2023ರ ರಿಷಿಸ್‌ ʼಮಿಸಸ್ ಕರ್ನಾಟಕʼ ಕಿರೀಟ ಮುಡಿಗೇರಿಸಿಕೊಂಡ ಕವಿತಾ ವೀರೇಂದ್ರ..!

Rishis mrs karnataka 2023 : ಕರ್ನಾಟಕದ ಅತಿದೊಡ್ಡ ಬ್ಯೂಟಿ ಪೇಜೆಂಟ್ ರಿಷಿಸ್ ಮಿಸಸ್ ಕರ್ನಾಟಕ ಕಿರೀಟವನ್ನು ಕವಿತಾ ವೀರೇಂದ್ರ ತಮ್ಮದಾಗಿಸಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಖ್ಯಾತ ಬಾಲಿವುಡ್ ನಟಿ ಮಧುಬಾಲ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.

Written by - YASHODHA POOJARI | Edited by - Krishna N K | Last Updated : Dec 18, 2023, 05:39 PM IST
  • ಕರ್ನಾಟಕದ ಅತಿದೊಡ್ಡ ಬ್ಯೂಟಿ ಪೇಜೆಂಟ್ ರಿಷಿಸ್ ಮಿಸಸ್ ಕರ್ನಾಟಕ.
  • ರಿಷಿಸ್ ಮಿಸಸ್ ಕರ್ನಾಟಕ ಕಿರೀಟವನ್ನು ಕವಿತಾ ವೀರೇಂದ್ರ ತಮ್ಮದಾಗಿಸಿಕೊಂಡಿದ್ದಾರೆ.
  • ಖ್ಯಾತ ಬಾಲಿವುಡ್ ನಟಿ ಮಧುಬಾಲ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.
2023ರ ರಿಷಿಸ್‌ ʼಮಿಸಸ್ ಕರ್ನಾಟಕʼ ಕಿರೀಟ ಮುಡಿಗೇರಿಸಿಕೊಂಡ ಕವಿತಾ ವೀರೇಂದ್ರ..! title=

Kavita Ravindra : ರಿಷಿ ಸ್ಪೀಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕರ್ನಾಟಕದ ಅತಿದೊಡ್ಡ ಬ್ಯೂಟಿ ಪೇಜೆಂಟ್ ರಿಷಿಸ್ ಮಿಸಸ್ ಕರ್ನಾಟಕ ಕಿರೀಟವನ್ನು ಕವಿತಾ ವೀರೇಂದ್ರ ತಮ್ಮದಾಗಿಸಿಕೊಂಡಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಆದ ಜೆ ಡಬ್ಲ್ಯೂ ಮ್ಯಾರಿಯೊಟ್ ನಡೆದ ಈ ಕಾರ್ಯಕ್ರಮಕ್ಕೆ ಖ್ಯಾತ ಬಾಲಿವುಡ್ ನಟಿ ಮಧುಬಾಲ ವಿಶೇಷ ಅತಿಥಿಯಾಗಿ ಆಗಮಿಸಿ ರೂಪದರ್ಶಿಗಳಿಗೆ ಪ್ರೋತ್ಸಾಹ ಕೊಟ್ಟರು.

ಈ ವೇಳೆ ಮಾತನಾಡಿದ ಮಧುಬಾಲ, ಈ ಕಾರ್ಯಕ್ರಮದಲ್ಲಿ ಭಾಗವಾಗಿರುವುದು ಖುಷಿ ಕೊಟ್ಟಿದೆ. ಇಂದು ಮಹಿಳೆಯರು ರಾಜಕೀಯ, ಸಾಹಿತ್ಯ, ಶಿಕ್ಷಣ ಮತ್ತು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ತಾಯಿಯಾಗಿ ಮಕ್ಕಳ ಲಾಲನೆ, ಪಾಲನೆ ಜೊತೆಯಲ್ಲಿ ತನ್ನ ಸೌಂದರ್ಯ ಮತ್ತು ಆರೋಗ್ಯದ ಮೇಲೆ ಗಮನಹರಿಸಬೇಕಿದೆ ಎಂದರು.

ಇದನ್ನೂ ಓದಿ:Deepika Das: ಲಂಡನ್ ಬೀದಿಯಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡ ನಾಗಿಣಿ ಬೆಡಗಿ!

ಸರ್ಕಾರದ ರಾಜಕೀಯ ದಿಗ್ಗಜರು, ಸಾಮಾಜಿಕ ಕಾರ್ಯಕರ್ತರು, ಉದ್ಯಮಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕವಿತಾ ವೀರೇಂದ್ರ ವಿನ್ನರ್ ಆಗಿ ಹೊರಹೊಮ್ಮಿದ್ರೆ, ಪ್ರಿಯಾಂಕ ರಿಯಾ ಫಸ್ಟ್ ವಿನ್ನರ್ ಆಗಿ ಹಾಗೂ ಶಹಿಸ್ತಾ ನಾಜ್ ಸೆಕೆಂಡ್ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರು. ರಿಷಿ ಸ್ಪೀಕ್ ಚಾರಿಟೇಬಲ್ ಟ್ರಸ್ಟ್ ನಿಂದ ಆಯೋಜಿಸಲಾಗಿದ್ದ ಈ ಬ್ಯೂಟಿ ಪೇಜೆಂಟ್ ನಲ್ಲಿ ಪಲ್ಲವಿ ಗೌಡ, ಚೈತ್ರಾ ಗೌಡ, ಆರ್ ಜೆ ರಾಜೇಶ್, ಮನೋಜ್ ಕುಮಾರ್ ಹಾಗೂ ಪ್ರಿಯಾ ಗೌತಮ್ ಡೈರೆಕ್ಟರ್ಸ್ ಆಗಿದ್ದಾರೆ. 

ಇದೇ ವೇಳೆ ಮಾತನಾಡಿದ ಆರ್.ಜೆ.ರಾಜೇಶ್, 2022ರ ಮಿಸಸ್ ಕರ್ನಾಟಕ ರನ್ನರ್ ಅಪ್ ಚೈತ್ರಾ ಗೌಡ ಅವರ ಕನಸಿಗೆ ಪಲ್ಲವಿ ಗೌಡ ಅವರು ಬಣ್ಣ ಹಚ್ಚಿದರು. ಈ ಸಣ್ಣ ಪ್ರಯತ್ನಕ್ಕೆ ನಟ ಮನೋಜ್ ಕುಮಾರ್, ವಾಣಿಜ್ಯ ಉದ್ಯಮಿ ಪ್ರಿಯಾ ಮತ್ತು ಆರ್.ಜೆ.ರಾಜೇಶ್ ಕೈ ಜೋಡಿಸಿದ್ದಾರೆ. ಎಲ್ಲರೂ ಕನಸು ಕಾಣಬಹುದು. ಆ ಕನಸು ನನಸು ಮಾಡಿಕೊಳ್ಳಲು ಪ್ರಯತ್ನಪಡಬೇಕು. ಇಷ್ಟು ದೊಡ್ಡ ಇವೆಂಟ್ ಮಾಡಲು ಸಾಧ್ಯವಾಗಿದ್ದು, ಪ್ರಯೋಜಕರಿಂದ ಅವರೆಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.

ಇದನ್ನೂ ಓದಿ:Dawood Ibrahim: ಬಾಲಿವುಡ್‌ ಖ್ಯಾತ ನಟಿಯ ಜೊತೆ ದಾವೂದ್ ಇಬ್ರಾಹಿಂ ಪ್ರೇಮ ಸಂಬಂಧ..!

ಈ ಬ್ಯೂಟಿ ಪೇಜೆಂಟ್ ನಲ್ಲಿ ರೂಪದರ್ಶಿಯರು ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ನೋಡುಗರ ಗಮನಸೆಳೆದರು. ಅಂದಹಾಗೇ ಗ್ರಾಮೀಣ ಭಾಗದ ಬಡ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News