ರಶ್ಮಿಕಾ ಸಿನಿಮಾ ಹಾಡಿಗೆ ತಾಯಿ ಗರ್ಭದಲ್ಲಿದ್ದ ಮಗು ಡಾನ್ಸ್‌..! ವಿಡಿಯೋ ನೋಡಿ

ಟಾಲಿವುಡ್‌ ಸ್ಟಾರ್‌ ದಳಪತಿ ವಿಜಯ್ ಹಾಗೂ ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ ನಟನೆಯ ʼವಾರಿಸುʼ ಸಿನಿಮಾ ಥಿಯೇಟರ್‌ಗಳಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. ಸಂಕ್ರಾಂತಿ ಸಾಲು ಸಾಲು ರಜೆಗಳಿಂದಾಗಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಇದೀಗ ವಾರಿಸು ಸಿನಿಮಾಗೆ ಸಂಬಂಧಪಟ್ಟ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಅಚ್ಚರಿ ಸೃಷ್ಟಿಸುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಶಾಕ್‌ ಆಗುತ್ತಿದ್ದಾರೆ.

Written by - Krishna N K | Last Updated : Jan 15, 2023, 04:33 PM IST
  • ವಿಜಯ್‌ ರಶ್ಮಿಕಾ ನಟನೆಯ ʼವಾರಿಸುʼ ಸಿನಿಮಾ ಥಿಯೇಟರ್‌ಗಳಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ.
  • ಈ ಸಿನಿಮಾಗೆ ಸಂಬಂಧಪಟ್ಟ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಅಚ್ಚರಿ ಸೃಷ್ಟಿಸುತ್ತಿದೆ.
  • ʼರಂಜಿತಮೇʼ ಹಾಡಿಗೆ ಗರ್ಭದಲ್ಲಿರುವ ಮಗುವೊಂದು ಡಾನ್ಸ್‌ ಮಾಡಿರುವ ವಿಡಿಯೋ ವೈರಲ್‌ ಆಗಿದೆ.
ರಶ್ಮಿಕಾ ಸಿನಿಮಾ ಹಾಡಿಗೆ ತಾಯಿ ಗರ್ಭದಲ್ಲಿದ್ದ ಮಗು ಡಾನ್ಸ್‌..! ವಿಡಿಯೋ ನೋಡಿ title=

Rashmika mandanna Ranjithame song : ಟಾಲಿವುಡ್‌ ಸ್ಟಾರ್‌ ದಳಪತಿ ವಿಜಯ್ ಹಾಗೂ ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ ನಟನೆಯ ʼವಾರಿಸುʼ ಸಿನಿಮಾ ಥಿಯೇಟರ್‌ಗಳಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. ಸಂಕ್ರಾಂತಿ ಸಾಲು ಸಾಲು ರಜೆಗಳಿಂದಾಗಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಇದೀಗ ವಾರಿಸು ಸಿನಿಮಾಗೆ ಸಂಬಂಧಪಟ್ಟ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಅಚ್ಚರಿ ಸೃಷ್ಟಿಸುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಶಾಕ್‌ ಆಗುತ್ತಿದ್ದಾರೆ.

ಹೌದು.. ವಾರಿಸು ಸಿನಿಮಾದಲ್ಲಿ ಸಖತ್‌ ಹಿಟ್‌ ಆಗಿದ್ದ ʼರಂಜಿತಮೇʼ ಹಾಡಿಗೆ ಗರ್ಭದಲ್ಲಿರುವ ಮಗುವೊಂದು ಡಾನ್ಸ್‌ ಮಾಡಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಟಾಕ್‌ ಅಪ್‌ ದಿ ಡೇ ಆಗಿದೆ. ರಶ್ಮಿಕಾ ಮತ್ತು ವಿಜಯ್‌ ಕಾಂಬಿನೇಷನ್‌ನಲ್ಲಿ ಬಂದ ಈ ಹಾಡು ʼವಾರಿಸುʼ ಚಿತ್ರದ ಪ್ಲಸ್ ಪಾಯಿಂಟ್ ಅಂದ್ರೆ ತಪ್ಪಾಗಲ್ಲ. ಬಿಡುಗಡೆಯಾದ ದಿನದಿಂದಲೂ ಯೂಟ್ಯೂಬ್‌ನಲ್ಲಿ ಈ ಹಾಡು ಸಖತ್‌ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ʼಪ್ರಾಚೀನ ಹಿಂದೂ ಮಹಿಳೆಯರು ಹೀಗೆಯೇ ಬಟ್ಟೆ ಧರಿಸುತ್ತಿದ್ದರುʼ

ಅಲ್ಲದೆ, ಸೋಷಿಯಲ್‌ ಮೀಡಿಯಾದಲ್ಲಿ ಎಲ್ಲಿ ನೋಡಿದ್ರೂ ಈ ಹಾಡಿನ ವಿಡಿಯೋಗಳೇ ಕಾಣಿಸುತ್ತಿದ್ದವು. ಇನ್‌ಸ್ಟಾಗ್ರಾಮ್‌ ಸೇರಿದಂತೆ ಸೋಷಿಯಲ್‌ ಪ್ಲಾಟ್‌ಪಾರ್ಮ್‌ನಲ್ಲಿ ರಂಜಿತಮೇ ಹಾಡಿನ ರೀಲ್ಸ್‌ ಸದ್ದು ಮಾಡುತ್ತಿದ್ದವು. ಈ ಹಾಡಿನಲ್ಲಿ ರಶ್ಮಿಕಾ ಲುಕ್‌ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ಇದೀಗ, ಆಶ್ಚರ್ಯ ಎಂಬಂತೆ ರಂಜಿತಮೇ ಹಾಡಿಗೆ ತಾಯಿ ಗರ್ಭದಲ್ಲಿದ್ದ ಮಗು ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ಇಂಟರ್‌ನೆಟ್‌ನಲ್ಲಿ ಟ್ರೆಂಡಿಂಗ್‌ ಕ್ರಿಯೇಟ್‌ ಮಾಡುತ್ತಿದೆ.

ಈ ವೈರಲ್ ವಿಡಿಯೋ ನೋಡಿ ಸ್ವತಃ ಸಂಗೀತ ನಿರ್ದೇಶಕ ಎಸ್‌. ತಮನ್ ಕೂಡ ಸ್ಪಂದಿಸಿದ್ದಾರೆ. ಅಲ್ಲದೆ, ಈ ವಿಡಿಯೋ ಶೇರ್‌ ಮಾಡಿಕೊಂಡು, ದೈವಾತ್ಮ ಅನುಭವ... ಕ್ಯೂಟ್‌ ಅಂತ ಶಿರ್ಷಿಕೆ ಬರೆದುಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಮಹಿಳೆ ʼರಂಜಿತಮೇʼ ಸಾಂಗ್‌ ಅವರ ಫ್ಯಾಮಿಲಿಗೆ ಬಹಳ ಹತ್ತಿರವಾಗಿದೆ ಅಂತ ಹೇಳಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇನ್ನು ವಿಡಿಯೋದಲ್ಲಿ ರಂಜಿತಮೇ ಹಾಡಿಗೆ ಬೇಬಿ ಬಂಪ್‌ ಮಾಡುತ್ತಿರುವುದನ್ನು ಕಾಣಬಹುದು.

 

 

Trending News