Alia Bhatt-Ranabir Kapoor Marriage Update:ಬರುವ ಡಿಸೆಂಬರ್ ನಲ್ಲಿ ವಿವಾಹವಂತೆ! ಮುಹೂರ್ತ-ವಿವಾಹ ಸ್ಥಳ ಕೂಡ ಫಿಕ್ಸ್ ಅಂತೆ!
Ranabir-Alia Wedding - ಖ್ಯಾತ ಬಾಲಿವುಡ್ (Bollywood) ನಟಿ ಅಲಿಯಾ ಭಟ್ (Alia Bhatt) ಹಾಗೂ ರಣಬೀರ್ ಕಪೂರ್ (Ranabir Kapoor) ಮದುವೆಯ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ವರದಿಯಾಗಿದೆ. ಹೀಗಾಗಿ ಶೀಘ್ರದಲ್ಲಿಯೇ ಅಲಿಯಾ-ರಣಬೀರ್ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ ಎನ್ನಲಾಗಿದೆ.
ನವದೆಹಲಿ: Ranabir-Alia Wedding - ಬಾಲಿವುಡ್ ನಟರಾದ ರಣಬೀರ್ ಕಪೂರ್ (Ranabir Kapoor Wedding) ಮತ್ತು ಆಲಿಯಾ ಭಟ್ (Alia Bhatt Wedding) ಅವರ ಪ್ರೇಮಕಥೆ ಕಳೆದ ಹಲವಾರು ವರ್ಷಗಳಿಂದ ನಿರಂತರ ಚರ್ಚೆಯಲ್ಲಿದೆ. ಇಬ್ಬರೂ ಬಹಿರಂಗವಾಗಿ ತಮ್ಮ ಪ್ರೀತಿಯನ್ನು ಸಹ ವ್ಯಕ್ತಪಡಿಸಿದ್ದಾರೆ ಮತ್ತು ಶೀಘ್ರದಲ್ಲೇ ಈ ಜೋಡಿಯು 'ಬ್ರಹ್ಮಾಸ್ತ್ರ' (Bramhastra) ಚಿತ್ರದಲ್ಲಿ ಮೊದಲ ಬಾರಿಗೆ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದೆ. ಅಷ್ಟೇ ಅಲ್ಲ ಇಬ್ಬರ ಮದುವೆ ಬಗ್ಗೆಯೂ ನಿರಂತರ ಸುದ್ದಿಗಳು ಹರಿದಾಡುತ್ತಿವೆ.
ಡಿಸೆಂಬರ್ ನಲ್ಲಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ ಅಲಿಯಾ-ರಣಬೀರ್!
ಇತ್ತೀಚಿನ ತಾಜಾ ವರದಿಯ ಪ್ರಕಾರ, ಇಬ್ಬರ ಮದುವೆಯ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಮತ್ತು ಶೀಘ್ರದಲ್ಲೇ ರಣಬೀರ್-ಆಲಿಯಾ (Ranbir Kapoor and Alia Bhatt) ಮದುವೆಯ ಬಂಧನಕ್ಕೆ ಒಳಗಾಗಲಿದ್ದಾರೆ ಎನ್ನಲಾಗಿದೆ. ಮಾಹಿತಿ ಪ್ರಕಾರ, ಈ ವರ್ಷದ ಡಿಸೆಂಬರ್‌ನಲ್ಲಿ ಇಬ್ಬರೂ ಸಪ್ತಪದಿ ತುಳಿಯುವ ಮೂಲಕ ಪರಸ್ಪರ ಒಂದಾಗಲಿದ್ದಾರೆ ಎನ್ನಲಾಗಿದೆ. ಇಬ್ಬರ ಮದುವೆಯಲ್ಲಿ ಅವರ ಕುಟುಂಬ ಸದಸ್ಯರು ಮತ್ತು ಕೆಲವು ಆಪ್ತರು ಭಾಗವಹಿಸಿದ್ದಾರೆ ಎಂಬ ವರದಿಗಳಿವೆ. ಆದರೆ, ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಅಲಿಯಾ ತಾಯಿ ಹೇಳಿದ್ದೇನು?
ನಮ್ಮ ಪಾಲುದಾರ ವೆಬ್‌ಸೈಟ್ ಬಾಲಿವುಡ್ ಲೈಫ್‌ನ ವರದಿಯ ಪ್ರಕಾರ, ಆಲಿಯಾ ಭಟ್ ಅವರ ತಾಯಿ ಸೋನಿ ರಾಜ್ದಾನ್ (Soni Razdan) ಅವರನ್ನು ಈ ಕುರಿತು ಪ್ರಶ್ನಿಸಲಾಗಿ, ಅವರು ಈ ಬಗ್ಗೆ ಬಹಿರಂಗವಾಗಿ ಉತ್ತರಿಸಿದ್ದಾರೆ. ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಯ ಬಗ್ಗೆ ಸೋನಿ ರಜ್ದಾನ್ ಹೇಳಿದ ಪ್ರಕಾರ, 'ಇದು ಯಾವಾಗ ಸಂಭವಿಸುತ್ತದೆ ಎಂದು ನನಗೂ ತಿಳಿದಿಲ್ಲ. ನಾನು ಕೂಡ ಇದಕ್ಕಾಗಿ ಕಾಯುತ್ತಿದ್ದೇನೆ' ಎಂದಿದ್ದಾರೆ.
ಇದನ್ನೂ ಓದಿ-Mumbai Drugs Case: ಇಂದೂ ಕೂಡ ಆರ್ಯನ್ ಖಾನ್ ಗೆ ಸಿಗಲಿಲ್ಲ ಜಾಮೀನು, ವಿಚಾರಣೆ ನಾಳೆಗೆ ಮುಂದುಡಿದ ಬಾಂಬೆ ಹೈ ಕೋರ್ಟ್
ಯಾವಾಗ ಅಲಿಯಾ-ರಣಬೀರ್ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ?
ಈ ಕುರಿತು ಮಾತನಾಡಿರುವ ಸೋನಿ ರಾಜ್ದಾನ್, ಅದಕ್ಕೆ ಇನ್ನೂ ಸಾಕಷ್ಟು ಸಮಯವಿದೆ. ಇದು ಭವಿಷ್ಯದಲ್ಲಿ ಒಂದಿಲ್ಲ ಒಂದು ದಿನ ಸಂಭವಿಸಲಿದೆ ಮತ್ತು ಇದು ಸಂಭವಿಸಲು ಇನ್ನೂ ಸಮಯ ಉಳಿದಿದೆ. ಈಗ ಇದು ಯಾವಾಗ ಸಂಭವಿಸುತ್ತದೆ? ಇದು ನನಗೂ ಗೊತ್ತಿಲ್ಲ. ಇದರ ಬಗ್ಗೆ ತಿಳಿದುಕೊಳ್ಳಲು ನೀವು ಆಲಿಯಾ ಅವರ ಏಜೆಂಟ್‌ಗೆ ಕರೆ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ಆದರೆ ಅವರ ಏಜೆಂಟರಿಗೆ ಇದರ ಬಗ್ಗೆ ಏನೂ ತಿಳಿದಿರುವುದಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಉತ್ತರಿಸಿದ್ದಾರೆ.
ಇದನ್ನೂ ಓದಿ-Sameer Wankhede ಮದುವೆ ಮಾಡಿಸಿದ ಮೌಲಾನಾ ಗಂಭೀರ ಹೇಳಿಕೆ, 15 ವರ್ಷಗಳ ಹಿಂದೆ ನಡೆದಿದ್ದೇನು?
ಒಂದೆಡೆ ಮಾಧ್ಯಮ ವರದಿಗಳು ರಣಬೀರ್-ಆಲಿಯಾ ಮದುವೆಯ (Ranabir Alia Wedding) ಬಗ್ಗೆ ಸಾಕಷ್ಟು ವಿಶ್ವಾಸ ವ್ಯಕ್ತಪಡಿಸುತ್ತಿದ್ದರೂ ಕೂಡ ಉಭಯ ನಟರ ಮ್ಯಾನೇಜರ್ ಮತ್ತು ಅವರ ತಾಯಿ ಅಂತಹ ವರದಿಗಳನ್ನು ನಿರಾಕರಿಸುತ್ತಿದ್ದಾರೆ. ಇದೀಗ ಇಬ್ಬರೂ ಯಾವಾಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಮತ್ತು ಇಬ್ಬರ ಬಗ್ಗೆ ಈ ಒಳ್ಳೆಯ ಸುದ್ದಿಯನ್ನು ನಾವು ಯಾವಾಗ ಕೇಳುತ್ತೇವೆ, ಎಂದುದು ಕಾಲ ಮಾತ್ರವೇ ನಿರ್ಧರಿಸಲಿದೆ. ಆದರೆ ಅವರಿಬ್ಬರ ಮದುವೆಯನ್ನು ಆದಷ್ಟು ಬೇಗ ನೋಡಲು ಅಭಿಮಾನಿಗಳು ಬಯಸುತ್ತಿದ್ದಾರೆ ಎಂಬುದು ಮಾತ್ರ ನಿಜ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ