Darshan Thoogudeepa : ತಮ್ಮ ನೇರ ಮಾತುಗಳಿಂದ ಕೆಲವೊಮ್ಮೆ ಟ್ರೋಲ್ ಕೂಡ ಆಗಿದ್ದಾರೆ. ಆದರೆ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಇರೋದೇ ಹೀಗೆ ಎನ್ನುವ ಜಾಯಮಾನ ಅವರದ್ದು. ಆನೆ ನಡೆದದ್ದೇ ದಾರಿ ಎನ್ನುತ್ತಾರಲ್ಲ ಹಾಗೆ. ಸಹಾಯ ಮಾಡುವ ಗುಣ ಸಹಾಯ ಮಾಡುವುದರಲ್ಲೂ ದರ್ಶನ್ ಸದಾ ಮುಂದೆ ನಿಲ್ಲುತ್ತಾರೆ. ಬಲಗೈಯಲ್ಲಿ ಮಾಡಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುವುದು ದರ್ಶನ್ ಪಾಲಿಸಿ. ಸ್ಯಾಂಡಲ್‌ವುಡ್ 'ಒಡೆಯ'ನಿಂದ ಸಾಕಷ್ಟು ಜನ ಸಹಾಯ ಪಡೆದುಕೊಂಡಿದ್ದಾರೆ. ಇನ್ನು ಚಿತ್ರರಂಗದಲ್ಲೂ ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ ದರ್ಶನ್ ಅವರಲ್ಲಿದೆ. ಹೊಸ ಕಲಾವಿದರ ಬೆಂಬಲಕ್ಕೆ ಸದಾ ನಿಲ್ಲುತ್ತಾರೆ. ಸಾಂಗ್, ಟೀಸರ್ ಲಾಂಚ್ ಎಲ್ಲದಕ್ಕೂ ಹೋಗಿ ಚಿತ್ರವನ್ನು ಗೆಲ್ಲುಸುವಂತೆ ಮನವಿ ಮಾಡುತ್ತಾರೆ.
ದರ್ಶನ್ ಪ್ರಾಣಿ ಪಕ್ಷಿ ಪ್ರೀತಿ ಭಾರತೀಯ ಚಿತ್ರರಂಗದಲ್ಲೇ ನಟ ದರ್ಶನ್ ಎಲ್ಲಾ ಸ್ಟಾರ್ ಕಲಾವಿದರಿಗಿಂತ ಪ್ರತ್ಯೇಕವಾಗಿ ನಿಲ್ಲುವುದು ತಮ್ಮ ಪ್ರಾಣಿ ಪಕ್ಷಿ ಪ್ರೀತಿಯಿಂದ. ದರ್ಶನ್‌ಗೆ ಬಾಲ್ಯದಿಂದಲೂ ಪ್ರಾಣಿ ಪಕ್ಷಿ ಅಂದರೆ ಅಚ್ಚುಮೆಚ್ಚು. ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ಸಾಕುತ್ತಿದ್ದಾರೆ. ಮೈಸೂರು ಮೃಗಾಲಯದಲ್ಲೂ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುತ್ತಾರೆ. ಬರೀ ತಾವು ಮಾತ್ರ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವುದಲ್ಲ. ತಮ್ಮ ಆಪ್ತರಿಗೂ, ಅಭಿಮಾನಿಗಳಿಗೂ ಸಲಹೆ ನೀಡುತ್ತಾರೆ. ಅರಣ್ಯ ಇಲಾಖೆಯ ರಾಯಭಾರಿ ಕೂಡ ಆಗಿರುವ ದರ್ಶನ್‌ಗೆ ವೈಲ್ಡ್‌ಲೈಫ್ ಫೋಟೊಗ್ರಫಿ ಆಸಕ್ತಿಯೂ ಇದೆ. ತಮ್ಮ ಫೋಟೊಗ್ರಫಿಯಿಂದ ಬರುವ ಹಣವನ್ನು ಅರಣ್ಯ ಇಲಾಖೆಗೆ ನೀಡುತ್ತಾರೆ
ಇದನ್ನೂ ಓದಿ-13 ವರ್ಷಕ್ಕೆ ಸೂಪರ್ ಸ್ಟಾರ್’ಗೆ ತಾಯಿಯಾದ ಬಾಲಿವುಡ್ ನಟಿ ಶ್ರೀದೇವಿ! ಜೀವನವನ್ನೇ ಬದಲಾಯಿಸಿತು ಆ ಒಂದು ಘಟನೆ!
ಅಭಿಮಾನಿಗಳ ಮೇಲಿನ ಪ್ರೀತಿ ಖಳ ನಟ ತೂಗುದೀಪ ಶ್ರೀನಿವಾಸ್ ಮಗನಾದರೂ ಬಹಳ ಕಷ್ಟಪಟ್ಟು ದರ್ಶನ್ ಚಿತ್ರರಂಗದಲ್ಲಿ ನೆಲೆ ನಿಂತರು. ಕ್ಯಾಮರಾ ಅಸಿಸ್ಟೆಂಟ್ ಕೆಲಸ ಆರಂಭಿಸಿದರವು ಇಂದು ಬಾಕ್ಸಾಫೀಸ್ ಸುಲ್ತಾನ್ ಆಗಿ ಮೆರೆಯುತ್ತಿದ್ದಾರೆ. ದರ್ಶನ್ ಸಾಧನೆಯೇ ಸಾಕಷ್ಟು ಅಭಿಮಾನಿಗಳಿಗೆ ಸ್ಫೂರ್ತಿಯಾಗಿದೆ. ಬರೀ ಅಭಿಮಾನಿಗಳು ದರ್ಶನ್ ಅಂದ್ರೆ ಜೀವ ಬಿಡಲ್ಲ. ದರ್ಶನ್ ಕೂಡ ಅಭಿಮಾನಿಗಳು ಅಂದ್ರೆ ಜೀವ ಬಿಡ್ತಾರೆ. ತಮ್ಮ ಅಭಿಮಾನಿಗಳನ್ನು ಸೆಲೆಬ್ರೆಟೀಸ್ ಎಂದು ಕರೆಯುತ್ತಾರೆ. ಇತ್ತೀಚೆಗೆ 'ನನ್ನ ಪ್ರೀತಿಯ ಸೆಲೆಬ್ರೆಟೀಸ್ ' ಎಂದು ಎದೆ ಮೇಲೆ ಟ್ಯಾಟೂ ಹಾಕಿಸಿಕೊಂಡು ನೀವು ನನ್ನ ಎದೆಯಲ್ಲಿದ್ದೀರಾ ಎಂದು ದರ್ಶನ್ ಸಾರಿ ಹೇಳಿದ್ದರು. ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳನ್ನು ಬಹಳ ಅಕ್ಕರೆಯಿಂದ ಕಾಣುತ್ತಾರೆ. ಈ ಎಲ್ಲಾ ಕಾರಣಗಳಿಂದ ದರ್ಶನ್‌ಗೆ ದೊಡ್ಡ ಅಭಿಮಾನಿಗಳ ಬಳಗ ಇದೆ.
ಇದನ್ನೂ ಓದಿ-ಫೆ.26ರಂದು ‘ಕಬ್ಜ’ ಕಮರ್ಷಿಯಲ್ ಸಾಂಗ್ ರಿಲೀಸ್: ಅದ್ಧೂರಿ ಸಮಾರಂಭಕ್ಕೆ ಲಕ್ಷಕ್ಕೂ ಅಧಿಕ ಜನ ಭಾಗಿ ಸಾಧ್ಯತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.