Salaar trailer 2 : ಸಿನಿ ಪ್ರೇಮಿಗಳು ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಚಲನಚಿತ್ರಗಳಲ್ಲಿ ʼಸಲಾರ್ʼ ಒಂದಾಗಿದೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್, ಪ್ಯಾನ್ ಇಂಡಿಯಾ ಸ್ಟಾರ್ ಹೀರೋ ರೆಬೆಲ್ ಸ್ಟಾರ್ ಪ್ರಭಾಸ್ ಕಾಂಬಿನೇಷನ್ ನಲ್ಲಿ ಬರುತ್ತಿರುವ ಈ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾ ಎರಡು ಭಾಗಗಳಲ್ಲಿ ಬರುತ್ತಿದೆ. ಇಂದು ಸಲಾರ್‌ ಎರಡನೇ ಟ್ರೇಲರ್‌ ರಿಲೀಸ್‌ ಆಗಿದ್ದು, ಮತ್ತಷ್ಟು ಕುತೂಹಲ ಹೆಚ್ಚಿಸಿದೆ.


COMMERCIAL BREAK
SCROLL TO CONTINUE READING

ಹೌದು.. ಸಲಾರ್‌ ಟ್ರೇಲರ್ ಹಾಗೂ ಫಸ್ಟ್ ಸಿಂಗಲ್ ಮೂಲಕ ಸೂಪರ್ ಕ್ರೇಜ್ ಗಿಟ್ಟಿಸಿಕೊಂಡಿರುವಾಗಲೇ ಚಿತ್ರತಂಡ ಮತ್ತೊಂದು ಸಖತ್ ಟ್ರೈಲರ್ ರಿಲೀಸ್ ಮಾಡಿ ಪ್ರಭಾಸ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಪ್ರಭಾಸ್ ಅಭಿಮಾನಿಗಳು ನಿನ್ನೆ ರಾತ್ರಿಯಿಂದ ಈ ಟ್ರೇಲರ್‌ಗಾಗಿ ಕಾಯುತ್ತಿದ್ದರು. ಹಲವು ಪೋಸ್ಟ್‌ಗಳ ನಂತರ ಇಂದು ಮಧ್ಯಾಹ್ನ ಸಲಾರ್‌ ಟ್ರೈಲರ್ ಬಿಡುಗಡೆಯಾಗಿದೆ.


ಇದನ್ನೂ ಓದಿ: 2023ರ ರಿಷಿಸ್‌ ʼಮಿಸಸ್ ಕರ್ನಾಟಕʼ ಕಿರೀಟ ಮುಡಿಗೇರಿಸಿಕೊಂಡ ಕವಿತಾ ವೀರೇಂದ್ರ..!


ಟ್ರೇಲರ್ ವಿಚಾರಕ್ಕೆ ಬಂದರೆ ಎರಡನೇ ಟ್ರೈಲರ್ ಅದ್ಧೂರಿ ಸಾಹಸ ದೃಶ್ಯಗಳಿಂದ ಕೂಡಿದೆ. ಸುಲ್ತಾನನ ಕಥೆ.. ಯಿಂದ ಪ್ರಾರಂಭವಾಗಿ, ಪ್ರಭಾಸ್ ಎಂಟ್ರಿ. ಪೃಥ್ವಿರಾಜ್‌ ಸುಕುಮಾರನ್‌ ಅಬ್ಬರ.. ಪ್ರಶಾಂತ್ ನೀಲ್ ಶೈಲಿಯ ಗನ್ ಬಳಕೆ, ರಾಜಕೀಯ ಆಟಗಳು.. ಅದ್ಧೂರಿ ಆಕ್ಷನ್ ಸೀಕ್ವೆನ್ಸ್.. ಕೊನೆಯಲ್ಲಿ, ಆತ್ಮೀಯ ಸ್ನೇಹಿತರು ಬದ್ಧ ವೈರಿಗಳಾಗುವ ಸುಳಿವನ್ನು ಪ್ರಶಾಂತ್‌ ನೀಲ್‌ ಬಿಚ್ಚಿಟ್ಟಿದ್ದಾರೆ. 


Dawood Ibrahim: ಬಾಲಿವುಡ್‌ ಖ್ಯಾತ ನಟಿಯ ಜೊತೆ ದಾವೂದ್ ಇಬ್ರಾಹಿಂ ಪ್ರೇಮ ಸಂಬಂಧ..!


ಈ ಚಿತ್ರದಲ್ಲಿ ಪ್ರಭಾಸ್ ಎದುರು ನಾಯಕಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದು, ಪೃಥ್ವಿರಾಜ್ ಸುಕುಮಾರನ್, ಬಾಬಿ ಸಿಂಹ, ತಿನ್ನು ಆನಂದ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ, ಜಗಪತಿ ಬಾಬು, ರಾಮಚಂದ್ರರಾಜು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಂಗದೂರ್ ನಿರ್ಮಿಸಿರುವ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.