Salman Khan Net worth : 2300 ಕೋಟಿ ಆಸ್ತಿಯ ಒಡೆಯ ಸಲ್ಮಾನ್ : ಮದುವೆಯಾಗದಿದ್ದರೆ ಉತ್ತರಾಧಿಕಾರಿ ಯಾರು?

ಸಲ್ಮಾನ್ ಗೆ ಈಗ 56 ವರ್ಷ ವಯಸ್ಸಾಗಿದೆ, ಆದ್ರೆ, ಖಾನ್ ಮದುವೆಯಾಗುತ್ತಾರೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಆದರೆ ಸಲ್ಮಾನ್ ಮದುವೆಯ ಮೂಡ್ ನಲ್ಲಿಲ್ಲ.

Written by - Channabasava A Kashinakunti | Last Updated : May 5, 2022, 05:10 PM IST
  • ಸಲ್ಮಾನ್ ಖಾನ್ ನೆಟ್ ವರ್ತ್ ಎಷ್ಟು?
  • ಸಲ್ಮಾನ್ ಆಸ್ತಿಗೆ ವಾರಸುದಾರರು ಯಾರು?
  • ಸಲ್ಮಾನ್ ಮುಂದಿನ ಸಿನಿಮಾಗಳು ಇವು
Salman Khan Net worth : 2300 ಕೋಟಿ ಆಸ್ತಿಯ ಒಡೆಯ ಸಲ್ಮಾನ್ : ಮದುವೆಯಾಗದಿದ್ದರೆ ಉತ್ತರಾಧಿಕಾರಿ ಯಾರು? title=

ಮುಂಬೈ : ಬಾಲಿವುಡ್ ಬ್ಯಾಡ ಬಾಯ್ ಸಲ್ಮಾನ್ ಖಾನ್ ಅಭಿಮಾನಿಗಳು ಅವರ ಮದುವೆಗಾಗಿ ಹಲವು ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದರು, ಆದರೆ ಸಲ್ಮಾನ್ ಮಾತ್ರ ಮಾಡುವೆ ಆಗ್ತಿಲ್ಲ. ಇದುವರೆಗೂ ಸಲ್ಮಾನ್ ಮದುವೆ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ಬಾರಿ ಸುದ್ದಿಯಾದರು ಮಾಡುವೆ ಆಗುವ ಆಸೆ ಮಾತ್ರ ಈಡೇರಲಿಲ್ಲ. ಅಂದಹಾಗೆ, ಸಲ್ಮಾನ್ ಖಾನ್ ಅವರ ಇತ್ತೀಚಿನ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ವಿಶೇಷ ಪ್ರದರ್ಶನವನ್ನು ತೋರಿಸಲು ಸಾಧ್ಯವಾಗದಿದ್ದರೂ, ಅವರ ಅಭಿಮಾನಿಗಳ ಕೊರತೆ ಇರಲಿಲ್ಲ. ಸಲ್ಮಾನ್ ಗೆ ಈಗ 56 ವರ್ಷ ವಯಸ್ಸಾಗಿದೆ, ಆದ್ರೆ, ಖಾನ್ ಮದುವೆಯಾಗುತ್ತಾರೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಆದರೆ ಸಲ್ಮಾನ್ ಮದುವೆಯ ಮೂಡ್ ನಲ್ಲಿಲ್ಲ.

ಸಲ್ಮಾನ್ ಖಾನ್ ನೆಟ್ ವರ್ತ್ ಎಷ್ಟು?

ಸಲ್ಮಾನ್ ಖಾನ್ ಪ್ರತಿ ವರ್ಷ ಸಿನಿಮಾ ಮತ್ತು ಜಾಹೀರಾತುಗಳ ಮೂಲಕ ಸಾಕಷ್ಟು ಹಣ ಗಳಿಸುತ್ತಾರೆ. ಮಾಧ್ಯಮ ವರದಿಗಳ ಪ್ರಕಾರ ಸಲ್ಮಾನ್ ಖಾನ್ ಒಟ್ಟು 2300 ಕೋಟಿ ಆಸ್ತಿಯ ಒಡೆಯರಾಗಿದ್ದಾರೆ. ಸಲ್ಮಾನ್ ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್ ನಟರಲ್ಲಿ ಒಬ್ಬರು, ಸಲ್ಮಾನ್ ಬಳಿ ಅನೇಕ ಐಷಾರಾಮಿ ಕಾರುಗಳಿವೆ ಮತ್ತು ಸಾವಿರಾರು ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಕಳೆದ 34 ವರ್ಷಗಳಿಂದ ಸಲ್ಮಾನ್ ಖಾನ್ ಬಾಲಿವುಡ್‌ನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಅವರು 'ಹಮ್ ಆಪ್ಕೆ ಹೈ ಕೌನ್', 'ಮೈನೆ ಪ್ಯಾರ್ ಕಿಯಾ', 'ದಬಾಂಗ್' ಮತ್ತು 'ವಾಂಟೆಡ್' ನಂತಹ ಅನೇಕ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ.

ಇದನ್ನೂ ಓದಿ : KGF 2 behind the scenes: ಇಲ್ಲಿದೆ ನೋಡಿ ಕೆಜಿಎಫ್‌ 2 ಮೇಕಿಂಗ್‌ ವಿಡಿಯೋ

ಸಲ್ಮಾನ್ ಆಸ್ತಿಗೆ ವಾರಸುದಾರರು ಯಾರು?

ಸಲ್ಮಾನ್ ಖಾನ್ ಸಂದರ್ಶನವೊಂದರಲ್ಲಿ ಅವರ ನಂತರ ಆಸ್ತಿಯ ವಾರಸುದಾರರು ಯಾರು ಆಗುತ್ತಾರೆ ಎಂದು ಹೇಳಿದ್ದರು. ನಾನು ಮದುವೆ ಆದರೂ ಅಥವಾ ಆಗದಿದ್ದರೂ, ನನ್ನ ನಂತರ ನನ್ನ ಆಸ್ತಿಯಲ್ಲಿ ಅರ್ಧದಷ್ಟು ಟ್ರಸ್ಟ್‌ಗೆ ಹೋಗಲಿದೆ. ಹೌದು, ನಾನು ಮದುವೆಯಾಗದಿದ್ದರೆ ನನ್ನ ಎಲ್ಲಾ ಆಸ್ತಿಯನ್ನು ಟ್ರಸ್ಟ್‌ಗೆ ದಾನದ ರೂಪದಲ್ಲಿ ನೀಡಲಾಗುವುದು ಎಂದು ಹೇಳಿದ್ದಾರೆ. 

ಸಲ್ಮಾನ್ ಮುಂದಿನ ಸಿನಿಮಾಗಳು ಇವು 

ಸಲ್ಮಾನ್ ಖಾನ್ ಕೊನೆಯ ಬಾರಿಗೆ 'ಅಂತಿಮ : ದಿ ಫೈನಲ್ ಟ್ರುತ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರ ಮುಂದಿನ ಚಿತ್ರಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಸಲ್ಮಾನ್ ಶೀಘ್ರದಲ್ಲೇ ಅವರ ಬಹು ನಿರೀಕ್ಷಿತ ಚಿತ್ರ 'ಟೈಗರ್ 3' ನಲ್ಲಿ ಕತ್ರಿನಾ ಕೈಫ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಮುಂದಿನ ವರ್ಷ ಅಂದರೆ ಏಪ್ರಿಲ್ 21,  2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಲ್ಮಾನ್ ಮತ್ತು ಕತ್ರಿನಾ ಜೋಡಿಯನ್ನು ಮತ್ತೊಮ್ಮೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಇದನ್ನೂ ಓದಿ : 'ಕೆ.ಜಿ.ಎಫ್-2 ಮತ್ತು ರಿಕ್ಕಿ ಕೇಜ್‌ ಕನ್ನಡದ ಹೆಮ್ಮೆ'

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News