ಪ್ರಪಂಚದ ಅತೀ ದೊಡ್ಡ ಥಿಯೇಟರ್‌ನಲ್ಲಿ ಆರ್‌ಆರ್‌ಆರ್‌ ಸ್ಪೆಷಲ್‌ ಸ್ಕ್ರೀನಿಂಗ್‌..! ಎಲ್ಲಿ.. ಯಾವಾಗ..?

ಆರ್‌ಆರ್‌ಆರ್‌ ಸಿನಿಮಾ ದಾಖಲೆಗಳ ಸೃಷ್ಟಿಸುತ್ತಾ ಪ್ರಪಂಚದಾದ್ಯಂತ ಸಂಚಲನ ಸೃಷ್ಟಿಸುತ್ತಿದೆ. ಇದೀಗ ರಾಜಮೌಳಿ ದೃಶ್ಯಕಾವ್ಯ ಲಾಸ್ ಏಂಜಲೀಸ್‌ನ ಪ್ರಸಿದ್ಧ 'ದಿ ಥಿಯೇಟರ್ ಅಟ್ ಏಸ್ ಹೋಟೆಲ್'ನಲ್ಲಿ ಪ್ರದರ್ಶಿಸಲಾಗುತ್ತಿದೆ. 1647 ಆಸನ ಸಾಮರ್ಥ್ಯದ ಈ ಥಿಯೇಟರ್ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ. ಪ್ರದರ್ಶನದ ನಂತರ ರಾಜಮೌಳಿ, ಕೀರವಾಣಿ ಮತ್ತು ರಾಮ್ ಚರಣ್ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಬಗ್ಗೆ ನಿರ್ಮಾಪಕರು ಅಧಿಕೃತ ಹೇಳಿಕೆ ನೀಡಿದ್ದಾರೆ. 

Written by - Krishna N K | Last Updated : Mar 1, 2023, 07:41 PM IST
  • ಆರ್‌ಆರ್‌ಆರ್‌ ಸಿನಿಮಾ ದಾಖಲೆಗಳ ಸೃಷ್ಟಿಸುತ್ತಾ ಪ್ರಪಂಚದಾದ್ಯಂತ ಸಂಚಲನ ಸೃಷ್ಟಿಸುತ್ತಿದೆ.
  • ಇದೀಗ ರಾಜಮೌಳಿ ದೃಶ್ಯಕಾವ್ಯ 'ದಿ ಥಿಯೇಟರ್ ಅಟ್ ಏಸ್ ಹೋಟೆಲ್'ನಲ್ಲಿ ಪ್ರದರ್ಶಿಸಲಾಗುತ್ತಿದೆ.
  • 1647 ಆಸನ ಸಾಮರ್ಥ್ಯದ ಈ ಥಿಯೇಟರ್ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ.
ಪ್ರಪಂಚದ ಅತೀ ದೊಡ್ಡ ಥಿಯೇಟರ್‌ನಲ್ಲಿ ಆರ್‌ಆರ್‌ಆರ್‌ ಸ್ಪೆಷಲ್‌ ಸ್ಕ್ರೀನಿಂಗ್‌..! ಎಲ್ಲಿ.. ಯಾವಾಗ..? title=

RRR Screenig in Los Angeles : ಆರ್‌ಆರ್‌ಆರ್‌ ಸಿನಿಮಾ ದಾಖಲೆಗಳ ಸೃಷ್ಟಿಸುತ್ತಾ ಪ್ರಪಂಚದಾದ್ಯಂತ ಸಂಚಲನ ಸೃಷ್ಟಿಸುತ್ತಿದೆ. ಇದೀಗ ರಾಜಮೌಳಿ ದೃಶ್ಯಕಾವ್ಯ ಲಾಸ್ ಏಂಜಲೀಸ್‌ನ ಪ್ರಸಿದ್ಧ 'ದಿ ಥಿಯೇಟರ್ ಅಟ್ ಏಸ್ ಹೋಟೆಲ್'ನಲ್ಲಿ ಪ್ರದರ್ಶಿಸಲಾಗುತ್ತಿದೆ. 1647 ಆಸನ ಸಾಮರ್ಥ್ಯದ ಈ ಥಿಯೇಟರ್ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ. ಪ್ರದರ್ಶನದ ನಂತರ ರಾಜಮೌಳಿ, ಕೀರವಾಣಿ ಮತ್ತು ರಾಮ್ ಚರಣ್ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಬಗ್ಗೆ ನಿರ್ಮಾಪಕರು ಅಧಿಕೃತ ಹೇಳಿಕೆ ನೀಡಿದ್ದಾರೆ. 

ಸದ್ಯ ಆರ್‌ಆರ್‌ಆರ್‌ ಚಿತ್ರತಂಡ ಅಮೆರಿಕದಲ್ಲಿದೆ. ಇತ್ತೀಚೆಗೆ ನಡೆದ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ​​ಅವಾರ್ಡ್ ಸಮಾರಂಭದಲ್ಲಿ ನಿರ್ದೇಶಕ ರಾಜಮೌಳಿ ಕೀರವಾಣಿ, ಛಾಯಾಗ್ರಾಹಕ ಸೆಂಥಿಲ್ ಕುಮಾರ್ ಮತ್ತು ಮಗ ಕಾರ್ತಿಕೇಯ ಅವರೊಂದಿಗೆ ಭಾಗವಹಿಸಿದ್ದರು. ರಾಮ್ ಚರಣ್ HCA ಪ್ರಶಸ್ತಿ ಸಮಾರಂಭದಲ್ಲಿ ವಿಶೇಷ ಅತಿಥಿಗಳಲ್ಲಿ ಒಬ್ಬರಾಗಿ ಭಾಗವಹಿಸಿದ್ದರು. ಅವರ ಕೈಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರಿಗೆ ಸ್ಪಾಟ್ ಲೈಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದನ್ನೂ ಓದಿ: 7 ವರ್ಷ ಡೇಟಿಂಗ್... ಮದುವೆಯಾದ ಬಳಿಕ ಕೈಕೊಟ್ಟ ಸ್ಟಾರ್ ನಟ: ಈಡೇರಲೇ ಇಲ್ಲ ಈ ನಟಿಯ ಕನಸು!

ಆದರೆ ಎನ್‌ಟಿಆರ್ ಆರ್‌ಆರ್‌ಆರ್ ತಂಡದೊಂದಿಗೆ ಅಮೆರಿಕಕ್ಕೆ ಹೋಗಿರಲಿಲ್ಲ. ಸಹೋದರ ತಾರಕರತ್ನ ಫೆಬ್ರವರಿ 18 ರಂದು ನಿಧನರಾದರು. ಇದರಿಂದ ಕುಟುಂಬದಲ್ಲಿ ದುಃಖದ ಛಾಯೆ ಆವರಿಸಿದೆ. ಇದರಿಂದ ಎನ್‌ಟಿಆರ್‌ ಆರ್‌ಆರ್‌ಆರ್‌ ಸಂಭ್ರಮಾಚರಣೆಯಿಂದ ದೂರ ಉಳಿದಿದ್ದಾರೆ. ಅಲ್ಲದೇ ತಾರಕರತ್ನ ಅವರ ಮರಣೋತ್ತರ ಕಾರ್ಯಕ್ರಮಗಳು ಇನ್ನೂ ಮುಗಿದಿಲ್ಲ. ಮಾ.2ರಂದು ತಾರಕರತ್ನ ತಿಥಿ ನಡೆಯಲಿದೆ. ಈ ಕಾರ್ಯಕ್ರಮ ಮುಗಿದ ನಂತರ ಮಾರ್ಚ್ 6ರಂದು ಅಮೆರಿಕಕ್ಕೆ ತೆರಳಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಮೂಲ ಗೀತೆಗಳ ವಿಭಾಗದಲ್ಲಿ ನಾಟು ನಾಟು ಹಾಡು ಆಸ್ಕರ್ ನಾಮನಿರ್ದೇಶನಗೊಂಡಿದೆ. ಮಾರ್ಚ್ 12 ರಂದು ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಆಸ್ಕರ್ ಸಮಾರಂಭದಲ್ಲಿ ಆರ್‌ಆರ್‌ಆರ್ ತಂಡ ಭಾಗವಹಿಸಲಿದೆ. ರಾಹುಲ್ ಸಿಪ್ಲಿಗಂಜ್ ಮತ್ತು ಕಾಲ ಭೈರವ ಅವರ ನೇರ ಪ್ರದರ್ಶನ ದಿನದ ಹೈಲೈಟ್ ಆಗಿರುತ್ತದೆ. ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಂದ ಮೇಲೆ ಆಸ್ಕರ್ ಬರಲಿದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ.

ಇದನ್ನೂ ಓದಿ: ಈ ಒಂದು ಕಾರಣಕ್ಕಾಗಿಯೇ ಕಿಂಗ್‌ ಖಾನ್‌ಗೆ ʼಲೇಡಿ ಬಾಡಿಗಾರ್ಡ್‌ʼ ಇರೋದು..!

ಕೀರವಾಣಿ ಈ ಹಾಡನ್ನು ರಚಿಸಿದ್ದರೆ... ರಾಹುಲ್ ಸಿಪ್ಲಿಗಂಜ್ ಮತ್ತು ಕಾಲ ಭೈರವ ಹಾಡಿದ್ದಾರೆ. ಗೀತರಚನೆಕಾರ ಚಂದ್ರ ಬೋಸ್ ಸಾಹಿತ್ಯ ಬರೆದಿದ್ದಾರೆ. ಪ್ರೇಮ್ ರಕ್ಷಿತ್ ಅವರ ನೃತ್ಯ ಸಂಯೋಜನೆ. ಎನ್ಟಿಆರ್ ಮತ್ತು ರಾಮ್ ಚರಣ್ ತಮ್ಮ ಅದ್ಭುತ ಹೆಜ್ಜೆಗಳಿಂದ ಈ ಹಾಡು ದೊಡ್ಡ ಹಿಟ್ ಆಗಿತ್ತು. ಇದೀಗ ಕೆಲವೇ ದಿನಗಳಲ್ಲಿ ಆರ್‌ಆರ್‌ಆರ್‌ ಆಸ್ಕರ್‌ ಭವಿಷ್ಯ ನಿರ್ಧಾರವಾಗುತ್ತದೆ. ನಾಟು ನಾಟು ಆಸ್ಕರ್ ಗೆದ್ದರೆ... ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅಪರೂಪದ ದಾಖಲೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News