'ಬಿಗ್ ಬಾಸ್-7' ಮುಗಿದು ವರ್ಷದ ಮೇಲೆ ಶೈನ್ ಶೆಟ್ಟಿಗೆ ಸಿಕ್ತು ಭರ್ಜರಿ ಗಿಫ್ಟ್

ಬಿಗ್ ಬಾಸ್ ಸೀಸನ್ 7 ಮುಗಿದು ಒಂದು ವರ್ಷ ಕಳೆದಿದೆ. 

Last Updated : Nov 5, 2020, 03:14 PM IST
  • ಬಿಗ್ ಬಾಸ್-7 ವಿನ್ನರ್ ಆಗಿ ಸೀರಿಯಲ್ ನಟ ಶೈನ್ ಶೆಟ್ಟಿ
  • ಶೋ ನಲ್ಲಿ ಗಿಫ್ಟ್ ಆಗಿ ಬಂದ ಟಾಟಾ ಆಲ್ಟ್ರೋಜ್ ಕಾರು
  • ಕಲರ್ಸ್ ಕನ್ನಡ ವಾಹಿನಿ ಅವರಿಗೂ ನನ್ನ ಧನ್ಯವಾದ ಎಂದ ಶೈನ್ ಶೆಟ್ಟಿ
'ಬಿಗ್ ಬಾಸ್-7' ಮುಗಿದು ವರ್ಷದ ಮೇಲೆ ಶೈನ್ ಶೆಟ್ಟಿಗೆ ಸಿಕ್ತು ಭರ್ಜರಿ ಗಿಫ್ಟ್ title=
Pic Courtesy: Facebook

ಬಿಗ್ ಬಾಸ್ ಸೀಸನ್ 7 ಮುಗಿದು ಒಂದು ವರ್ಷ ಕಳೆದಿದೆ. ಆದ್ರೆ ಬಿಗ್ ಬಾಸ್-7 (Bigg Boss-7) ವಿನ್ನರ್ ಆಗಿ ಸೀರಿಯಲ್  ನಟ ಶೈನ್ ಶೆಟ್ಟಿ (Shine Shetty) ಹೊರಹೊಮ್ಮಿದ್ದರು. ಬಿಗ್ ಮನೆಯಲ್ಲಿ ಚುರುಕಾಗಿ ಆಟವಾಡುವ ಮೂಲಕ ಕನ್ನಡಿಗರ  ಮನಗೆದ್ದಿದ್ದರು.

Bigg Boss 14: ವಿವಾದದ ಬಳಿಕ ವಧುವಿನ ಅವತಾರದಲ್ಲಿ ಸಾರಾ ಗುರ್ಪಾಲ್ ಫೋಟೋಗಳು ವೈರಲ್

ಶೈನ್ ಶೆಟ್ಟಿ ಬಿಗ್ ಬಾಸ್-7 ವಿನ್ನರ್ ಪಟ್ಟದ ಜೊತೆಗೆ 50 ಲಕ್ಷ ಹಣವನ್ನ ಪ್ರೈಜ್ ಪಡೆದಿದ್ದರು. ಕಳೆದೆಲ್ಲ ಸೀಸನ್ ಗಳಿಗಿಂತ ಬಿಗ್ ಬಾಸ್-7 ವಿನ್ನರ್ ಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಹೌದು, ಶೈನ್ ಬಿಗ್ ಬಾಸ್ (Bigg Boss) ವಿನ್ನರ್ ಆದ ಸಮಯದಲ್ಲಿ ಸಿಗುವ 50 ಲಕ್ಷ ರೂಪಾಯಿ ಹಣದ ಜೊತೆಗೆ ಇನ್ನು ಹೆಚ್ಚಿನ ಹಣ ಪಡೆದುಕೊಂಡಿದ್ದರು. ಅದೆಲ್ಲದರ ಜೊತೆಗೆ ಒಂದು ಕಾರ್ ಕೂಡ ಗಿಫ್ಟ್ ಆಗಿ ಸಿಕ್ಕಿತ್ತು. ಆದರೆ ಶೈನ್ ಗೆ  ಗೆದ್ದ ಕಾರು ಇನ್ನೂ ಸಿಕ್ಕಿರಲಿಲ್ಲ. 

 
 
 
 

 
 
 
 
 
 
 
 
 

Received the Tata Altroz car from Key Motors Kanakpura Road branch post lock down. ನಿಮ್ಮೆಲ್ಲರ ಆಶೀರ್ವಾದದಿಂದ ಈ ಕಾರು ನನಗೆ ದೊರಕಿರುವುದೆಂದು ಸಂತಸದಿಂದ ತಿಳಿಸಬಯಸುತ್ತೇನೆ. ಎಲ್ಲ ಕೆಲಸಗಳನ್ನು ಉತ್ತಮವಾಗಿ ನಿಭಾಯಿಸಿದ Key Motors, Kanakapura Road ಇವರಿಗೆ ಧನ್ಯವಾದಗಳು. ಹಾಗೆಯೇ ಕೊಡುಗೆ ನೀಡಿರುವ @tatamotorscars ಹಾಗು @colorskannadaofficial ಅವರಿಗೂ ನನ್ನ ಧನ್ಯವಾದಗಳು. #biggbosskannada #colorskannada #tataaltroz #shineshetty #alwaysshine #shineshettyfans

A post shared by SHINE SHETTY (@shineshettyofficial) on

ಬಿಗ್ ಬಾಸ್-7  ಮುಗಿದು ಒಂದು ವರ್ಷ ಮುಗಿಯುತ್ತ ಬಂದಿದೆ. ಆದ್ರೆ ಈಗ ಶೋ ನಲ್ಲಿ ಗಿಫ್ಟ್ ಆಗಿ ಬಂದ ಕಾರು ಶೈನ್ ಶೆಟ್ಟಿ ಮನೆಸೇರಿದೆ. ಟಾಟಾ ಆಲ್ಟ್ರೋಜ್ (TaTa Altroz) ಕಾರನ್ನು ಶೈನ್ ಗಿಫ್ಟ್ ಆಗಿ ಪಡೆದಿದ್ದಾರೆ. ಗಿಫ್ಟ್ ಆಗಿ ಬಂದ ಕಾರುನ್ನು ತಾಯಿಯ ಜೊತೆ ಹೋಗಿ ಪಡೆಯುತ್ತಿರುವ ಸಂತಸದ ವಿಡಿಯೋವನ್ನ ಶೈನ್ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. 

ರಾಯಲ್ ಆಗಿದೆ 'Bigg Boss'; ಬಿಗ್ ಬಾಸ್ ಮನೆಯೊಳಗಿನ ಕೆಲವು ಫೋಟೋಗಳು!

ಈ ಕುರಿತು ಶೈನ್  'ನಿಮ್ಮೆಲ್ಲರ ಆಶೀರ್ವಾದದಿಂದ ಈ ಕಾರು ನನಗೆ ದೊರಕಿರುವುದೆಂದು ಸಂತಸದಿಂದ ತಿಳಿಸಬಯಸುತ್ತೇನೆ. ಎಲ್ಲ ಕೆಲಸಗಳನ್ನು ಉತ್ತಮವಾಗಿ ನಿಭಾಯಿಸಿದ ಕೀ ಮೋಟರ್ಸ್, ಕನಕಪುರ  ರೋಡ್ ಇವರಿಗೆ ಧನ್ಯವಾದಗಳು. ಹಾಗೆಯೇ ಕೊಡುಗೆ ನೀಡಿರುವ ಕಲರ್ಸ್ ಕನ್ನಡ ವಾಹಿನಿ ಅವರಿಗೂ ನನ್ನ ಧನ್ಯವಾದಗಳು ಎಂದು ಬರೆದು ಕೊಂಡಿದ್ದಾರೆ.

Trending News