ಬೆಂಗಳೂರು: ಇಷ್ಟುದಿನ ಪೋಷಕ ನಟರಾಗಿ ಕನ್ನಡ ಸಿನಿ ರಸಿಕರ ಮನಗೆದ್ದಿದ್ದ ಅಚ್ಯುತ್‌ ಕುಮಾರ್‌(Achyuth Kumar) ‘ಫೋರ್‌ ವಾಲ್ಸ್‌ʼ ಸಿನಿಮಾ ಮೂಲಕ ನಾಯಕನಾಗಿಯೂ ಬೆಳ್ಳಿ ತೆರೆಯಲ್ಲಿ ಮೋಡಿ ಮಾಡಿದ್ದಾರೆ. ಕೌಟುಂಬಿಕ ಕಥೆಯ ತಳಹದಿಯಲ್ಲಿ ‘ಫೋರ್‌ ವಾಲ್ಸ್‌ʼ ಚಿತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ.


COMMERCIAL BREAK
SCROLL TO CONTINUE READING

ಸಂಗಮೇಶ ಎಸ್.ಸಜ್ಜನರ ಕಥೆ ಬರೆದು ನಿರ್ದೇಶನ ಮಾಡಿರುವ ‘ಫೋರ್‌ ವಾಲ್ಸ್‌ʼ(Four Walls)ಗೆ ಅಚ್ಯುತ್‌ ಕುಮಾರ್ ಅಭಿನಯವೇ ತಳಹದಿ. ಚಿತ್ರದಲ್ಲಿ ರೆಟ್ರೋ ಸ್ಟೈಲ್‌ನಲ್ಲಿ ಅಚ್ಯುತ್‌ ಕುಮಾರ್ ಮಿಂಚಿದ್ದಾರೆ. ಅಚ್ಯುತ್‌ ಅವರಿಗೆ ದತ್ತಣ್ಣ, ಸುಜಯ್ ಶಾಸ್ತ್ರಿ ಸಾಥ್‌ ನೀಡಿರುವುದು ಚಿತ್ರವನ್ನು ಮತ್ತಷ್ಟು ಅಟ್ರ್ಯಾಕ್ಟಿವ್‌ ಆಗಿಸಿದೆ.


'ನಿನ್ನ ಬಗ್ಗೆ ಇರುವುದು ಬರಿ ಪ್ರೀತಿಯಲ್ಲ, ಅದೊಂದು ಹುಚ್ಚುತನ'


ಇದು ಬದುಕಿನ ಪಾಠ


ಹಳ್ಳಿಯ ಹಸಿರಿನ ಜೊತೆಗೆ ಶುರುವಾಗುವ ಕಥೆ ಸಿಟಿಗೆ ಬಂದು ಸೇರಿ, ಬದುಕಿನ ಹಾಗೂ ಪ್ರೀತಿ ಬಗ್ಗೆ ಪಾಠ ಹೇಳುತ್ತದೆ. ಚಿತ್ರದಲ್ಲಿ ಸುಜಯ್ ಶಾಸ್ತ್ರಿ ಪಂಚಿಂಗ್‌ ಡೈಲಾಗ್‌ಗೆ ನಗಲು ಇರದೆ ಸಾಧ್ಯವೇ ಇಲ್ಲ. ‘ಸ್ಲೀಪಿಂಗ್‌ ಪ್ಯಾರಲಿಸಿಸ್‌ʼ(Sleep paralysis) ಎಂಬ ಅಪರೂಪದ ಕಾಯಿಲೆ ಸುತ್ತ ಸುತ್ತುವ ಕಥೆಗೆ ಕ್ಲೈಮ್ಯಾಕ್ಸ್‌ ದೊಡ್ಡ ಟ್ವಿಸ್ಟ್‌ ನೀಡುತ್ತದೆ.


Achyuth Kumar) ಭರ್ಜರಿ ಯಶಸ್ಸು ಗಳಿಸಿದ್ದು, ಒಂದಿಡೀ ಕುಟುಂಬ ಕುಳಿತು ನೋಡಬಹುದಾದ ಮತ್ತೊಂದು ಕನ್ನಡ ಸಿನಿಮಾ ‘ಫೋರ್‌ ವಾಲ್ಸ್‌ʼ ಎನ್ನಬಹುದು.


ಇದನ್ನೂ ಓದಿ: ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್ ಬಗ್ಗೆ ಜಗ್ಗೇಶ್‌ ಭಾವನಾತ್ಮಕ ಬರಹ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.