Nora Fatehi: ನೋರಾ ಫತೇಹಿ ಮೋಹಕ ಶೈಲಿಗೆ ಮನಸೋತ ಫ್ಯಾನ್ಸ್
Nora Fatehi: ನಟಿ ನೋರಾ ಫತೇಹಿ ತಮ್ಮ ಹೊಸ ಫೋಟೋಶೂಟ್ ಬಗ್ಗೆ ಚರ್ಚೆಯಲ್ಲಿದ್ದಾರೆ. ಆಕೆ ತನ್ನ ಮೋಹಕ ಶೈಲಿಯಿಂದ ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡುತ್ತಲೇ ಇರುತ್ತಾಳೆ. ಈಗ ನೋರಾ ಫತೇಹಿ ತನ್ನ ಹೊಸ ಫೋಟೋಶೂಟ್‌ನ ಕೆಲವು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಅದು ಅಂತರ್ಜಾಲದಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ.
Nora Fatehi: ನಟಿ ನೋರಾ ಫತೇಹಿ ತಮ್ಮ ಹೊಸ ಫೋಟೋಶೂಟ್ ಬಗ್ಗೆ ಚರ್ಚೆಯಲ್ಲಿದ್ದಾರೆ. ಆಕೆ ತನ್ನ ಮೋಹಕ ಶೈಲಿಯಿಂದ ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡುತ್ತಲೇ ಇರುತ್ತಾಳೆ. ಈಗ ನೋರಾ ಫತೇಹಿ ತನ್ನ ಹೊಸ ಫೋಟೋಶೂಟ್‌ನ ಕೆಲವು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಅದು ಅಂತರ್ಜಾಲದಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಸಾಕಷ್ಟು ವೈರಲ್ ಆಗುತ್ತಿವೆ.
ಲೆಹೆಂಗಾ-ಚೋಲಿ ಧರಿಸಿರುವ ನೋರಾ ಫತೇಹಿ (Nora Fatehi) ಅವರ ಮೋಹಕ ಭಂಗಿಯನ್ನು ಈ ಫೋಟೋಗಳಲ್ಲಿ ಕಾಣಬಹುದು. ಈ ಫೋಟೋ ಶೂಟ್ ವೇಳೆ ನೋರಾ ಫತೇಹಿ ವಿಭಿನ್ನ ಶೈಲಿಗಳಲ್ಲಿ ಮನಮೋಹಕ ಪೋಸ್‌ಗಳನ್ನು ನೀಡುತ್ತಿರುವುದು ಕಂಡುಬಂದಿದೆ. ನೋರಾ ಅವರ ಈ ಫೋಸ್ ಕಂಡು ಫಿದಾ ಆಗಿರುವ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮಿಸ್ಟ್ರಿ ಮೆನ್ ಗೂ ಮುನ್ನ ಈ ಐದು ಜನರ ಜೊತೆ ಕೇಳಿ ಬಂದಿತ್ತು ಕಂಗನಾ ಹೆಸರು
ಸಾಮಾಜಿಕ ಮಾಧ್ಯಮದಲ್ಲಿ (Social Media) ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ 'ಆಪ್ನೆ ತೋ ಗದರ್ ಮಚಾ ದಿಯಾ' ಎಂದು ಬರೆಯುತ್ತಿದ್ದಾರೆ. ಇದಲ್ಲದೆ, ಅಭಿಮಾನಿಗಳು ನೋರಾ ಅವರ ಪೋಸ್ಟ್‌ನಲ್ಲಿ ಫೈರ್ ಎಮೋಜಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಅವರ ಫೋಟೋಗಳಿಗೆ ಕೇವಲ ನಾಲ್ಕು ಗಂಟೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ.
ಇದಕ್ಕೂ ಮುನ್ನ 'ಸತ್ಯಮೇವ ಜಯತೆ 2' ಚಿತ್ರದ 'ಕುಸು-ಕುಸು' ಹಾಡು ಸಾಕಷ್ಟು ಸದ್ದು ಮಾಡಿತ್ತು. ಇದರಲ್ಲಿ ನೋರಾ ಫತೇಹಿ ಅವರ ಅಬ್ಬರದ ನೃತ್ಯಕ್ಕೆ ಜನಾರು ಮನಸೋತಿದ್ದರು. ಜರಾ ಖಾನ್ ಮತ್ತು ದೇವ್ ನೇಗಿ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಸಂಗೀತ ಸಂಯೋಜಕ ತನಿಷ್ಕ್ ಬಾಗ್ಚಿ ಹಾಡನ್ನು ಬರೆದು ಸಂಯೋಜಿಸಿದ್ದಾರೆ.
ಈ ಹಾಡನ್ನು 37 ಗಂಟೆಗಳಲ್ಲಿ ಚಿತ್ರೀಕರಿಸಲಾಗಿದೆ
ನೋರಾ ಫತೇಹಿ ಚಿತ್ರದ 'ಕುಸು-ಕುಸು' ಹಾಡು ಚಿತ್ರೀಕರಣಕ್ಕೆ 37 ಗಂಟೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. ವರದಿಯ ಪ್ರಕಾರ, ನೋರಾ ಅವರು ಇತರ ಕೆಲಸಗಳಲ್ಲಿ ನಿರತರಾಗಿದ್ದರಿಂದ ಈ ಹಾಡಿನ ಚಿತ್ರೀಕರಣಕ್ಕೆ ಬಹಳ ಕಡಿಮೆ ಸಮಯವಿತ್ತು. ನೋರಾ ಫತೇಹಿ ಈ ಹಾಡನ್ನು ವಿರಾಮ ತೆಗೆದುಕೊಳ್ಳದೆ ಚಿತ್ರೀಕರಿಸಿದ್ದಾರೆ. ಮೊದಲ ದಿನ 15 ಗಂಟೆಗಳ ಕಾಲ ನಿರಂತರವಾಗಿ ಹಾಡಿನ ಚಿತ್ರೀಕರಣ ನಡೆದಿದೆ. ಇದಾದ ನಂತರ ಮರುದಿನ ಬೆಳಗ್ಗೆ 7:00 ಗಂಟೆಗೆ ಸೆಟ್‌ಗೆ ಬಂದ ನೋರಾ ಫತೇಹಿ ಸತತ 22 ಗಂಟೆಗಳ ಕಾಲ ಶೂಟಿಂಗ್ ನಡೆಸಿದರು ಎನ್ನಲಾಗಿದೆ. ವೀಡಿಯೋ ಹಾಡಿನಲ್ಲಿ ಅವರ ಶ್ರಮ ಸ್ಪಷ್ಟವಾಗಿ ಗೋಚರಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ