RRR ತೆಲುಗು ಸಿನಿಮಾ : ಗೋಲ್ಡನ್ ಪ್ರಶಸ್ತಿ ಬಂದ್ಮೇಲೆ ಹೀಗ್ಯಾಕಂದ್ರು ರಾಜಮೌಳಿ..!
ಸ್ಟಾರ್ ಡೈರೆಕ್ಟರ್ ಎಸ್. ಎಸ್. ರಾಜಮೌಳಿ ಚಿತ್ರ ಆರ್‌ಆರ್‌ಆರ್ ಭಾರತ ಮತ್ತು ವಿದೇಶಗಳಲ್ಲಿಯೂ ಅದ್ಬುತ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ. ಕಳೆದ ವಾರವಷ್ಟೇ, ಈ ಸಿನಿಮಾದ ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ಸ್ 2023 ಅತ್ಯುತ್ತಮ ಒರಿಜಿನಲ್ ಸಾಂಗ್ ಎಂಬ ಪ್ರಶಸ್ತಿ ಬಂದಿತ್ತು. ಈ ಮೂಲಕ ರಾಜಮೌಳಿ ಸಿನಿಮಾ ಇತಿಹಾಸವನ್ನು ನಿರ್ಮಿಸಿತು. ಅಲ್ಲದೆ, ಆಸ್ಕರ್ ಅಂಗಳದಲ್ಲಿಯೂ ಈ ಸಿನಿಮಾದ ಹೆಸರು ಕೇಳಿ ಬರುತ್ತಿದೆ.
SS Rajamouli RRR : ಸ್ಟಾರ್ ಡೈರೆಕ್ಟರ್ ಎಸ್. ಎಸ್. ರಾಜಮೌಳಿ ಚಿತ್ರ ಆರ್‌ಆರ್‌ಆರ್ ಭಾರತ ಮತ್ತು ವಿದೇಶಗಳಲ್ಲಿಯೂ ಅದ್ಬುತ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ. ಕಳೆದ ವಾರವಷ್ಟೇ, ಈ ಸಿನಿಮಾದ ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ಸ್ 2023 ಅತ್ಯುತ್ತಮ ಒರಿಜಿನಲ್ ಸಾಂಗ್ ಎಂಬ ಪ್ರಶಸ್ತಿ ಬಂದಿತ್ತು. ಈ ಮೂಲಕ ರಾಜಮೌಳಿ ಸಿನಿಮಾ ಇತಿಹಾಸವನ್ನು ನಿರ್ಮಿಸಿತು. ಅಲ್ಲದೆ, ಆಸ್ಕರ್ ಅಂಗಳದಲ್ಲಿಯೂ ಈ ಸಿನಿಮಾದ ಹೆಸರು ಕೇಳಿ ಬರುತ್ತಿದೆ.
ನಿರ್ದೇಶಕ ಎಸ್‌ಎಸ್ ರಾಜಮೌಳಿ ಹಾಲಿವುಡ್ ವಲಯದಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ ಆರ್‌ಆರ್‌ಆರ್ ಚಲನಚಿತ್ರವನ್ನು ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಆರ್‌ಆರ್‌ಆರ್ ಅನ್ನು ಇತ್ತೀಚೆಗೆ ಅಮೆರಿಕದ ಡೈರೆಕ್ಟರ್ಸ್ ಗಿಲ್ಡ್‌ಗಾಗಿ ಪ್ರದರ್ಶಿಸಲಾಯಿತು. ಈ ವೇಳೆ ರಾಜಮೌಳಿ ನೀಡಿದ್ದ ಹೇಳಿಕೆ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿತ್ತು. ಅದಕ್ಕೆ ಪರ ಮತ್ತು ವಿರೋಧ ಪ್ರತಿಕ್ರಿಯೆ ಬಂದಿದ್ದವು. ಇದೀಗ, ಬಿಗ್ ಬಾಸ್ 13 ಖ್ಯಾತಿಯ ದೇವೋಲೀನಾ ಭಟ್ಟಾಚಾರ್ಯ ಕೂಡಾ ರಾಜಮೌಳಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: Kranti : ಡೋಂಟ್ ಮೆಸ್ ವಿತ್ ಹಿಮ್.. 'ಕ್ರಾಂತಿ'ಯ ಮಾಸ್ ಹಾಡಿಗೆ ಫ್ಯಾನ್ಸ್ ಫಿದಾ!
ಸಂದರ್ಶನವೊಂದರಲ್ಲಿ ರಾಜಮೌಳಿ ಆರ್‌ಆರ್‌ಆರ್ ಸಿನಿಮಾ ಬಾಲಿವುಡ್ ಸಿನಿಮಾ ಅಲ್ಲ, ಅದು ತೆಲುಗು ಸಿನಿಮಾ, ಅಂತ ಹೇಳಿದ್ದರು. ಈ ಹೇಳಿಕೆಯನ್ನು ಕೆಲವುರ ಒಪ್ಪಿಕೊಂಡರೆ, ಇನ್ನೂ ಕೆಲವರು ಭಾರತೀಯ ಸಿನಿಮಾ ಎಂದು ಹೇಳಿದ್ದರು. ಇದೀಗ ಬಿಗ್ ಬಾಸ್ 13 ಖ್ಯಾತಿಯ ದೇವೋಲೀನಾ ಭಟ್ಟಾಚಾರ್ಜಿ ಮಾತನಾಡಿದ್ದು, ಆರ್‌ಆರ್‌ಆರ್ ತೆಲುಗು ಚಲನಚಿತ್ರವಾಗಿದ್ದೂ ಸಹ ಭಾರತಕ್ಕೆ ಸೇರಿದ್ದು ಎಂಬುದು ಸತ್ಯ ಎಂದಿದ್ದಾರೆ.
ಅಲ್ಲದೆ, ಬಾಲಿವುಡ್ ಮತ್ತು ಟಾಲಿವುಡ್ ಇಂಡಸ್ಟ್ರಿ ಪ್ರತ್ಯೇಕ ಎಂಬುದು ಎಲ್ಲರಿಗೂ ತಿಳಿದಿದೆ. ಅಲ್ಲದೆ, ಇನ್ನೊಬ್ಬರ ಖುಷಿಯಲ್ಲಿ ಭಾಗಿಯಾಗುವುದು ಈ ದುನಿಯಾದಲ್ಲಿ ಕಷ್ಟವಾಗಿದೆ ಅಂತ ರಾಜಮೌಳಿ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ಡೈರೆಕ್ಟರ್ಸ್ ಗಿಲ್ಡ್ ಆಫ್ ಅಮೇರಿಕಾಗಾಗಿ ನಡೆದ ಪ್ರದರ್ಶನದಲ್ಲಿ, ರಾಜಮೌಳಿ ಸಂಗೀತದ ಬಗ್ಗೆ ಮಾತನಾಡುವಾಗ, ಆರ್‌ಆರ್‌ಆರ್ ಬಾಲಿವುಡ್ ಚಿತ್ರವಲ್ಲ, ಭಾರತದಿಂದ ಬಂದ ತೆಲುಗು ಚಿತ್ರ ಎಂದು ಹೇಳಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.