪಘಾತವಾಗಿದೆ. ಬೆಂಗಳೂರಿನ ಉತ್ತರಹಳ್ಳಿ ರೋಡ್ ನಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುವಾಗ ನಾಯಿಗಳು ಅಡ್ಡಬಂದ ಪರಿಣಾಮ ನಟಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.  

ಕೊರೊನಾ ವ್ಯಾಕ್ಸಿನ್(COVID-19 Vaccine)ತೆಗೆದುಕೊಂಡು ಮನೆಗೆ ತೆರಳುವಾಗ ಈ ಅಪಘಾತ ನಡೆದಿದೆ ಎಂದು ತಿಳಿದುಬಂದಿದೆ. ಅಪಘಾತದಿಂದ ಸಣ್ಣಪುಟ್ಟ ಗಾಯ ಮಾಡಿಕೊಂಡಿರುವ ದಿವ್ಯಾ ಸುರೇಶ್ ಸದ್ಯ ಪ್ರಾಥಮಿಕ ಚಿಕಿತ್ಸೆ ತೆಗೆದುಕೊಂಡು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Dhanush Divorce : ಪತ್ನಿಗೆ 'ಡೈವೋರ್ಸ್' ನೀಡಿದ ತಮಿಳು ನಟ ಧನುಷ್! 

ಈ ಬಗ್ಗೆ ಸ್ವತಃ ನಟಿ ದಿವ್ಯಾ ಸುರೇಶ್ ಸೋಷಿಯಲ್ ಮೀಡಿಯಾ(Social Media)ದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದೃಷ್ಟವಶಾತ್​ ಯಾವುದೇ ಅಪಾಯ ಸಂಭವಿಸಿಲ್ಲ. ಸಣ್ಣಪುಟ್ಟ ಗಾಯಗಳಾಗಿದೆ ಅಂತಾ ಹೇಳಿದ್ದಾರೆ. ಬೈಕ್​ನಲ್ಲಿ ತೆರಳುತ್ತಿದ್ದಾಗ ಅಪಘಾತ(Bike Accident) ಸಂಭವಿಸಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದು, ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದೇನೆ’ ಅಂತಾ ನಟಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಮುಖದ ಮೇಲೆ ದಿವ್ಯಾ ಸುರೇಶ್(Kannada Bigg Boss Contestant)ಗೆ ಸಣ್ಣಪುಟ್ಟ ಗಾಯ ಆಗಿದೆ. ಪ್ರಾಣಾಪಾಯದಿಂದ ದಿವ್ಯಾ ಸುರೇಶ್ ಪಾರಾಗಿದ್ದಾರೆ. ತಮ್ಮ ನೆಚ್ಚಿನ ನಟಿ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಇತ್ತೀಚೆಗೆ ದಿವ್ಯಾ ಸುರೇಶ್(Divya Suresh)ಕಿರಿಕ್​ ಮಾಡಿಕೊಂಡು ಸುದ್ದಿಯಾಗಿದ್ದರು. ನೈಟ್ ಕರ್ಫ್ಯೂ ವೇಳೆ ಎಂಜಿ ರಸ್ತೆಯಲ್ಲಿ ಅವರು ಓಡಾಡುತ್ತಿದ್ದರು. ಈ ಸಂದರ್ಭದಲ್ಲಿ ದಿವ್ಯಾ ಸುರೇಶ್ ಮತ್ತವರ ಸ್ನೇಹಿತರನ್ನು  ಪೊಲೀಸರು ಮನೆಗೆ ಕಳುಹಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ನಟಿ ಹೈಡ್ರಾಮಾ ನಡೆಸಿದ್ದು ದೊಡ್ಡ ಸುದ್ದಿಯಾಗಿತ್ತು. 

ಇದನ್ನೂ ಓದಿ: Viral Video: ‘ಪುಷ್ಪ’ ಸಿನಿಮಾದ ಮತ್ತೊಂದು ಹಾಡಿಗೆ ಮಸ್ತ್ ಡ್ಯಾನ್ಸ್ ಮಾಡಿದ ತಾಂಜಾನಿಯಾದ ಯುವಕ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News