Appu Devara male : ಕರ್ನಾಟಕ ರತ್ನ ಪುನೀತ್‌ ರಾಜಕುಮಾರ್‌ ಅವರಿಗೆ ಅಪಾರ ಅಭಿಮಾನಿ ಬಳಗ ಇದೆ. ಅಪ್ಪು ಸಮಾಜಮುಖಿ ಕೆಲಸಗಳಿಗೆ ಫಿದಾ ಆಗಿರುವ ಅವರ ಅಭಿಮಾನಿಗಳು ಅವರನ್ನು ದೇವರಂತೆ ಕಾಣುತ್ತಿದ್ದಾರೆ. ಇದೀಗ ʼವೀರ ಕನ್ನಡಿಗನʼ ಅಭಿಮಾನಿಗಳು ʼಅಪ್ಪು ದೇವರ ವೃತʼವನ್ನು ಆಚರಿಸಲು ಮುಂದಾಗಿದ್ದು, ಅಯ್ಯಪ್ಪ ಸ್ವಾಮಿ ಮಾಲೆಯಂತೆ ಅಪ್ಪು ಮಾಲೆಯನ್ನು ಧಾರಣೆ ಮಾಡಲಿದ್ದಾರೆ. ಈ ಕುರಿತು ಪೋಸ್ಟರ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.


COMMERCIAL BREAK
SCROLL TO CONTINUE READING

ಪುನೀತ್‌ ರಾಜಕುಮಾರ್‌ ಅವರನ್ನು ಸಾಕ್ಷಾತ್ ದೇವರಂತೆ ಕಾಣುತ್ತಿರುವ ವಿಜಯನಗರದ ಪುನೀತ್ ರಾಜ್​ಕುಮಾರ್ ಅಭಿಮಾನಿಗಳು ಅಪ್ಪು ದೇವರ ಮಾಲೆ ವ್ರತಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ಈ ಕುರಿತು ಕೆಲವು ಬಿತ್ತಿಪತ್ರಗಳನ್ನು ಸಹ ಹಂಚಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಪೋಸ್ಟರ್‌ ಸಖತ್‌ ವೈರಲ್‌ ಆಗುತ್ತಿದೆ. ಅಲ್ಲದೆ, ಕೆಲವರು ಉತ್ತಮ ಕೆಲಸ ಅಂತ ಹೇಳಿದ್ರೆ ಇನ್ನು ಕೆಲವರು ಕೆಟ್ಟದಾಗಿ ಟ್ರೋಲ್‌ ಮಾಡುತ್ತಿದ್ದಾರೆ.


ಇದನ್ನೂ ಓದಿ: ಮತ್ತೆ ರಾಜಕೀಯಕ್ಕೆ ಧುಮುಕಿದ ಹಿರಿಯ ನಟ ಅನಂತ್‌ನಾಗ್


ಅಪ್ಪು ಅಭಿಮಾನಿಗಳು ಮಾರ್ಚ್ 1 ರಿಂದ ಅಪ್ಪು ಮಾಲಾಧಾರಣೆ ಮಾಡಲಿದ್ದಾರೆ. ವಿಜಯನಗರದ ಹೊಸಪೇಟೆ ನಗರದ ಅಪ್ಪು ಪುತ್ಥಳಿ ಬಳಿ ಮಾಲೆ ಧರಿಸಲಿದ್ದಾರೆ. ನಂತರ ಮಾರ್ಚ್ 18 ಕ್ಕೆ ಅಪ್ಪು ಸಮಾಧಿಯ ದರ್ಶನ ಪಡೆದು ಹಂಪಿಯ ತುಂಗಭದ್ರಾನದಿಯಲ್ಲಿ ಮಾಲೆ ವಿಸರ್ಜನೆ ಮಾಡಲಿದ್ದಾರೆ. ಅಲ್ಲದೆ, ಈ ಅಪ್ಪು ವೃತವನ್ನು ಹೇಗೆ ಆಚರಿಸಬೇಕು, ಯಾವ ರೀತಿಯಲ್ಲಿ ನಿಮಗಳಿರುತ್ತವೆ ಎಂಬುವುದಾಗಿ ಮಾಹಿತಿ ನೀಡಲಾಗಿದೆ.


ಅಪ್ಪು ಮಾಲೆ ಧರಿಸಿರುವವರು ಅಯ್ಯಪ್ಪ ಸ್ವಾಮಿ ಮಾಲೆಯಂತೆ ಅಪ್ಪು ಡಾಲರ್ ಇರುವ ಮಾಲೆಯನ್ನು ಧರಿಸಬೇಕು. ಕೇಸರಿ ಶಾಲು, ಕೇಸರಿ ಪಂಚೆ, ಕೇಸರಿ ಶರ್ಟ್ ತೊಟ್ಟು ಅಪ್ಪು ದೇವರ ಫೋಟೋ ಪೂಜಿಸಬೇಕು. ಸೂರ್ಯ ಹುಟ್ಟುವ ಮೊದಲು ಸ್ನಾನ, ಸಂಜೆ ಮತ್ತೊಮ್ಮೆ ಸ್ನಾನ ಮಾಡಬೇಕು. ಬೆಳಗ್ಗೆ ಉಪರಾಹ ಸೇವಿಸಿ, ಮಧ್ಯಾಹ್ನ ಊಟ ಹಾಗೂ ರಾತ್ರಿ ಟಿಫಿನ್ ತಿನ್ನಬಹುದು ಎಂದು ಬಿತ್ತಿಪತ್ರದಲ್ಲಿ ಮಾಹಿತಿ ನೀಡಲಾಗಿದೆ.


ಇದನ್ನೂ ಓದಿ: ಹೆಸರು ಮಾತ್ರಾ ಜ್ಯೂಲಿಯೆಟ್‌ ಆದ್ರೆ ಚಿತ್ರದಲ್ಲಿ ಜೂಲಿಯಟ್‌ ಇಲ್ಲ ರೋಮಿಯೋನು ಇಲ್ಲ..!


ಅಲ್ಲದೆ, ಮಾಲೆ ಧರಿಸುವವರು ಯಾವುದೇ ಯಾವ ಕೆಟ್ಟ ಚಟಗಳಿಗೆ ಕೈ ಹಾಕಬಾರದು. 5 ದಿನ, 11 ದಿನ ಅಥವಾ 1 ದಿನ ಮಾಲೆ ಹಾಕಬಹುದು. ಅಪ್ಪು ಪುಣ್ಯಭೂಮಿಗೆ ಹೋಗುವಾಗ ಇರುಮುಡಿ ಹೊತ್ತು ಹೋಗಬೇಕು. ಇರುಮುಡಿಯಲ್ಲಿ ಅಕ್ಕಿ, ಬೇಳೆ, ಎಣ್ಣೆ ಮುಂತಾದ ದಿನಸಿ ತೆಗೆದುಕೊಂಡು ಹೋಗತಕ್ಕದ್ದು. ಮಾಲಾಧಾರಿಗಳು ಅಪ್ಪು ದೇವರ ಪುಣ್ಯಭೂಮಿ ದರ್ಶನ ಪಡೆದು ವಾಪಸ್ ಬಂದ ನಂತರ ಹಂಪಿಯ ಪುಣ್ಯ ನದಿಯಲ್ಲಿ ಮಿಂದೆದ್ದು, ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ಪೂಜೆ ಸಲ್ಲಿಸಿ ಮಾಲೆ ವಿಸರ್ಜನೆಯನ್ನು ಮಾಡತಕ್ಕದ್ದು ಎಂದು ತಿಳಿಸಲಾಗಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.