ಮಿಸ್ಟ್ರಿ ಮೆನ್‌ ಗೂ ಮುನ್ನ ಈ ಐದು ಜನರ ಜೊತೆ ಕೇಳಿ ಬಂದಿತ್ತು ಕಂಗನಾ ಹೆಸರು

ತನ್ನ ಜೀವನದಲ್ಲಿ ಒಬ್ಬ ವಿಶೇಷ ವ್ಯಕ್ತಿ ಇದ್ದಾನೆ ಎಂದು ಕಂಗನಾ ಹೇಳಿಕೊಂಡಿದ್ದಾರೆ.  ಅವರ ಬಗ್ಗೆ ಶೀಘ್ರದಲ್ಲೇ ಎಲ್ಲರಿಗೂ ತಿಳಿಯಲಿದೆ ಎಂದವರು ಹೇಳಿದ್ದಾರೆ.

Written by - Ranjitha R K | Last Updated : Nov 15, 2021, 07:31 PM IST
  • ಕಂಗನಾ ರನೌತ್‌ ಜೀವನದಲ್ಲಿ ಮಿಸ್ಟ್ರಿ ಮೆನ್‌
  • ಕಂಗನಾ ಹೆಸರು ಆದಿತ್ಯ ಪಾಂಚೋಲಿ ಜೊತೆ ಕೇಳಿ ಬಂದಿತ್ತು.
  • ಕಂಗನಾ ಹೃತಿಕ್ ನಡುವೆ ಹುಟ್ಟಿಕೊಂಡಿತ್ತು ವಿವಾದ
ಮಿಸ್ಟ್ರಿ ಮೆನ್‌ ಗೂ ಮುನ್ನ ಈ ಐದು ಜನರ ಜೊತೆ ಕೇಳಿ ಬಂದಿತ್ತು ಕಂಗನಾ ಹೆಸರು title=
ಕಂಗನಾ ರನೌತ್‌ ಜೀವನದಲ್ಲಿ ಮಿಸ್ಟ್ರಿ ಮೆನ್‌ (file photo)

ನವದೆಹಲಿ : ಕಂಗನಾ ರನೌತ್‌ (Kangna Ranaut) ಜೀವನದಲ್ಲಿ ವಿಶೇಷ ವ್ಯಕ್ತಿಯ ಪ್ರವೇಶವಾಗಿದೆ. ಈ ಬಗ್ಗೆ ನಟಿ ಕಂಗನಾ ಹೇಳಿಕೆ ನೀಡಿದ್ದು, ಅವರ ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದೆ. ತನ್ನ ಜೀವನದಲ್ಲಿ ಒಬ್ಬ ವಿಶೇಷ ವ್ಯಕ್ತಿ ಇದ್ದಾನೆ ಎಂದು ಕಂಗನಾ ಹೇಳಿಕೊಂಡಿದ್ದಾರೆ.  ಅವರ ಬಗ್ಗೆ ಶೀಘ್ರದಲ್ಲೇ ಎಲ್ಲರಿಗೂ ತಿಳಿಯಲಿದೆ ಎಂದವರು ಹೇಳಿದ್ದಾರೆ.  ಈ ಹೇಳಿಕೆಯ ನಂತರ  ಕಂಗನಾ ರನೌತ್‌ ಹೇಳಿರುವ ವ್ಯಕ್ತಿ ಯಾರು ಎನ್ನುವ ಸಂದೇಹ ಎಲ್ಲರನ್ನು ಕಾಡತೊಡಗಿದೆ. 

ಆದಿತ್ಯ ಪಾಂಚೋಲಿ

आदित्य पंचोली (Aditya Pancholi)
ಕಂಗನಾ (Kangna Ranaut) ಹೆಸರು ಆದಿತ್ಯ ಪಾಂಚೋಲಿ ಜೊತೆ ಕೇಳಿ ಬಂದಿತ್ತು.  ಕಂಗನಾ ಸ್ಟ್ರಗಲಿಂಗ್‌  ದಿನಗಳಲ್ಲಿ  ಆದಿತ್ಯ ಪಾಮಚೋಲಿ ಜೊತೆ ಕಂಗನಾ ಹೆಸರು ಕೇಳಿ ಬಂದಿತ್ತು. ಇಬ್ಬರ ಪ್ರೀತಿಯ ವಿಚಾರ  ಎಲ್ಲೆಡೆ ಚರ್ಚೆಯಾಗಿತ್ತು. ನಂತರ ಆದಿತ್ಯ ಪಾಂಚೋಲಿ (Aditya Pancholi) ತನ್ನ ಮೇಲೆ ಹಲ್ಲೆ ಮಾಡಿರುವುದಾಗಿ ಕಂಗನಾ ಆರೋಪಿಸಿದ್ದರು. ಇದಾದ ನಂತರ ಇಬ್ಬರ ಸಂಬಂಧ ಮುರಿಸು ಬಿದ್ದಿತ್ತು.

ಇದನ್ನೂ ಓದಿ :ಒಂದು ಚಿತ್ರಕ್ಕೆ ಕತ್ರಿನಾ ಪಡೆಯುವ ಸಂಭಾವನೆ ಎಷ್ಟು ಕೋಟಿ ಗೊತ್ತಾ?

ಅಧ್ಯಯನ್ ಸುಮನ್

अध्ययन सुमन (Adhyayan Suman)
ರಾಝ್ 2 ಚಿತ್ರೀಕರಣದ ಸಮಯದಲ್ಲಿ, ಕಂಗನಾ ಮತ್ತು ಅಧ್ಯಯನ್ ಸುಮನ್‌ (Adhyayan Suman) ಪ್ರೀತಿಯ ವಿಚಾರ ಎಲ್ಲೆಡೆ  ಹಬ್ಬಿತ್ತು.  ಅಧ್ಯಯನ್‌ ತಂದೆ ಶೇಖರ್ ಸುಮನ್ ಗೆ ಈ ಸಂಬಂಧ ಇಷ್ಟವಿರಲಿಲ್ಲ. ನಂತರ ಕಂಗನಾ ವೃತ್ತಿಯತ್ತ ಗಮನ ಹರಿಸಬೇಕು ಎಂದು ಅಧ್ಯಯನ್‌ನಿಂದ ದೂರವಾಗಿದ್ದರು. 

ನಿಕೋಲಸ್ ಲಾಫರ್ಟಿ

निकोलस लाफर्टी (Nicholas Lafferty)
ಕಂಗನಾ ರನೌತ್‌ ಹೆಸರು ದೇಶದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಸದ್ದು ಮಾಡಿತ್ತು.  ನಟಿಯ ಹೆಸರು ವಿದೇಶಿ ವೈದ್ಯ ನಿಕೋಲಸ್ ಲಾಫರ್ಟಿಯೊಂದಿಗೆ (Nicholas Lafferty) ಕೂಡಾ ಕೇಳಿ ಬಂದಿತ್ತು.  

ಇದನ್ನೂ ಓದಿ :  ಕೊರೋನಾದಿಂದ ಚೇತರಿಸಿಕೊಂಡ ನಟಿ ಉರ್ಮಿಳಾ ಮಾತೋಂಡ್ಕರ್

ಅಜಯ್ ದೇವಗನ್

अजय देवगन (Ajay Devgn)
ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ಚಿತ್ರದಲ್ಲಿ ಕಂಗನಾ ಅಜಯ್ ದೇವಗನ್ (Ajay Devgan) ಜೊತೆ ಕೆಲಸ ಮಾಡಿದ್ದರು. ಅಲ್ಲಿಂದ ಕಂಗನಾ ಅಜಯ್ ದೇವ್‌ ಗನ್‌ ನನ್ನು ಬಹಳ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಕಂಗನಾ ಅಜಯ್ ಪ್ರೀತಿಯ ವಿಷಯದಲ್ಲಿ ತುಂಬಾ ಗಂಭೀರವಾಗಿದ್ದರು.  

ಹೃತಿಕ್ ರೋಷನ್

ऋतिक रोशन (Hrithik Roshan)
 ಹೃತಿಕ್ (Hritik Roshan) ಜೊತೆ ಸಂಬಂಧ ಹೊಂದಿರುವುದಾಗಿ ಕಂಗನಾ ಎಲ್ಲರ ಮುಂದೆ ಹೇಳಿದ್ದಾರೆ. ಆದರೆ  ಹೃತಿಕ್ ಇದನ್ನು ನಿರಾಕರಿಸಿದ್ದರು. ಇಲ್ಲಿಂದ ಕಂಗನಾ ಮತ್ತು ಹೃತಿಕ್ ನಡುವೆ ವಿವಾದ ಹುಟ್ಟಿಕೊಂಡಿತು ಮತ್ತು ಕಂಗನಾ ಹೃತಿಕ್ ಅವರ ಅನೇಕ ವೈಯಕ್ತಿಕ ವಿವರಗಳು ಮತ್ತು ಮೇಲ್‌ಗಳನ್ನು ಸಾರ್ವಜನಿಕಗೊಳಿಸಿದ್ದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ..

Trending News