ಬೆಂಗಳೂರು : ಕರೋನಾ (Coronavirus) ಮಹಾಮಾರಿಯ ಆರ್ಭಟದ ಮುಂದೆ ಚಿತ್ರ ನಗರಿ ತತ್ತರಿಸಿಹೋಗಿದೆ. ಕರೋನಾ ಮಹಾಮಾರಿ ದಿನದಿಂದ ದಿನಕ್ಕೆ ರಣ ಹೆಮ್ಮಾರಿಯಾಗುತ್ತಿದೆ. ಚಿತ್ರ ನಿರ್ಮಾಣಕ್ಕೆ ಸೇರಿದ ಎಲ್ಲಾ ಚಟುವಟಿಕೆಗಳೂ ಸ್ಥಗಿತಗೊಂಡಿವೆ.  ಕರೋನಾ ರಕ್ಕಸನ ಛಾಯೆ ಕೆಜಿಎಫ್ 2 ಚಿತ್ರದ ಮೇಲೂ ಬಿದ್ದಂತೆ ಅನ್ನಿಸುತ್ತಿದೆ. 


COMMERCIAL BREAK
SCROLL TO CONTINUE READING

ಎಲ್ಲವೂ ಅಂದುಕೊಂಡಂತೆ ಆದರೆ, ಜುಲೈ 16ರಂದು ರಾಕಿ ಭಾಯ್ ಯಶ್ (Yash) ಅಭಿನಯದ ಕೆಜಿಎಫ್ 2 (KGF2) ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ನಟ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಶನ್ ನಲ್ಲಿ ಮೂಡಿ ಬಂದಿರುವ ಈ ಚಿತ್ರದ ಬಗ್ಗೆ ಸಂಪೂರ್ಣ ದೇಶವೇ ಅಗಾಧ ಕುತೂಹಲ ಇಟ್ಟುಕೊಂಡಿದೆ.  ಜುಲೈ 16 ಕ್ಕೆ ಸಿನಿಮಾ ರಿಲೀಸ್ ಆಗಲಿದೆ ಎಂದು ಚಿತ್ರ ತಂಡ ಅಧಿಕೃತವಾಗಿಯೇ ಘೋಷಣೆ ಮಾಡಿದೆ.  ಆದರೆ, ಲೇಟೆಸ್ಟ್ ಮೂಲಗಳ ಪ್ರಕಾರ ಜುಲೈ 16ಕ್ಕೆ ಕೆಜಿಎಫ್ 2 (KGF2) ಬಿಡುಗಡೆ ಸಾಧ್ಯತೆ ಕಡಿಮೆ ಇದೆಯಂತೆ. ರಿಲೀಸ್ ಮುಂದೂಡುವ ಸಾಧ್ಯತೆಗಳು ಅಧಿಕವಾಗಿದೆ.


ಇದನ್ನೂ ಓದಿ : Radhe Trailer: ಸಲ್ಮಾನ್ ಖಾನ್ ನಟನೆಯ 'ರಾಧೆ' ಸಿನಿಮಾದ ಟ್ರೈಲರ್ ರಿಲೀಸ್! ಇಲ್ಲಿದೆ ನೋಡಿ


ಕೆಜಿಎಫ್ 2 ರಿಲೀಸ್ ಗೆ ಹಿಂದೇಟು ಯಾಕೆ..?
ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶಾದ್ಯಂತ  ಈ ಚಿತ್ರ ಬಿಡುಗಡೆಯಾಗಲಿದೆ. ಕರೋನಾ (Coronavirus) ಹಿನ್ನೆಲೆಯಲ್ಲಿ   ಸಂಪೂರ್ಣ ದೇಶದಲ್ಲಿ ಚಿತ್ರೋದ್ಯಮ ನೆಲಕಚ್ಚಿವೆ. ಚಿತ್ರ ಮಂದಿರಗಳು ಮುಚ್ಚಿವೆ.  ಥಿಯೇಟರ್ ಗೆ ಜನ  ಬರುತ್ತಿಲ್ಲ. ದಿನಕ್ಕೆ ಮೂರು ಲಕ್ಷಕ್ಕೂ ಅಧಿಕ ಕರೋನಾ (COVID-19) ಪಾಸಿಟಿವ್ ಕೇಸ್ ಗಳು ದಾಖಲಾಗುತ್ತಿವೆ.  ತಜ್ಞರ  ಪ್ರಕಾರ ಮೇ ಮಧ್ಯ ಭಾಗಕ್ಕೆ ಕರೋನಾ ತನ್ನ ಪೀಕ್ ಗೆ ಏರಲಿದೆ ಎಂಬ ಊಹೆ ಇದೆ.  ಮೇ ಅಂತ್ಯಕ್ಕೆ ಅಥವಾ ಜೂನ್ ವೇಳೆಗೆ ಕರೋನಾ ಪ್ರಕೋಪ ಕೊಂಚ ಕಡಿಮೆಯಾಗಬಹುದು. ಜುಲೈ ಹೊತ್ತಿಗೆ ಚಿತ್ರ ಮಂದಿರಗಳು ತೆರದುಕೊಂಡರೂ ಕರೋನಾದಿಂದ ಜರ್ಜರಿತ ಜನತೆ ಚಿತ್ರ ಮಂದಿರದತ್ತ ತಲೆ ಹಾಕುವ ಸಾಧ್ಯತೆ ಇಲ್ಲವೇ ಎಂದು ಹೇಳಬಹುದು. ಹಾಗಾಗಿ, ನಿಗದಿಯಂತೆ ಜುಲೈನಲ್ಲಿ ಚಿತ್ರ ರಿಲೀಸ್ ಆದರೆ ಚಿತ್ರ ಬಾಕ್ಸ್ ಆಫೀಸಿನಲ್ಲಿ ಸೋಲಬಹುದು ಎಂಬ ಆತಂಕ ಚಿತ್ರ ತಂಡವನ್ನು ಕಾಡುತ್ತಿದೆ. 


ಕೆಜಿಎಫ್ ಬಿಗ್ ಬಜೆಟ್ ಚಿತ್ರ:
ಕೆಜಿಎಫ್ 2 ಬಿಗ್ ಬಜೆಟ್ ಚಿತ್ರ. ಬಹಳಷ್ಟು ನಿರೀಕ್ಷೆ ಈ ಚಿತ್ರದ ಮೇಲಿದೆ. ಹಾಗಾಗಿ ತರಾತುರಿಯಲ್ಲಿ ಚಿತ್ರ ರಿಲೀಸ್ ಮಾಡುವ ನಿರ್ಧಾರವನ್ನು ನಿರ್ಮಾಪಕರು ಕೈಗೊಳ್ಳುವ ಸಾಧ್ಯತೆ ಕಡಿಮೆ. ಜೊತೆಗೆ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡುವ ಛಾನ್ಸ್ ಕೂಡಾ ಕಡಿಮೆ. ಹಾಗಾಗಿ, ಕೆಜಿಎಫ್ 2 ರಿಲೀಸ್ ಮುಂದಕ್ಕೆ ಹೋಗುವ ಸಾಧ್ಯತೆ ತುಂಬಾ ಹೆಚ್ಚಾಗಿದೆ ಎನ್ನುತ್ತಾರೆ ಚಿತ್ರ ನಗರದ ಪಂಡಿತರು.


ಇದನ್ನೂ ಓದಿ : Sameera Reddy: ವರದನಾಯಕ ಬೆಡಗಿ ಸಮೀರಾ ರೆಡ್ಡಿಗೆ ಕೊರೋನಾ ಪಾಸಿಟಿವ್.!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.