Rajkummar Rao And Patralekhaa Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜಕುಮಾರ್ ರಾವ್ - ಪತ್ರಲೇಖಾ, ಇಲ್ಲಿವೆ ಛಾಯಾಚಿತ್ರಗಳು

Rajkummar Rao And Patralekhaa Marriage - ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Written by - Nitin Tabib | Last Updated : Nov 15, 2021, 08:24 PM IST
  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜಕುಮಾರ್ ರಾವ್-ಪತ್ರಲೇಖಾ.
  • ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ ದಂಪತಿಗಳು.
  • ಇದಕ್ಕೂ ಮೊದಲು ಉಭಯ ಸಂಗಾತಿಗಳು ಶನಿವಾರ ಚಂಡೀಗಢದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
Rajkummar Rao And Patralekhaa Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜಕುಮಾರ್ ರಾವ್ - ಪತ್ರಲೇಖಾ, ಇಲ್ಲಿವೆ ಛಾಯಾಚಿತ್ರಗಳು title=
Rajkummar Rao And Patralekhaa Marriage (Photo Courtesy-Instagram)

Rajkummar Rao And Patralekhaa Marriage - ನಟ ರಾಜ್‌ಕುಮಾರ್ ರಾವ್ (Rajkummar Rao) ಮತ್ತು ನಟಿ ಪತ್ರಲೇಖಾ (Patralekhaa) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಇಬ್ಬರೂ ತಮ್ಮ  ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರವನ್ನು (Rajkummar Rao Marriage Photos) ಹಂಚಿಕೊಂಡ ಪತ್ರಲೇಖಾ, 'ನಾನು ಇಂದು ಮದುವೆಯಾಗಿದ್ದೇನೆ. ನನ್ನ ಗೆಳೆಯ, ನನ್ನ ಕ್ರೈಂ ಪಾರ್ಟ್ನರ್, ನನ್ನ ಕುಟುಂಬ, ನನ್ನ ಆತ್ಮ ಸಂಗಾತಿ... ಕಳೆದ 11 ವರ್ಷಗಳಿಂದ ನನ್ನ ಉತ್ತಮ ಸ್ನೇಹಿತ! ನಿಮ್ಮ ಪತ್ನಿಯಾಗುವುದಕ್ಕಿಂತ ದೊಡ್ಡ ಭಾವ ಬೇರಾವುದು ಇಲ್ಲ' ಎಂದು ಬರೆದುಕೊಂಡಿದ್ದಾರೆ. 

ಮತ್ತೊಂದೆಡೆ, ರಾಜ್‌ಕುಮಾರ್ ರಾವ್ ಕೂಡ  ಇನ್‌ಸ್ಟಾಗ್ರಾಮ್‌ನಲ್ಲಿ ಭಾವಚಿತ್ರ (Rajkummar Rao-Patralekhaa Marriage Pictures) ಹಂಚಿಕೊಂಡು, "ಅಂತಿಮವಾಗಿ 11 ವರ್ಷಗಳ ಪ್ರೀತಿ, ಪ್ರಣಯ, ಸ್ನೇಹ ಮತ್ತು ವಿನೋದದ ನಂತರ, ನನ್ನ ಆತ್ಮ ಸಂಗಾತಿ, ನನ್ನ ಆತ್ಮೀಯ ಸ್ನೇಹಿತೆ, ನನ್ನ ಕುಟುಂಬ, ನನ್ನ ಸರ್ವಸ್ವದ ಜೊತೆಗೆ ನನ್ನ ವಿವಾಹವಾಗಿದೆ. ಇಂದು ನನಗೆ ನಿನ್ನ ಪತಿ ಎಂದು ಕರೆಯಲಾಗುವುದು. ಇದಕ್ಕಿಂತ ಹೆಚ್ಚಿನ ಸಂತೋಷವಿಲ್ಲ, ಪತ್ರಲೇಖಾ. ಎಂದೆಂದಿಗೂ... ಮತ್ತು ನಂತರವೂ..." ಎಂದು ಬರೆದುಕೊಂಡಿದ್ದಾರೆ. 

 
 
 
 

 
 
 
 
 
 
 
 
 
 
 

A post shared by RajKummar Rao (@rajkummar_rao)

ಇದನ್ನೂ ಓದಿ-ರಾಜಸ್ಥಾನದಲ್ಲಿ ನಡೆಯಲಿದೆ Vicky Kaushal ಮತ್ತು Katrina Kaif ಅದ್ದೂರಿ ವಿವಾಹ

ಇದಕ್ಕೂ ಮೊದಲು ಉಭಯ ಸಂಗಾತಿಗಳು  ಶನಿವಾರ ಚಂಡೀಗಢದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2010 ರಿಂದ ಒಟ್ಟಿಗೆ ಕಾಣಿಸಿಕೊಂಡಿದ್ದ ರಾಜಕುಮಾರ್ ರಾವ್ ಮತ್ತು ಪತ್ರಲೇಖಾ ಅವರು ನ್ಯೂ ಚಂಡೀಗಢದ ಒಬೆರಾಯ್ ಸುಖವಿಲಾಸ್ ಸ್ಪಾ ರೆಸಾರ್ಟ್‌ನಲ್ಲಿ ಮದುವೆಯ ಔತಣಕೂಡ ಏರ್ಪಡಿಸಿದ್ದರು. ಈ ಔತಣಕೂದಕ್ಕೆ ಚಲನಚಿತ್ರ ನಿರ್ಮಾಪಕಿ ಫರಾ ಖಾನ್ ಮತ್ತು ನಟ ಸಾಕಿಬ್ ಸಲೀಂ ಸೇರಿದಂತೆ ಅವರ ಕೆಲವು ನಿಕಟ ಸ್ನೇಹಿತರು ಭಾಗವಹಿಸಿದ್ದರು.

ಇದನ್ನೂ ಓದಿ-Shilpa Shetty And Raj Kundra : ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾಗೆ ಮತ್ತೆ ಸಂಕಷ್ಟ : ಇವರ ವಿರುದ್ಧ ದಾಖಲಾಗಿದೆ 'ಫ್ರಾಡ್ ಕೇಸ್'!

ಉಭಯ ತಾರಾಮಣಿಗಳು ಖ್ಯಾತ ಚಿತ್ರ ನಿರ್ಮಾಪಕ ಹಂಸಲ್ ಮೆಹ್ತಾ ಅವರ 2014ರಲ್ಲಿ ಬಿಡುಗಡೆಯಾದ 'ಸಿಟಿಲೈಟ್ಸ್' ಹಾಗೂ ಆಲ್ಟ್ ಬಾಲಾಜಿಯ 'ಬೋಸ್: ಡೆಡ್/ಅಲೈವ್'ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-Katrina Kaif: ಕತ್ರಿನಾ ಕೈಫ್ ಡ್ಯಾನ್ಸ್ ಪ್ರಾಕ್ಟೀಸ್ ವಿಡಿಯೋ ವೈರಲ್, ವಿಕ್ಕಿ ಜೊತೆ ಮದುವೆಗೆ ನಡೆದಿದೆಯೇ ತಯಾರಿ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News