ಒಂದು ಚಿತ್ರಕ್ಕೆ ಕತ್ರಿನಾ ಪಡೆಯುವ ಸಂಭಾವನೆ ಎಷ್ಟು ಕೋಟಿ ಗೊತ್ತಾ?

ವರದಿಗಳ ಪ್ರಕಾರ, ಕತ್ರಿನಾ ಕೈಫ್ ಅವರ ನಿವ್ವಳ ಆದಾಯ  224 ಕೋಟಿಗಳು. ಇದಲ್ಲದೇ ಕತ್ರಿನಾ ಒಂದು ಚಿತ್ರಕ್ಕೆ 10 ರಿಂದ 11 ಕೋಟಿ ರೂ. ಗಳ ಸಂಭಾವನೆ ಪಡೆಯುತ್ತಾರೆ.

Written by - Ranjitha R K | Last Updated : Nov 15, 2021, 05:53 PM IST
  • ಕೋಟಿಗಳಲ್ಲಿದೆ ಕತ್ರಿನಾ ಕೈಫ್‌ ಸಂಭಾವನೆ
  • ಕತ್ರಿನಾ ಕೈಫ್ ಅವರ ನಿವ್ವಳ ಆದಾಯ 224 ಕೋಟಿಗಳು
  • ಗಳಿಕೆಯ ವಿಷಯದಲ್ಲಿ ಕತ್ರಿನಾ ಚಿತ್ರರಂಗದ ಹಲವು ನಟಿಯರಿಗಿಂತ ಮುಂದಿದ್ದಾರೆ.
ಒಂದು ಚಿತ್ರಕ್ಕೆ ಕತ್ರಿನಾ ಪಡೆಯುವ ಸಂಭಾವನೆ ಎಷ್ಟು ಕೋಟಿ ಗೊತ್ತಾ?  title=
Katrina Kaif (file photo)

ನವದೆಹಲಿ : ಬಾಲಿವುಡ್ ಚಿತ್ರರಂಗದ ಯಶಸ್ವಿ ನಟಿಯರಲ್ಲಿ ಕತ್ರಿನಾ ಕೈಫ್ (Katrina Kaif) ಕೂಡ ಒಬ್ಬರು. ತಮ್ಮ ಕಠಿಣ ಪರಿಶ್ರಮದ ಮೂಲಕ ಕತ್ರಿನಾ ಈ ಸ್ಥಾನಕ್ಕೆ ಏರಿದ್ದಾರೆ. ಕತ್ರಿನಾ ಕಳೆದ ಕೆಲವು ವರ್ಷಗಳಲ್ಲಿ ಅನೇಕ ಸೂಪರ್‌ ಹಿಟ್‌  (Katrina Films) ಚಿತ್ರಗಳನ್ನು ನೀಡಿದ್ದಾರೆ. ಗಳಿಕೆಯ ವಿಷಯದಲ್ಲಿ ಕತ್ರಿನಾ ಚಿತ್ರರಂಗದ ಹಲವು ನಟಿಯರಿಗಿಂತ ಮುಂದಿದ್ದಾರೆ. 

ನಿವ್ವಳ ಆದಾಯ 224 ರೂ. ಕೋಟಿಗಳು :
ವರದಿಗಳ ಪ್ರಕಾರ, ಕತ್ರಿನಾ ಕೈಫ್ (Katrina Kaif) ಅವರ ನಿವ್ವಳ ಆದಾಯ  224 ಕೋಟಿಗಳು. ಇದಲ್ಲದೇ ಕತ್ರಿನಾ ಒಂದು ಚಿತ್ರಕ್ಕೆ 10 ರಿಂದ 11 ಕೋಟಿ ರೂ. ಗಳ ಸಂಭಾವನೆ ಪಡೆಯುತ್ತಾರೆ. ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಾಗಿ ಅವರು, 6 ರಿಂದ 7 ಕೋಟಿ ರೂಪಾಯಿಗಳ ಭಾರೀ ಶುಲ್ಕವನ್ನು ಕೂಡಾ ವಿಧಿಸುತ್ತಾರೆ. ಅಚ್ಚರಿ ಎಂದರೆ ಕೋಟಿಗಟ್ಟಲೆ ಸಂಪಾದನೆ ಮಾಡಿದರೂ ಕತ್ರಿನಾ ತನಗಾಗಿ ಮನೆ ಖರೀದಿಸಿಲ್ಲ. ಇನ್ನೂ ಅವರು ಬಾಡಿಗೆ ಫ್ಲಾಟ್‌ನಲ್ಲಿಯೇ (Rented Flat) ವಾಸಿಸುತ್ತಿದ್ದಾರೆ. 

ಇದನ್ನೂ ಓದಿ :  Kangana Ranaut: ಕಂಗನಾ ಬೆಂಬಲಕ್ಕೆ ಬಂದ ಈ ಹಿರಿಯ ನಟ ಏನ್ ಹೇಳಿದ್ದಾರೆ ಗೊತ್ತಾ?

ಕತ್ರಿನಾ ಕೈಫ್ 2003 ರಲ್ಲಿ 'ಬೂಮ್' ಚಿತ್ರದ ಮೂಲಕ ಬಾಲಿವುಡ್‌ಗೆ (Bollywood) ಪಾದಾರ್ಪಣೆ ಮಾಡಿದರು. ಅಲ್ಲಿಂದ ಇಲ್ಲಿಯವರೆಗೆ ಕತ್ರಿನಾ 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಕತ್ರಿನಾ ಅಭಿನಯದ 'ಸೂರ್ಯವಂಶಿ' ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರ ಇದುವರೆಗೆ ಬಾಕ್ಸ್ ಆಫೀಸ್‌ನಲ್ಲಿ 150 ಕೋಟಿ ರೂ.ಗೂ ಹೆಚ್ಚು ಗಳಿಸಿದೆ.

ಶೀಘ್ರದಲ್ಲೇ ಕತ್ರಿನಾ ವಿಕ್ಕಿ ಕೌಶಲ್‌ ಸಪ್ತಪದಿ:
ಕಳೆದ ಕೆಲವು ದಿನಗಳಿಂದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ (Vicky Kaushal) ವಿವಾಹದ ವಿಚಾರ ಎಲ್ಲೆಡೆ ರ್ಚೆಯಾಗುತ್ತಿದೆ.  ಮೂಲಗಳ ಪ್ರಕಾರ, ಡಿಸೆಂಬರ್ 7 ರಿಂದ ವಿಕ್ಕಿ ಮತ್ತು ಕತ್ರಿನಾ ಮದುವೆಯ ವಿಧಿ ವಿಧಾನಗಳು ಪ್ರಾರಂಭವಾಗುತ್ತವೆ. ವಿಕ್ಕಿ ಮತ್ತು ಕತ್ರಿನಾ (Katrina Kaif WEdding) ಅವರ ವಿವಾಹ ಸಮಾರಂಭವು ಡಿಸೆಂಬರ್ 7 ರಿಂದ ಡಿಸೆಂಬರ್ 9 ರವರೆಗೆ ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಕೊರೋನಾದಿಂದ ಚೇತರಿಸಿಕೊಂಡ ನಟಿ ಉರ್ಮಿಳಾ ಮಾತೋಂಡ್ಕರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ..

Trending News