ಬೆಂಗಳೂರು: ಜಗತ್ತಿನಾದ್ಯಂತ ಇಂದು ಕೆಜಿಎಫ್‌-2 ಸಿನಿಮಾ ಬಿಡುಗಡೆಯಾಗಿದೆ. ಸಿನಿ ಅಭಿಮಾನಿಗಳ ಕಾತುರತೆಗೆ ಇಂದು ತೆರೆಬಿದ್ದಿದೆ. ಯಶ್‌ ಅಭಿಮಾನಿಗಳಿಗೆ ಈ ಸಿನಿಮಾ ರಸದೌತಣ ನೀಡಿದ್ದಂತೂ ಸುಳ್ಳಲ್ಲ. ಹೊಂಬಾಳೆ ಫಿಲಂಸ್‌ ಅಡಿಯಲ್ಲಿ ಪ್ರಶಾಂತ್‌ ನೀಲ್‌ ನಿರ್ದೇಶನದಲ್ಲಿ ಮೂಡಿಬಂದ ಕೆಜಿಎಫ್‌ ಸಿನಿಮಾದ ಕ್ರೇಜ್‌ ಎಲ್ಲೆಡೆ ಇದೆ. ಇದೀಗ ಕೆಜಿಎಫ್‌ ಚಾಪ್ಟರ್‌ 2ರ  ಪೋಸ್ಟರ್‌ನ್ನು ಚಾರ್ ಕೋಲ್ (ಇದ್ದಿಲು) ಹಾಗೂ ಮರಳಿನಿಂದ ಚಿತ್ರಿಸಲಾಗಿದ್ದು, ಈ ಪೋಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: KGF 2 Release:ಗರುಡ ಫಿನಿಶ್..‌ ಅಧೀರ ಉಡೀಸ್!‌ ಹೇಗಿತ್ತು ಗೊತ್ತಾ ರಾಕಿಭಾಯ್‌ ರಿಯಲ್‌ ಸಾಮ್ರಾಜ್ಯ


ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಸ್ವರಾಜ್‌ ಮೈದಾನದಲ್ಲಿ ಚಾರ್ ಕೋಲ್ ಮತ್ತು ಮರಳಿನಿಂದ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಕೆಜಿಎಫ್‌ 2ರ ಪೋಸ್ಟರ್ ರಚನೆ ಮಾಡಲಾಗಿದೆ. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಹಳೆ ವಿದ್ಯಾರ್ಥಿ ಹಾಗೂ ಫೈನ್ ಆರ್ಟ್ಸ್ ಕಲಾವಿದ ತಿಲಕ್ ಕುಲಾಲ್ ಕೈಯಲ್ಲಿ ಈ ವಿಶೇಷ ಪೋಸ್ಟರ್‌ ಮೂಡಿ ಬಂದಿದೆ. ಇನ್ನು ಈ ಪೋಸ್ಟರ್‌ ರಚನೆಗೆ ಕಲಾವಿದರಾದ ಅಕ್ಷಿತ್ ಕುಲಾಲ್‌ ಹಾಗೂ ರೋಹಿತ್‌ ನಾಯ್ಕ್‌ ಸಹಕಾರ ನೀಡಿದ್ದಾರೆ. 


ವೀರೇಶ್ ಥಿಯೇಟರ್​ನಲ್ಲಿ ಮಹಾ ಯಡವಟ್ಟು.. ಕೆಜಿಎಫ್ 2 ಬದಲು ಕೆಜಿಎಫ್ 1 ರಿಲೀಸ್!


ಅಪ್ಪು ಪೋಸ್ಟರ್‌ ರಚಿಸಿದ್ದ ಕಲಾವಿದ:
ಈ ಹಿಂದೆ ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಪೋಸ್ಟರ್‌ನ್ನು ಚಾರ್‌ಕೋಲ್‌ ಹಾಗೂ ಮರಳಿನಿಂದ ರಚಿಸಿ ನಮನ ಸಲ್ಲಿಸಿದ್ದರು. ಈ ಪೋಸ್ಟರ್‌ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ದಾಖಲೆ ಬರೆದಿತ್ತು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.