ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ನಮ್ಮೆಲ್ಲರ ಪ್ರೀತಿಯ ಅಪ್ಪು ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ.


COMMERCIAL BREAK
SCROLL TO CONTINUE READING

ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದ ಪುನೀತ್ಅ ರಾಜಕುಮಾರ್ ಅವರು ಯಾವಾಗಲೂ ಹೊಸತನಕ್ಕೆ ತಮ್ಮನ್ನು ತೆರೆದುಕೊಳ್ಳುತ್ತಿದ್ದರು.ಇದರ ಫಲವಾಗಿ ಅವರು ತಮ್ಮದೇ ಪ್ರೊಡಕ್ಷನ್ ಹೌಸ್ ಮೂಲಕ ಕನ್ನಡದ ಚಿತ್ರಗಳು ಒಟಿಟಿ ವೇದಿಕೆಯಲ್ಲಿ ಕಾಣಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.


ಇದನ್ನೂ ಓದಿ: Puneeth Rajkumar No More: ‘ಚಂದನವನ’ದಿಂದ ಮರೆಯಾದ 'ದೊಡ್ಮನೆ ಹುಡ್ಗ'


2020 ರಲ್ಲಿ ಲಾಕ್‌ಡೌನ್ ಸಮಯದಲ್ಲಿ OTT ಯಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಪೀಳಿಗೆಗೆ ವೇದಿಕೆಯನ್ನು ನಿರ್ಮಿಸಿದರು, ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಸಿನೆಮಾ ಹಾಲ್‌ ಗಳು ಮುಚ್ಚಿದಾಗ, ಅವರು OTT ಯತ್ತ ಮುಖ ಮಾಡಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಯಶಸ್ಸನ್ನು ಗಳಿಸಿದರು.


ಇದನ್ನೂ ಓದಿ: Puneeth Rajkumar: ಅತಿಯಾದ ‘ವರ್ಕೌಟ್’ ಅಪ್ಪು ಜೀವಕ್ಕೆ ಮಾರಕವಾಯ್ತಾ..?


ಲಾಕ್‌ಡೌನ್ ಸಮಯದಲ್ಲಿ, ಅವರ PRK ಪ್ರೊಡಕ್ಷನ್ಸ್  ಮೂಲಕ ಕವಲುದಾರಿ ಮತ್ತು ಫ್ರೆಂಚ್ ಬಿರ್ಯಾನಿ ಚಿತ್ರಗಳನ್ನು ಇಂತಹ ಹೊಸ ಮಾದರಿಯ ವೇದಿಕೆಗಳಲ್ಲಿ ನಿರ್ಮಿಸುವ ಮೂಲಕ OTT ಸಂಸ್ಕೃತಿ ಕನ್ನಡದಲ್ಲಿಯೂ ಪಸರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು


ಪುನೀತ್ ರಾಜಕುಮಾರ್ (Puneeth Rajkumar) ಮತ್ತು ಅವರ ಪತ್ನಿ ಅಶ್ವಿನಿ ಅವರು ಪ್ರತಿ ಸ್ಕ್ರಿಪ್ಟ್‌ಗಳನ್ನು ವೈಯಕ್ತಿಕವಾಗಿ ನಿರ್ವಹಿಸುವ ಮೂಲಕ ತಮ್ಮ ಪ್ರೊಡಕ್ಷನ್ ಹೌಸ್ ಮೂಲಕ ಹೊಸಬರು ಚಿತ್ರರಂಗಕ್ಕೆ ಬರಲು ಪ್ರೋತ್ಸಾಹವನ್ನು ಕಲ್ಪಿಸಿದರು.ಅವರದ್ದೇ ನಟನೆಯ ಚಿತ್ರ ಯುವರತ್ನ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗಿ ಸಾಕಷ್ಟು ಹಿಟ್ ಆಗಿತ್ತು.


ಇದನ್ನೂ ಓದಿ: RIP Puneeth Rajkumar: ಕನ್ನಡಕ್ಕೊಬ್ಬನೇ ಪ್ರೀತಿಯ ಅಪ್ಪು


ಈ ಹಿಂದೊಮ್ಮೆ ಒಟಿಟಿ ವೇದಿಕೆಗಳ ಕುರಿತಾಗಿ ಮಾಧ್ಯಮದ ಸಂದರ್ಶನದಲ್ಲಿ ಮಾತನಾಡುತ್ತಾ, 'ಸಾಕಷ್ಟು ಹೊಸ ತಂತ್ರಜ್ಞಾನಗಳು ಹೊರಬರುತ್ತಿವೆ ಮತ್ತು ಹಲವು OTT ಪ್ಲಾಟ್‌ಫಾರ್ಮ್‌ಗಳು ಇವೆ.ನಾನು ನಟನಾಗಿರುವುದರಿಂದ ಡಿಜಿಟಲ್ ಸಿನಿಮಾದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದು ಭಾವಿಸುತ್ತೇನೆ.ಲಾಕ್‌ಡೌನ್ ಜಾರಿಯಲ್ಲಿರುವವರೆಗೆ, ನಾವು ಯಾವಾಗ ಚಿತ್ರೀಕರಣಕ್ಕೆ ಹೋಗುತ್ತೇವೆ ಎಂದು ನನಗೆ ತಿಳಿದಿಲ್ಲ.ನಾವು ಮನೆಯಲ್ಲಿ ಕುಳಿತು ಸ್ಕ್ರಿಪ್ಟ್‌ಗಳು ಮತ್ತು ಪುಸ್ತಕಗಳನ್ನು ಓದಲು ಪ್ರಯತ್ನಿಸುತ್ತಿದ್ದೇವೆ"ಎಂದು ಹೇಳಿದ್ದರು.


ಪುನೀತ್ ರಾಜಕುಮಾರ್ ಅವರು ಕೇವಲ ನಟ, ಗಾಯಕರಲ್ಲದೆ ತಮ್ಮ ಸರಳ ವ್ಯಕ್ತಿತ್ವದಿಂದಲೇ ದಕ್ಷಿಣ ಭಾರತದಲ್ಲಿ ಎಲ್ಲರ ಪ್ರೀತಿ ಅಪ್ಪು ಎಂದೇ ಅವರು ಪ್ರೀತಿ ಪಾತ್ರರಾಗಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ