`ಕಾಂತಾರ` ಗೆಲುವಿನ ಬೆನ್ನಲ್ಲೆ ರಿಷಬ್ ಜೊತೆ `ಕಾಂತಾರ ಪ್ರೀಕ್ವೆಲ್` ಗೆ ನಡೆದಿದೆ ಭರ್ಜರಿ ಸಿದ್ಧತೆ..!
ವಿಶೇಷ ಅಂದ್ರೆ ಕಳೆದ ಎರಡು ತಿಂಗಳಿನಿಂದಲೇ ರಿಷಬ್ ಟೀಮ್ ಕಥೆ ಪೋಣಿಸುವ ಕೆಲಸ ಮಾಡ್ತಿದ್ದಾರೆ. ಅದ್ರೆ ಆ ಕಥೆ ಇನ್ನು ಫೈನಲ್ ಆಗಿಲ್ಲ.ಈಗ ಈ ಕಥೆಯನ್ನು ಫೈನಲ್ ಮಾಡ್ಕೊಂಡು ಆದಷ್ಟು ಬೇಗ ಶೂಟಿಂಗ್ ಶುರು ಮಾಡಲು ತಮ್ಮ ತಂಡದ ಜೊತೆ ಸೇರಿ ಕೊಂಡಿದ್ದಾರೆ ರಿಷಬ್ ಶೆಟ್ರು....
ಒಂದು ಕಾಂತಾರ ಕಾಸರಗೋಡಿನ ರಿಷಬ್ ಶೆಟ್ಟಿ ಅವರನ್ನ ಕ್ಯಾಲಿಫೋರ್ನಿಯಾವರೆಗೂ ಕರ್ಕೊಂಡ್ ಹೋಗಿದೆ. ಅಲ್ಲದೆ ಕಾಂತಾರ ಸೂಪರ್ ಡೂಪರ್ ಹಿಟ್ ಆಗ್ತಿದಂತೆ ಕಾಂತಾರ ಪ್ರೀಕ್ವೇಲ್ ಗುಟ್ಟು ಬಿಟ್ಟು ಕೊಟ್ಟು, ಪ್ರೀಕ್ವೇಲ್ ಕಥೆ ಹೆಣೆಯೋ ಸಲುವಾಗಿ ಮಾರ್ಚ್ ನಿಂದ ಪೋನ್ ಆಪ್ ಮಾಡ್ತಿನಿ ಅಂತ ಶೆಟ್ರು ಹೇಳಿದ್ರು. ಅದರಂತೆ ಈಗ ಶೆಟ್ರು ಪ್ರೀಕ್ವೇಲ್ ಕಥೆಗಾಗಿ ತಲೆಕೆಡಿಸಿ ಕೊಂಡು ಗಟ್ಟು ತಂಡದ ಜೊತೆ ಬರವಣಿಗೆ ಕೆಲಸದಲ್ಲಿ ಬ್ಯಸಿಯಾಗಿದ್ದಾರೆ...ಅಲ್ಲದೆ ಪ್ರೀಕ್ವೇಲ್ ಕತೆಗಾಗಿ ಹೊಸ ಕತೆಗಾರನನ್ನು ತಂಡಕ್ಕೆ ವೆಲ್ ಕಮ್ ಮಾಡ್ಕೊಂಡಿದ್ದಾರೆ.
ಕೆಜಿಎಫ್ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು.. ಕೆಜಿಎಫ್ ಗೆಲುವು ಚಿತ್ರರಂಗಕ್ಕೆ ಹೊಸ ಹಾದಿ ಬುನಾದಿ ಹಾಕಿ ಕೊಟ್ಟಿತ್ತು.. ಆದರು ಕೆಜಿಎಫ್ ಗೆಲುವು ಆಕಸ್ಮಿಕ ಅಂದ ಮಂದಿಯೇ ಜಾಸ್ತಿ.. ಆದರೆ ಕೆಜಿಎಫ್ ನಂತರ ಬಂದ ಮತ್ತೊಂದಷ್ಟು ಕನ್ನಡ ಚಿತ್ರಗಳು ಕಾಲ್ ಎಳೆಯೋ ಮಂದಿಗೆ ಗೋಲಿ ಹೊಡೆದು ಬಾಕ್ಸ್ ಆಫೀಸ್ ನ ಚಿಂದಿ ಚಿತ್ರಾನ್ನ ಮಾಡಿದ್ವು. ಅದರಲ್ಲೂ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಚಿತ್ರ ಕನ್ನಡ ಸಿನಿಮಾಗಳಂದ್ರೆ ಅಸಡ್ಡೆಯಿಂದ ಮಾತಾಡೋ ಮಂದಿ ತಲೆತಿರುಗುವಂತೆ ಮಾಡಿದ್ದು, ಇಂದಿಗೂ ಕನ್ನಡದ ಕಾಂತಾರ ಅರ್ಭಟ ಕಮ್ಮಿ ಆಗಿಯೇ ಇಲ್ಲ. ಈಗ ಈ ಬಿಸಿಯಲ್ಲೇ ಕಾಂತಾರ ಪ್ರೀಕ್ವೇಲ್ ಗಾಗಿ ರಿಷಬ್ ಬಳಗ ನಿದ್ದೆ ಬಿಟ್ಟು ಕೆಲಸ ಮಾಡ್ತಿದ್ದಾರೆ.
ಇದನ್ನೂ ಓದಿ- ಅಣ್ಣಾವ್ರ ಮೊಮ್ಮಗ ಅಪ್ಪು ಪ್ರೀತಿಯ ಪುತ್ರ ಯುವ ಹೀರೋ ಆಗಿ ಲಾಂಚ್ ಆಗೋ ಸಮಯ ಬಂದೇ ಬಿಡ್ತು!
ಕಾಂತಾರ ಗೆಲುವಿನ ಬೆನ್ನಲ್ಲೆ ರಿಷಬ್ ಜೊತೆ ಕಾಂತಾರ ಪ್ರೀಕ್ವೆಲ್ ಮಾಡಲು ಪ್ಲಾನ್ ಮಾಡಿರುವ ಹೊಂಬಾಳೆ ಟೀಮ್ ರಿಷಬ್ ಬಳಗಕ್ಕೆ ಬೇಕಾದ ಎಲ್ಲಾ ಸಿದ್ದತೆ ಮಾಡಿಕೊಟ್ಟು ಕಥೆ ಹೆಣೆಯೋ ಜವಬ್ದಾರಿ ಕೊಟ್ಟಿದೆ.
ವಿಶೇಷ ಅಂದ್ರೆ ಕಳೆದ ಎರಡು ತಿಂಗಳಿನಿಂದಲೇ ರಿಷಬ್ ಟೀಮ್ ಕಥೆ ಪೋಣಿಸುವ ಕೆಲಸ ಮಾಡ್ತಿದ್ದಾರೆ. ಅದ್ರೆ ಆ ಕಥೆ ಇನ್ನು ಫೈನಲ್ ಆಗಿಲ್ಲ.ಈಗ ಈ ಕಥೆಯನ್ನು ಫೈನಲ್ ಮಾಡ್ಕೊಂಡು ಆದಷ್ಟು ಬೇಗ ಶೂಟಿಂಗ್ ಶುರು ಮಾಡಲು ತಮ್ಮ ತಂಡದ ಜೊತೆ ಸೇರಿ ಕೊಂಡಿದ್ದಾರೆ ರಿಷಬ್ ಶೆಟ್ರು....
ಯಾವಾಗ ಕಾಂತಾರ ಹೊಂಬಾಳೆ ಫಿಲಂಸ್ ನಿರೀಕ್ಷೆಯನ್ನು ಮೀರಿ ಗೆಲ್ತೊ ಆ ಕ್ಷಣದಲ್ಕೇ ರಿಷಬ್ ಜವಾಬ್ದಾರಿ ದುಪ್ಪಟ್ಟಾಗಿದ್ದು, ಇದನ್ನರಿತ ರಿಷಬ್ ಕಾಂತಾರ ಸೀಕ್ವೇಲ್ ಗಿಂತ ಪ್ರೀಕ್ವೇಲ್ ಮಾಡಿದ್ರೆ ಮತ್ತೊಂದು ಹಿಟ್ ನೋಡಬಹುದು ಎಂದು ಪಕ್ಕಾ ಪ್ಲಾನ್ ಮಾಡಿಕೊಂಡು ಈಗ ಪ್ರೀಕ್ವೇಲ್ ಕಥೆ ಮಾಡ್ತಿದ್ದಾರೆ. ಖುಷಿಯ ವಿಚಾರ ಅಂದ್ರೆ ರಿಷಬ್ ಆರಂಭದ ದಿನಗಳಲ್ಲಿ ಜೊತೆಗಿದ್ದ ಸರಸ್ವತಿ ಪುತ್ರರು ಈಗಲೂ ಜೊತೆಗಿದ್ದಾರೆ. ಅಲ್ಲದೆ ಈ ಬಳಗಕ್ಕೆ ಪ್ರೀಕ್ವೆಲ್ ಕಥೆ ಮಾಡೊಸಲುವಾಗಿ ದೇವರನಾಡು ಅಂದ್ರೆ ಮಾಲಿ ವುಡ್ ನಿಂದ ಸ್ಕ್ರಿಪ್ಟ್ ರೈಟರ್ ಒಬ್ರು ರಿಷಬ್ ತಂಡಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಬಳಗಕ್ಕೆ ರಿಷಬ್ ಕಥೆ ಹೇಳಿದ್ದು ಆ ಕಥೆಗೆ ಪೂರಕವಾದ ಚಿತ್ರಕಥೆ ಕೂರಿಸೊದ್ರಲ್ಲಿ ರಿಷಬ್ ಟೀಮ್ ಈಗ ಫುಲ್ ಡೇ ವರ್ಕ್ ಮಾಡ್ತಿದ್ದಾರೆ..ಇನ್ನು ರಿಷಬ್ ಫಸ್ಟ್ ಟೈಮ್ ಕೇರಳದ ಕತೆಗಾರನ ಜೊತೆ ಕೆಲಸ ಮಾಡಲಿದ್ದು, ಆ ಕತೆಗಾರನ ಬಗ್ಗೆ ಇನ್ನು ಸುಳಿವು ಬಿಟ್ಟುಕೊಟ್ಟಿಲ್ಲ..
ಇದನ್ನೂ ಓದಿ- ಪ್ರಪಂಚದ ಅತೀ ದೊಡ್ಡ ಥಿಯೇಟರ್‌ನಲ್ಲಿ ಆರ್‌ಆರ್‌ಆರ್ ಸ್ಪೆಷಲ್ ಸ್ಕ್ರೀನಿಂಗ್..! ಎಲ್ಲಿ.. ಯಾವಾಗ..?
ಕಾಂತಾರ ಗೆಲುವಿನ ನಂತ್ರ ಸಡನ್ ಆಗಿ ಬ್ಯುಸಿಯಾದ ರಿಷಬ್ ತಮ್ಮ ತಂಡದ ಜೊತೆ ಹೆಚ್ಚು ಸಮಯ ಕಳೆದಿಲ್ಲ. ಹೀಗಾಗಿ ಕಾಂತಾರ ಪ್ರೀಕ್ವೆಲ್ ಕೆಲಸ ಕೊಂಚ ತಡವಾಗಿದ್ದು, ಈಗ ಕಾಂತಾರ ಪ್ರೀಕ್ವೇಲ್ ಕತೆಗಾಗಿ ರಿಷಬ್ ಪುಲ್ ಟೈಮ್ ಮೀಸಲಿಟ್ಟಿದ್ದು, ಆದಷ್ಟು ಬೇಗ ಕಾಂತಾರ ಪ್ರೀಕ್ವೆಲ್ ಪ್ರೀಪ್ರೊಡಕ್ಷನ್ ಕೆಲಸ ಕಂಪ್ಲೀಟ್ ಮಾಡಿ.. ಜೂನ್ ವೇಳೆಗೆ ಶೂಟಿಂಗ್ ಶುರು ಮಾಡಿ, ಇದೇ ವರ್ಷದಲ್ಲಿ ಕಾಂತಾರ ಪ್ರೀಕ್ವೇಲ್ ಅನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭರ್ಜರಿಯಾಗಿ ರಿಲೀಸ್ ಮಾಡಲು ಪ್ಲಾನ್ ಮಾಡಲಾಗ್ತಿದೆ.
ಆದ್ರೆ ಈ ಚಿತ್ರಕ್ಕೆ ಅದ್ಯಾವ ಟೈಟಲ್ ಫೈನಲ್ ಮಾಡ್ತಾರೆ.. ಕಾಂತಾರದಲ್ಲಿ ಇದ್ದ ಯಾವ ಪಾತ್ರಗಳು ಇಲ್ಲಿ ಮತ್ತೆ ಕಾಣಿಸ್ತಾವೆ ಅನ್ನೊದು ನಿಗೂಢ ರಸಹ್ಯವಾಗಿದ್ದು, ರಹಸ್ಯದ ಬಗ್ಗೆ ತಿಳಿಯ ಬೇಕಾದ್ರೆ ಇನ್ನು ಒಂದಷ್ಟು ದಿನಗಳು ಸಿನಿ ಪ್ರೇಮಿಗಳು ಕಾಯಲೇಬೇಕು. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.