Prabhas Project K movie : ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್-ನಾಗ್ ಅಶ್ವಿನ್ ಕಾಂಬಿನೇಷನ್ ಬಿಗ್ ಬಜೆಟ್ ಚಿತ್ರ ಪ್ರಾಜೆಕ್ಟ್-ಕೆ. ಈ ಪ್ರತಿಷ್ಠಿತ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಮುಂತಾದ ತಾರೆಯರು ನಟಿಸುತ್ತಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಸಿ. ಅಶ್ವಿನಿ ದತ್ ಸುಮಾರು ರೂ. 500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.


COMMERCIAL BREAK
SCROLL TO CONTINUE READING

ಕಮಲ್ ಹಾಸನ್ ಈ ಸಿನಿಮಾದ ಭಾಗವಾಗಿರುವುದರಿಂದ ನಿರೀಕ್ಷೆ ಹೆಚ್ಚಿದೆ. ಮೇಲಾಗಿ ಕಮಲ್ ಇದರಲ್ಲಿ ವಿಲನ್ ಪಾತ್ರ ಮಾಡಲಿದ್ದಾರೆ ಎಂಬ ಊಹಾಪೋಹಗಳು ಪ್ರೇಕ್ಷಕರನ್ನು ಹುರಿದುಂಬಿಸುತ್ತಿವೆ. ಪ್ರಭಾಸ್ ಮತ್ತು ಕಮಲ್ ಅವರನ್ನು ಒಂದೇ ಸ್ಕ್ರೀನ್‌ ಮೇಲೆ ನೋಡಲು ಡಾರ್ಲಿಂಗ್‌ ಮತ್ತು ಉಳಗನಾಯಕನ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.


ಇದನ್ನೂ ಓದಿ: Yash: ಮಲೇಷ್ಯಾದಲ್ಲಿ ರಾಕಿಭಾಯ್‌ ʼಯಶ್‌ʼಗಾಗಿ ಮುಗಿಬಿದ್ದ ಫ್ಯಾನ್ಸ್‌ ; ಇಲ್ಲಿವೆ ನೋಡಿ ಪೋಟೊಸ್‌


ಇದೀಗ ಈ ಸಿನಿಮಾದ ಕಥಾವಸ್ತುವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಚರ್ಚೆ ನಡೆಯುತ್ತಿದೆ. ಇದು ಮುಖ್ಯವಾಗಿ ವೈಜ್ಞಾನಿಕ ಕಥೆಯಾಗಿದ್ದರೂ, ತಯಾರಕರು ಇದಕ್ಕೆ ಫ್ಯಾಂಟಸಿ ಸ್ಪರ್ಶವನ್ನು ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಡುಕಿನ ಮೇಲೆ ಒಳಿತಿನ ಗೆಲುವಿನ ಸಾರ್ವತ್ರಿಕ ಬಿಂದುವನ್ನು ಈ ಚಿತ್ರ ಆಧರಿಸಿದೆಯಂತೆ. ವೈಜ್ಞಾನಿಕ ಕಾದಂಬರಿ ಮತ್ತು ಭಾರತೀಯ ಪುರಾಣಗಳನ್ನು ಬೆರೆಸಿರುವುದು ಈ ಸಿನಿಮಾದ ಹೈಲೈಟ್ ಆಗಿದೆ ಎಂದು ವರದಿಯಾಗಿದೆ.


ಈ ಸಿನಿಮಾದಲ್ಲಿ ಅಮಿತಾಬ್, ಪ್ರಭಾಸ್, ಕಮಲ್ ವಿಜ್ಞಾನಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರಾಜೆಕ್ಟ್‌ ಕೆನಲ್ಲಿ ಪ್ರಭಾಸ್ ವಿಷ್ಣು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮತ್ತೊಂದು ಮಾತು ಕೇಳಿಬರುತ್ತಿದೆ. ಈ ಕಥೆಯನ್ನು ಪುರಾಣಗಳೊಂದಿಗೆ ಜೋಡಿಸುವ ಅನುಕ್ರಮದಲ್ಲಿ ಕಾಣಿಸಿಕೊಳ್ಳುವ ವಿಷ್ಣುವಿನ ಅವತಾರದಲ್ಲಿ ರೆಬೆಲ್‌ ಸ್ಟಾರ್‌ ನಟಿಸಲಿದ್ದಾರೆ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ಅನಾವರಣವಾಯಿತು "ದೇವರ ಕನಸು" ಚಿತ್ರದ ಟ್ರೇಲರ್


ಅದ್ಧೂರಿ ಬಜೆಟ್ ಮತ್ತು ತಾರಾಬಳಗದಲ್ಲಿ ತಯಾರಾಗುತ್ತಿರುವ ಈ ಚಿತ್ರ ಈಗ ಪ್ಯಾನ್ ಇಂಡಿಯಾದಲ್ಲಿ ಬಹುನಿರೀಕ್ಷಿತ ಚಿತ್ರವಾಗಿದೆ. ಇನ್ನೊಂದೆಡೆ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರ ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.