Aryan Khan Drugs Case: ಶಾರುಕ್ ಖಾನ್ (Sharukh Khan) ಪುತ್ರ ಆರ್ಯನ್ ಖಾನ್ (Aryan Khan) ಜಾಮೀನಿಗೆ ಸಂಬಂಧಿಸಿದಂತೆ ಇಂದಿಗೂ ಕೂಡ ನಿರ್ಣಯ ಹೊರಬಂದಿಲ್ಲ. ಅಕ್ಟೋಬರ್ 28ರಂದು ಬಾಂಬೆ ಹೈ ಕೋರ್ಟ್ (Bombay High Court) ತನ್ನ ಮುಂದಿನ ವಿಚಾರಣೆ ನಡೆಸಲಿದೆ. ಅರ್ಬಾಜ್ ಮರ್ಚೆಂಟ್ (Arbaz Merchant) ಹಾಗೂ ಆರ್ಯನ್ ಖಾನ್ ವತಿಯಿಂದ ವಾದ ಮಂಡಿಸಲಾಗಿದೆ. ಈ ಸಂದರ್ಭದಲ್ಲಿ ಮುನ್ಮುನ್ ಧಮೇಚಾ (Munmun Dhamecha) ಕೂಡ ತಮ್ಮ ವಾದ ಮಂಡಿಸಿದ್ದಾರೆ. ನಾಳೆ NCB ವತಿಯಿಂದ ASG ಅನಿಲ್ ಸಿಂಗ್ ತಮ್ಮ ಪಕ್ಷವನ್ನು ಪ್ರಸ್ತುತಪಡಿಸಲಿದ್ದಾರೆ. ಇಂದು ನಡೆದ ವಿಚಾರಣೆಯ ಸಂದರ್ಭದಲ್ಲಿ ವಾದ ಮಂಡಿಸಿರುವ ಅರ್ಬಾಜ್ ಪರ ವಕೀಲ ಅಮಿತ್ ದೇಸಾಯಿ, ಆರ್ಯನ್, ಅರ್ಬಾಜ್ ಹಾಗೂ ಮುಂಜುನ್ ಕೇವಲ ಡ್ರಗ್ಸ್ ಸೇವಿಸಲು ಬಂದಿದ್ದರು ಹಾಗೂ ಇದರಲ್ಲಿ ಯಾವುದೇ ರೀತಿಯ ಸಂಚು ಇರಲಿಲ್ಲ.ಅವರು ಪಡೆದ ಡ್ರಗ್ಸ್ ವೈಯಕ್ತಿಕ ಬಳಕೆಗೆ ಮಾತ್ರ ಇತ್ತು ಮತ್ತು ಅದಕ್ಕಿಂತ ಹೆಚ್ಚೇನೂ ಇರಲಿಲ್ಲ ಮತ್ತು ಯಾವುದೇ ರೀತಿಯ ಸಂಚು ಇರಲಿಲ್ಲ. ಮೊದಲ ರಿಮಾಂಡ್ ವೇಳೆಯೂ ಕೂಡ 8 ಜನರ ಕುರಿತು ಯಾವುದೇ ರೀತಿಯ ಸಂಚಿನ ಕುರಿತು ಉಲ್ಲೇಖಿಸಲಾಗಿಲ್ಲ. ಯಾವ ಪ್ರಕರಣದಲ್ಲಿ ನಾವು 20 ದಿನಕ್ಕೂ ಹೆಚ್ಚು ದಿನಗಳನ್ನು ಕಳೆದಿವೆಯೋ ಆ ಪ್ರಕರಣದಲ್ಲಿ ಇಂದಿಗೂ ಕೂಡ ಬಂಧನ ನಡೆದಿಲ್ಲ. ಕಾನ್ಪರೆಸಿ ಒಂದು ವಿಭಿನ್ನ ಅಪರಾಧವಾಗಿದೆ. ನಾವು ಕೇವಲ ಒಂದು ವರ್ಷ ಶಿಕ್ಷೆಯ ಅಪರಾಧಕ್ಕೆ ಸಂಬಂಧಿಸಿದಂತೆ ಕೇವಲ ಜಾಮೀನು ಕೋರುತ್ತಿದ್ದೇವೆ. ಅಷ್ಟೇ ಅಲ್ಲ ಶಿಕ್ಷೆ ಕೇವಲ ಒಂದು ವರ್ಷವಾಗಿರುವಾಗ ಕಷ್ಟಡಿ ಅವಶ್ಯಕತೆ ಏನು? ಜಾಮೀನು ದೊರೆತ ಬಳಿಕವೂ ಕೂಡ ವಿಚಾರಣೆ ಮುಂದುವರೆಸಬಹುದು ಎಂದು ಅವರು ಹೇಳಿದ್ದಾರೆ. NCB ಕರೆದಾಗಲೆಲ್ಲಾ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ವಾದ ಮಂಡಿಸಿರುವ ದೇಸಾಯಿ, ಆರೋಪಿಗಳಿಗೆ ಜಾಮೀನು ಸಿಗಬೇಕು ಎಂದು ಪೀಠವನ್ನು ಕೋರಿದ್ದಾರೆ.
ಆರ್ಯನ್ ಪರವಾಗಿ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಮಂಗಳವಾರ ತಮ್ಮ ವಾದ ಮಂಡಿಸಿದ್ದಾರೆ. ಬುಧವಾರ ಮಧ್ಯಾಹ್ನದ ಊಟದ ನಂತರ ಹೆಚ್ಚಿನ ವಾದಕ್ಕೆ ನ್ಯಾಯಾಧೀಶರು ಅವರಿಗೆ ಕಾಲಾವಕಾಶ ನೀಡಿದ್ದರು. ಅಮಿತ್ ದೇಸಾಯಿ ನಂತರ, ಮುನ್ಮುನ್ ಧಮೇಚಾ ಅವರ ವಕೀಲರು ಎನ್‌ಸಿಬಿ, ಎಎಸ್‌ಜಿ ಅನಿಲ್ ಸಿಂಗ್ ಪರವಾಗಿ ಮತ್ತೊಮ್ಮೆ ಕ್ರಾಸ್ ಎಕ್ಸಾಮಿನ್ ನಡೆಸಿದ್ದಾರೆ. ಆರ್ಯನ್ ಖಾನ್ ಜಾಮೀನಿನ ತೀರ್ಪು ಇಂದು ಹೊರಬೀಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಈ ಮಧ್ಯೆ ಶಾರುಖ್ ಖಾನ್ ಅಭಿಮಾನಿಗಳು ಆರ್ಯನ್ ಬಿಡುಗಡೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಅಭಿಮಾನಿಗಳು ಮನ್ನತ್ ಸುತ್ತ ಪೋಸ್ಟರ್‌ಗಳನ್ನು ಅಂಟಿಸುತ್ತಿದ್ದಾರೆ. ಆದರೆ, ಪೊಲೀಸರು ಪ್ರತಿ ಬಾರಿಯೂ ಅವುಗಳನ್ನು ತೆಗೆದು ಹಾಕಿದ್ದಾರೆ.
ಅದೇನೇ ಇದ್ದರೂ ಕೂಡ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ (Sharukh Khan) ಅವರ ಪುತ್ರ ಆರ್ಯನ್ ಖಾನ್ ಇದಂದೂ ಕೂಡ ಬಾಂಬೆ ಹೈ ಕೋರ್ಟ್ ನಿಂದ ಜಾಮೀನು ಪಡೆಯಲು ವಿಫಲರಾಗಿದ್ದಾರೆ. ಕಾನೂನು ತಜ್ಞರ ಪ್ರಕಾರ ಇನ್ನೆರಡು ದಿನ ಆರ್ಯನ್ ಗೆ ಜಾಮೀನು ಸಿಗದೇ ಹೋದಲ್ಲಿ ನವೆಂಬರ್ 15ರವರೆಗೆ ಅವನು ಜೈಲಿನಲ್ಲಿಯೇ ಕಾಲಕಳೆಯಬೇಕಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ-Sameer Wankhede ಮದುವೆ ಮಾಡಿಸಿದ ಮೌಲಾನಾ ಗಂಭೀರ ಹೇಳಿಕೆ, 15 ವರ್ಷಗಳ ಹಿಂದೆ ನಡೆದಿದ್ದೇನು?
ನವೆಂಬರ್ 1 ರಿಂದ ಹೈ ಕೋರ್ಟ್ ನಲ್ಲಿ ರಜಾದಿನಗಳು ಆರಂಭವಾಗಲಿವೆ
ಬಾಂಬೆ ಹೈ ಕೋರ್ಟ್ ನಲ್ಲಿ ನವೆಂಬರ್ 1 ರಿಂದ ದೀಪಾವಳಿ ಹಬ್ಬದ ರಜಾದಿನಗಳು ಆರಂಭವಾಗಲಿವೆ. ಈ ಹಿನ್ನೆಲೆ ನವೆಂಬರ್ 12ರವೆರೆಗೆ ರುಟೀನ್ ಪ್ರಕರಣಗಳ ವಿಚಾರಣೆಗಳು ನಡೆಯುವುದಿಲ್ಲ ಮತ್ತು ಕೇವಲ ತ್ವರಿತ ಪ್ರಕರಣಗಳ ವಿಚಾರಣೆ ಮಾತ್ರ ನಡೆಯಲಿವೆ. ನಂತರ ನವೆಂಬರ್ 14 ಮತ್ತು 15ರಂದು ಶನಿವಾರ ಹಾಗೂ ಭಾನುವಾರದ ರಜೆ ಇರಲಿದೆ. ಅಂದರೆ, ಅಕ್ಟೋಬರ್ 29ರವರೆಗೆ ಆರ್ಯನ್ ಖಾನ್ ಗೆ ಬೆಲ್ ದೊರೆಯದೆ ಹೋದ ಸಂದರ್ಭದಲ್ಲಿ ಆತ ನವೆಂಬರ್ 15ರವರೆಗೆ ಜೈಲಿನಲ್ಲಿಯೇ ಇರಬೇಕಾದ ಪರಿಸ್ಥಿತಿ ಸೃಷ್ಟಿಯಾಗಲಿದೆ.
ಕಳೆದ 20 ದಿನಗಳಿಂದ ಜೈಲಿನಲ್ಲಿಯೇ ಕಾಲಕಳೆಯುತ್ತಿದ್ದಾನೆ ಆರ್ಯನ್
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್ ಕಳೆದ 20 ದಿನಗಳಿಂದ ಮುಂಬೈನ ಆರ್ಥರ್ ರೋಡ್ ಜೈಲಿನ ಅತಿಥಿಯಾಗಿದ್ದಾನೆ ಎಂಬುದು ಇಲ್ಲಿ ಉಲ್ಲೇಖನೀಯ. ಸೆಷನ್ಸ್ ಕೋರ್ಟ್ ನಲ್ಲಿ ಆತನ ಜಾಮೀನು ಅರ್ಜಿ ಎರಡು ಬಾರಿ ತಿರಸ್ಕೃತಗೊಂಡಿದೆ. ಇದಾದ ಬಳಿಕ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿರುವ ಶಾರುಕ್ ಪರ ವಕೀಲರು ತಮ್ಮ ಇಡೀ ಶಕ್ತಿಯನ್ನು ಬಳಸುತ್ತಿದ್ದಾರೆ. ಇದಕ್ಕಾಗಿ ಶಾರುಕ್ ದೇಶದ ಅತ್ಯಂತ ದುಬಾರಿ ವಕೀಲರ ದಂಡನ್ನೇ ಹೈಕೋರ್ಟ್ ನಲ್ಲಿ ನಿಲ್ಲಿಸಿದ್ದಾರೆ.
ಇದನ್ನೂ ಓದಿ-Sameer Wankhede ಹಾಗೂ Shah Rukh Khan ಈ ಮೊದಲೂ ಕೂಡ ಮುಖಮುಖಿಯಾಗಿದ್ದಾರೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ